More

    ಕಿಮ್ ಜಾಂಗ್​ ಉನ್​ ಬದುಕಿಲ್ಲ, ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನುತ್ತಿವೆ ವರದಿಗಳು; ಗಾಬರಿಯಿಂದ ಅಂಗಡಿ, ಮಾಲ್​ಗಳಿಗೆ ಮುಗಿಬೀಳುತ್ತಿದ್ದಾರೆ ಜನರು

    ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್​ ಬದುಕಿಲ್ಲ. ಅವರು ಮೃತಪಟ್ಟಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂಬ ವರದಿ ದಟ್ಟವಾಗುತ್ತಿದೆ. ಅಲ್ಲಿನ ಜನರೂ ಕೂಡ ಸರ್ವಾಧಿಕಾರಿ ನಿಧನನಾಗಿದ್ದಾನೆ ಎಂದೇ ನಂಬಿಕೊಂಡು ದುಃಖ ಪಡುತ್ತಿದ್ದಾರೆ.

    ಸರ್ವಾಧಿಕಾರಿ ಮೃತಪಟ್ಟ ನಂತರ ನಡೆಯುವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗಬಹುದು ಎಂದು ಪ್ಯೊಂಗ್ಯಾಂಗ್ ನ ನಿವಾಸಿಗಳೆಲ್ಲ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಬಹುತೇಕ ಮಾಲ್​ಗಳಲ್ಲಿ ಜನರು ತುಂಬಿದ್ದಾರೆ. ನಿತ್ಯ ಬಳಕೆಯ ವಸ್ತುಗಳೊಂದಿಗೆ, ಮದ್ಯ, ವಿದ್ಯುತ್​ ಉಪಕರಣಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

    ಕಿಮ್ ಜಾಂಗ್​ ಉನ್​ ಸಾವಿನ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತವೆ. ಈ ವೇಳೆ ವಿದ್ಯುತ್ ಪೂರೈಕೆಯಲ್ಲಿ ಕಡಿತ ಆಗಬಹುದು. ಹಾಗೇ ಬೇಕಾದ ವಸ್ತುಗಳೂ ಸಿಗದೆ ಇರಬಹುದು ಎಂಬ ಆತಂಕದಲ್ಲಿದ್ದಾರೆ ಅಲ್ಲಿನ ಜನ.

    ಅಷ್ಟೇ ಅಲ್ಲದೆ, ಅಲ್ಲಿ ಹೆಲಿಕಾಪ್ಟರ್​ಗಳೆಲ್ಲ ಕೆಳಗೆ ಹಾರಾಡುತ್ತಿವೆ. ಉತ್ತರ ಕೊರಿಯಾದಿಂದ ಉತ್ತರ ಚೀನಾಕ್ಕೆ ಸಂಚರಿಸುವ ರೈಲು ಕೂಡ ತಾತ್ಕಾಲಿಕವಾಗಿ ಬಂದ್​ ಆಗಿದೆ.

    ಕಿಮ್​ ಜಾಂಗ್​ ಉನ್​ ಅವರು ಏಪ್ರಿಲ್​ 11ರಿಂದಲೂ ದೇಶದಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ಅವರ ಖಾಸಗಿ ರೈಲು ಅವರದ್ದೇ ಮಾಲೀಕತ್ವದ ರೈಲು ನಿಲ್ದಾಣದ ವೊನ್ಸನ್ ಕಾಂಪೌಂಡ್​ ಬಳಿ ಕಳೆದ ಮಂಗಳವಾರದಿಂದಲೂ ನಿಂತಿದೆ ಎನ್ನಲಾಗಿದೆ. ಅದರ ಸ್ಯಾಟಲೈಟ್​ ಚಿತ್ರವೊಂದನ್ನು ಬಿಡುಗಡೆ ಮಾಡಲಾಗಿದೆ. (ಏಜೆನ್ಸೀಸ್)

    KimJoeng Un ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಏಪ್ರಿಲ್ 27, 2020

    ಕಿಮ್​ ಜಾಂಗ್​ ಉನ್ ಬದುಕಿದ್ದಾರೋ ಇಲ್ಲವೊ? ಭದ್ರತಾ ಸಲಹೆಗಾರ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts