More

    ಶರಣರ ಅನುಭಾವದಿಂದ ಮನದ ಮೈಲಿಗೆ ಹೊಗುತ್ತದೆ: ಶಾಂತವೀರ ಶರಣರು

    ವಿಜಯವಾಣಿ ಸುದ್ದಿಜಾಲ ಗದಗ
    ಮಾನವನ ಮನದ ಮೈಲಿಗೆ ತೊಳೆಯಬೇಕಾದರೆ ಶರಣರ ಅನುಭಾದ ಅಮೃತವಾಣಿ ಆಲಿಸಿ ಅರಗಿಸಿ ಅಳವಡಿಸಿಕೊಳ್ಳಬೇಕು ಎಂದು ಬಳಗಾನೂರಿನ ಶಿವಶಾಂತವೀರ ಶರಣರು ಹೇಳಿದರು.
    ತಾಲೂಕಿನ ಹುಲಕೋಟಿಯ ಬೀರದೇವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಜರುಗಿದ 13 ನೇ ವರ್ಷದ ಕಾತಿರ್ಕೋತ್ಸವ, 136 ನೇ ಕನಕದಾಸರ ಜಯತೋತ್ಸವ ಹಾಗೂ 10 ನೇ ವರ್ಷದ ಹಾಲುಮತ ಪುರಾಣ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಸಮಾಜಕ್ಕಾಗಿ ಧರ್ಮಕ್ಕಾಗಿ ಸೇವೆಮಾಡಿದವರ ಹೆಸರು ಅಮರವಾಗುತ್ತದೆ. ಸಮಾಜ ಸೇವೆಯಲ್ಲಿ ಕೈಲಾದಷ್ಟು ತೋಡಗಿಸಿಕೊಳ್ಳಬೇಕು ಎಂದರು.
    ಉಪನ್ಯಾಸ ಡಾ. ಶರಣಬಸವ ವೆಂಕಟಾಪೂರ ಮಾತನಾಡಿ, ದೇವತಾ ಮಾನವರಾಗಲು ಸಾಧನೆ, ಸಾಹಸ, ಸಂಯಮ ಬೇಕು. ಕಷ್ಠಗಳನ್ನು ಸವಾಲನ್ನಾಗಿಸಿಕೊಂಡು ಜೀವನ ನಡೆಸಬೇಕು. ನಾನು ಎಂಬುದನ್ನು ಅಳಿದರೆ ವೈಕುಂಟಕ್ಕೆ ಹೊಗಬಹುದು ಎಂದರು.
    ಗ್ರಾಮ ಹಿತಾಭಿವೃದ್ದಿ ಸಂದ ಅಧ್ಯ ಪಿ.ಕೆ.ಪಾಟೀಲರು ಕಾತಿರ್ಕೋತ್ಸವವನ್ನು ಉದ್ಘಾಟಿಸಿದರು. ಚಂದ್ರಪ್ಪ ಕರಿಕಟ್ಟಿ, ಮೋಹನ ದುರಗಣ್ಣವರ, ನಾಗರತ್ನ ಬಾಳಿಹಳ್ಳಿಮಠ, ಎಂ.ಜಿ ಹುಬ್ಬಳ್ಳಿ, ಶ್ರೀದೇವಿ ಕೋರಿ, ಜಿ. ಕೆ. ನಿಂಬನಾಯ್ಕರ, ಬಿ.ಎಸ್​.ಬ್ಯಾಡಗಿ, ಜಿ. ಆರ್​. ಓದುಗೌಡರ, ಯಲ್ಲಪ್ಪ ಹೊನ್ನಿನಾಯ್ಕರ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts