More

    ಕೆರಗೋಡಿನಲ್ಲಿ ಮಹಿಳೆಯರ ಮೇಲೆ ಹಲ್ಲೆ ಖಂಡನೀಯ

    ಉಡುಪಿ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮ ಪಂಚಾಯಿತಿ ಅನುಮತಿ ಪಡೆದು ಖಾಸಗಿ ಟ್ರಸ್ಟ್​ ಮಾಡಿ, ಧ್ವಜ ಸ್ತಂಭ ರಚಿಸಿ ಹನುಮಧ್ವಜ ಹಾರಿಸಿದ್ದಾರೆ. ಇದನ್ನು ತೆರವುಗೊಳಿಸುವ ಸಂದರ್ಭ ಮಹಿಳೆಯರು ಮಕ್ಕಳನ್ನು ನೋಡದೆ ಲಾಠಿಚಾರ್ಜ್​ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮನೆ& ಮನೆಯಲ್ಲಿ ಧ್ವಜ ಹಾರಿಸ್ತೇನೆ. ಧೈರ್ಯ ಇದ್ದರೆ ತಡೆಯಿರಿ ರಾಮ ಭಕ್ತರಿಗೂ, ಟಿಪ್ಪು ಭಕ್ತರಿಗೂ ನಡುವಿನ ಹೋರಾಟ ಇದು ಎಂದು ವಿಧಾನ ಪರಿಷತ್​ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿದ್ದರೆ ಕಾನೂನು ನಿಯಮ ಪಾಲಿಸಿ ನೋಟೀಸ್​ ಕೊಡಬೇಕಿತ್ತು. ಅರ್ಧ ರಾತ್ರಿಗೆ ಧ್ವಜ ಇಳಿಸಿರೋದು ಹಿಂದೂಗಳಿಗೂ ರಾಮಭಕ್ತರಿಗೆ ಮಾಡಿದ ಅವಮಾನ ಎಂದು ಹೇಳಿದರು.

    ಸಿಎಂ ಸಿದ್ದರಾಮಯ್ಯನವರು ರಾಷ್ಟ್ರಪತಿಯವರಿಗೆ ಏಕವಚನ ಪ್ರಯೋಗಿಸಿ- ಸ್ಪಷ್ಟಿಕರಣ ಕೊಟ್ಟಿದ್ದಾರೆ. ಕಾಂಗ್ರೆಸ್​ ನಾಯಕರಾದ ಸೋನಿಯಾ, ರಾಹುಲ್​ ಗಾಂಧಿಯನ್ನು ಏಕವಚನದಲ್ಲಿ ತಪ್ಪಿಯೂ ಕರೆಯುವುದಿಲ್ಲ. ಬುಡಕಟ್ಟು ಸಮುದಾಯದ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ಮಾತನಾಡುವುದು ಸರಿಯಲ್ಲ. ಹಿಂದೆ ಅಹಿಂದ ನಾಯಕ ಆಗಿದ್ದ ಸಿದ್ದರಾಮಯ್ಯ ಈಗ ಅಲ್ಪಸಂಖ್ಯಾತ ನಾಯಕ ಆಗಿದ್ದಾರೆ ಎಂದು ಟೀಕಿಸಿದರು.

    ಸಿದ್ದರಾಮಯ್ಯ ಸರ್ಕಾರದ ಶೈಲಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಕಾಂತರಾಜು ವರದಿಗೆ 150 ಕೋಟಿ ರೂ. ರ್ಖಚಾಗಿದೆ. ಸಮಾವೇಶ ಮಾಡಿ ವರದಿ ಅಂಗೀಕರಿಸುವ ಅವಶ್ಯಕತೆ ಇದೆಯಾ? ವರದಿ ಬಿಡುಗಡೆಗೆ ಪ್ರಚಾರದ ಅವಶ್ಯಕತೆ ಇಲ್ಲ ಎಂದು ಹೇಳಿದರು.

    ಹಿಂದುಳಿದ ಮಕ್ಕಳ ವಿದ್ಯಾರ್ಥಿ ವೇತನ, ಹಾಸ್ಟೆಲ್​ ಸ್ಥಗಿತ ಮಾಡಿ, ಸವಲತ್ತು ಕೊಡುತ್ತಿಲ್ಲ. ಅಲ್ಪಸಂಖ್ಯಾತರರಿಗೆ 10 ಸಾವಿರ ಕೋಟಿ ಬಿಡುಗಡೆ ಮಾಡುತ್ತಾರೆ. ಬರಕ್ಕೆ, ಹಿಂದುಳಿದ ದಲಿತರಿಗೆ ಯಾವ ಸವಲತ್ತು ಕೊಡುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಅಹಂಕಾರದ ಪರಾಕಾಷ್ಠೆ ಮುಟ್ಟಿದೆ ಎಂದರು.

    ರಾಜ್ಯದಲ್ಲಿ ಗ್ಯಾರೆಂಟಿ ಸಂಪೂರ್ಣ ವಿಫಲವಾಗಿದೆ. ಯುವನಿಧಿಗೆ ರಾಜ್ಯದಲ್ಲಿ ಅರ್ಹ 40 ಲಕ್ಷ ಯುವಕರಿದ್ದಾರೆ. ಫಲಾನುಭವಿಗಳನ್ನು 4 ಲಕ್ಷಕ್ಕೆ ಇಳಿಸಿ 500 ಕೋಟಿಗೆ ಸೀಮಿತ ಮಾಡಿದ್ದಾರೆ. ಯುವನಿಧಿಗೆ 10 ಸಾವಿರ ಕೋಟಿ ಮೀಸಲು ಇಡಬೇಕಿತ್ತು. ರಾಜ್ಯದಲ್ಲಿ 64 ಸಾವಿರ ಮಕ್ಕಳು ಹಾಸ್ಟೆಲ್​ ಇಲ್ಲದೆ ಮನೆಯಿಂದ ಓಡಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts