More

    ವಿಜೃಂಭಣೆಯ ಕಿಕ್ಕೇರಮ್ಮ ಗ್ರಾಮೀಣ ದಸರಾ

    ಕಿಕ್ಕೇರಿ: ಪಟ್ಟಣದಲ್ಲಿ ಕಿಕ್ಕೇರಮ್ಮ ದಸರಾ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

    ಜೋಡಿಗ್ರಾಮಗಳಾದ ಕಿಕ್ಕೇರಿ-ಲಕ್ಷ್ಮೀಪುರ ಗ್ರಾಮಗಳಲ್ಲಿ ದೇವಿಯ ಬೆಳ್ಳಿ ಸಾರೋಟಿನ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾದು ಕುಳಿತಿದ್ದರು.

    ಹಬ್ಬದ ಮುನ್ನ ದಿನವಾದ ಆಯುಧಪೂಜೆಯಲ್ಲಿ ದೇವಿಯ ಆಯುಧ, ಆಭರಣಗಳನ್ನು ಅಮಾನಿಕೆರೆಯಲ್ಲಿ ಪುಣ್ಯಸ್ನಾನದೊಂದಿಗೆ ಶುಚಿಗೊಳಿಸಲಾಯಿತು. ಮೂಲಗುಡಿಯ ದೇವಿಗೆ ಪಂಚಾಮೃತ ಅಭಿಷೇಕ, ಕುಂಕಮಾರ್ಚನೆ, ವಿವಿಧ ಪೂಜೆಗಳು ನಡೆದವು. ನರಸಿಂಹಸ್ವಾಮಿ ದೇಗುಲದಲ್ಲಿದ್ದ ಉತ್ಸವಮೂರ್ತಿ ದೇವಿಗೆ ವಿವಿಧ ಜರತಾರಿ ವಸ್ತ್ರ, ಆಭರಣ, ಪುಷ್ಪಗಳಿಂದ ಶೃಂಗರಿಸಲಾಗಿತ್ತು. ನರಸಿಂಹಸ್ವಾಮಿ ಗುಡಿಯಿಂದ ದೇವಿಯ ಮೆರವಣಿಗೆ ಸೋಬಾನೆ ಪದ, ಮಂಗಳವಾದ್ಯ, ಜಯಘೋಷದೊಂದಿಗೆ ಮೆರವಣಿಗೆ ಮಾಡಲಾಯಿತು.

    ಕೆ.ಎಸ್.ನರಸಿಂಹಸ್ವಾಮಿ ಬೀದಿ, ರಥಬೀದಿ ಮೂಲಕ ಸಾಗಿ ಲಕ್ಷ್ಮೀಪುರ ಗ್ರಾಮಕ್ಕೆ ಮೆರವಣಿಗೆ ಸಾಗಿತು. ಲಕ್ಷ್ಮೀಪುರ ಗ್ರಾಮಸ್ಥರು ಉಪವಾಸ ವ್ರತಾಚರಣೆ ಮಾಡಿ ದೇವಿಯ ಬರುವಿಕೆಯನ್ನು ಕಾದು ಕುಳಿತು ತಮ್ಮ ಹರಕೆ ಒಪ್ಪಿಸಿದರು. ಲಕ್ಷ್ಮೀಪುರ ಗ್ರಾಮದ ಹೊರವಲಯದಲ್ಲಿರುವ ಮಹಾನವಮಿ ದಿಬ್ಬದ ಬಳಿಗೆ ದೇವಿಯ ಮೆರವಣಿಗೆ ಸಾಗಿತು. ಅರ್ಚಕರು ದೇವಿಯನ್ನು ನವಮಿ ದಿಬ್ಬದಲ್ಲಿನ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜೆಗಳನ್ನು ನೆರವೇರಿಸಿದರು.

    ದಿಬ್ಬದ ಬಳಿ ಇರುವ ಶಮಿವೃಕ್ಷವನ್ನು ಛೇದಿಸಿ ಶಮಿಪತ್ರೆಯಿಂದ ದೇವಿಯನ್ನು ಪೂಜಿಸಲಾಯಿತು. ಭಕ್ತರಿಗೆ ದೇವಿಯ ಪ್ರಸಾದವಾಗಿ ಶಮಿಪತ್ರೆಯನ್ನು ವಿತರಿಸಲಾಯಿತು.

    ದೇವಿ ವಠಾರವಾದ ಬೂನಾಸಿ, ಮಾರಮ್ಮ, ದೊಡ್ಡಹಟ್ಟಿ, ಕೆಂಚಮ್ಮದ ಮುಖಂಡರು, ಭಕ್ತರು, ಗ್ರಾಮ ಮುಖಂಡರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts