ಬಾಗಲಕೋಟೆ: ಮಧ್ಯಾಹ್ನ ನಡೆದ ಬೈಕ್ ಜಗಳ ರಾತ್ರಿ ಕೊಲೆಯಲ್ಲಿ ಅಂತ್ಯ!

bike
Published on

ಬಾಗಲಕೋಟೆ: ಮಧ್ಯಾಹ್ನ ನಡೆದ ಬೈಕ್ ಜಗಳ ರಾತ್ರಿ ಕೊಲೆಯಲ್ಲಿ ಅಂತ್ಯವಾಗಿದೆ. ಬೀಳಗಿ ತಾಲೂಕಿನ ಹೆಗ್ಗೂರ ಪುನರ್ ವಸತಿ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದೆ.

ಘಟನೆಯ ವಿವರ

ನಿನ್ನೆ ಮಧ್ಯಾಹ್ನ ಬೀಳಗಿ ಗಿರಿಸಾಗರ ಮಧ್ಯೆ ಸಿದ್ದು ಹಾಗೂ ಸಾಗರ ಬೈಕ್ ಅಪಘಾತವಾಗಿ ಸ್ಥಳದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು.

ಆ ನಂತರ ಸಾಗರ ಮನೆಗೆ ಹೋಗಿ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ನಂತರ ರಾತ್ರಿ ಬೈಕ್ ಮೇಲೆ ಸಿದ್ದು ಇಂಡಿ ಮನೆಗೆ ಬಂದ ಸಾಗರ, ಯಮನಪ್ಪ ಹಾಗೂ ಇನ್ನೋರ್ವ ಜಗಳವಾಡಿದ್ದಾರೆ. ಈ ವೇಳೆ ರಾಡ್ ನಿಂದ ಹೊಡೆದ ಪರಿಣಾಮ ಸಿದ್ದು ಇಂಡಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.

ಘಟನೆಯಲ್ಲಿ ಸಿದ್ದು ಕಡೆಯ ಇನ್ನೊಬ್ಬ ವ್ಯಕ್ತಿ ಮೇಲೂ ಹಲ್ಲೆಯಾಗಿದ್ದು, ಗಂಭೀರ ಗಾಯಗಳಾಗಿವೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ‌ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net