More

    ಕನ್ನಡಿಗ ಕೆಎಲ್ ರಾಹುಲ್‌ಗೆ ಟೀಮ್ ಇಂಡಿಯಾ ಉಪನಾಯಕರಾಗಿ ಬಡ್ತಿ, ಆಸೀಸ್​ ಪ್ರವಾಸಕ್ಕೆ ಹೊಸ ಹೊಣೆ

    ನವದೆಹಲಿ: ಐಪಿಎಲ್ 13ನೇ ಆವೃತ್ತಿಯ ನಂತರ ನಡೆಯಲಿರುವ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತದ ಮೂರೂ ಪ್ರಕಾರದ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಮಿಂಚುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಭಾರತದ ಏಕದಿನ ಮತ್ತು ಟಿ20 ತಂಡಗಳ ಉಪನಾಯಕರಾಗಿ ಬಡ್ತಿ ಪಡೆದಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಜತೆಗೆ ಅವರು ಟೆಸ್ಟ್ ತಂಡಕ್ಕೂ ಮರಳಿದ್ದಾರೆ. ಕನ್ನಡಿಗ ಸುನೀಲ್ ಜೋಶಿ ಸಾರಥ್ಯದ ಹೊಸ ಆಯ್ಕೆ ಸಮಿತಿ ಆರಿಸಿದ ಮೊದಲ ತಂಡ ಇದಾಗಿದ್ದು, ಮಯಾಂಕ್ ಅಗರ್ವಾಲ್ ಮತ್ತು ಮನೀಷ್ ಪಾಂಡೆ (ಟಿ20, ಏಕದಿನಕ್ಕೆ ಮಾತ್ರ) ತಂಡದಲ್ಲಿರುವ ಮತ್ತಿಬ್ಬರು ಕನ್ನಡಿಗರಾಗಿದ್ದಾರೆ.

    ನವೆಂಬರ್‌ನಿಂದ ಜನವರಿವರೆಗೆ ನಡೆಯಲಿರುವ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ, 3 ಟಿ20 ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಸೀಮಿತ ಓವರ್ ತಂಡದ ಹಿಂದಿನ ಉಪನಾಯಕ ರೋಹಿತ್ ಶರ್ಮ ಐಪಿಎಲ್‌ನಲ್ಲಿ ಗಾಯಗೊಂಡಿರುವುದರಿಂದ ಯಾವುದೇ ಪ್ರಕಾರದ ತಂಡದಲ್ಲಿ ಸ್ಥಾನ ಪಡೆದಿಲ್ಲ. ರೋಹಿತ್ ಶರ್ಮ ಗೈರಿನಿಂದ ರಾಹುಲ್‌ಗೆ ನಾಯಕ ವಿರಾಟ್ ಕೊಹ್ಲಿ ಅವರಿಗೆ ತಂಡ ಮುನ್ನಡೆಸುವಲ್ಲಿ ಸಹಾಯ ಮಾಡುವ ಅವಕಾಶ ಒಲಿದುಬಂದಿದೆ. ಇದರೊಂದಿಗೆ ರಿಷಭ್ ಪಂತ್ ಸೀಮಿತ ಓವರ್ ತಂಡದ ವಿಕೆಟ್ ಕೀಪರ್ ಸ್ಥಾನದಿಂದ ಕೊಕ್ ಪಡೆದಿದ್ದಾರೆ. 2021ರ ಟಿ20 ವಿಶ್ವಕಪ್‌ವರೆಗೂ ರಾಹುಲ್ ಸೀಮಿತ ಓವರ್ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುತ್ತಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಟಿ20 ತಂಡಕ್ಕೆ ಸಂಜು ಸ್ಯಾಮ್ಸನ್ 2ನೇ ವಿಕೆಟ್ ಕೀಪರ್ ಆಗಿದ್ದಾರೆ.

    ಟಿ20 ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ಉಪನಾಯಕ, ವಿ. ಕೀ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿ.ಕೀ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ವರುಣ್ ಚಕ್ರವರ್ತಿ.

    ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮಾನ್ ಗಿಲ್, ಕೆಎಲ್ ರಾಹುಲ್ (ಉಪನಾಯಕ, ವಿ.ಕೀ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

    ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಪೃಥ್ವಿ ಷಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ಶುಭಮಾನ್ ಗಿಲ್, ವೃದ್ಧಿಮಾನ್ ಸಾಹ (ವಿ.ಕೀ), ರಿಷಭ್ ಪಂತ್ (ವಿ.ಕೀ), ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಮೊಹಮದ್ ಸಿರಾಜ್.
    ಹೆಚ್ಚುವರಿ ಬೌಲರ್‌ಗಳು: ಕಮಲೇಶ್ ನಾಗರಕೋಟಿ, ಕಾರ್ತಿಕ್ ತ್ಯಾಗಿ, ಇಶಾನ್ ಪೊರೆಲ್, ಟಿ. ನಟರಾಜನ್.

    ವೈಯಕ್ತಿಕ ನೋವಿನ ನಡುವೆ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಕ್ರಿಕೆಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts