More

    ಕರ್ನಾಟಕ ಏಕೀಕರಣ ತ್ಯಾಗದ ಫಲ

    ಯಕ್ಕುಂಡಿ: ಹರಿದು ಹಂಚಿಹೋಗಿದ್ದ ಕರುನಾಡು ಅಸಂಖ್ಯಾತ ಜನರ ತ್ಯಾಗ, ಬಲಿದಾನದ ಫಲವಾಗಿ ಏಕೀಕರಣವಾಗಿದೆ. ಏಕೀಕರಣಕ್ಕೆ ನಾಗನೂರ ಡಾ.ಶಿವಬಸವ ಶ್ರೀಗಳ ಕೊಡುಗೆ ಅಪಾರ ಎಂದು ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

    ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ದೊರೆಸ್ವಾಮಿಮಠ ಬೈರನಹಟ್ಟಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸವದತ್ತಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಏಕೀಕರಣ ಯೋಧರ ಯಶೋಗಾಥೆ-5 ಕಾರ್ಯಕ್ರಮದ ಉಪನ್ಯಾಸ ಮಾಲಿಕೆ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಈ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಉಚಿತ ಪ್ರಸಾದ ನಿಲಯ ಸ್ಥಾಪಿಸಿದ ಕೀರ್ತಿ ಶಿವಬಸವ ಶ್ರೀಗಳಿಗೆ ಸಲ್ಲುತ್ತದೆ. ಕರ್ನಾಟಕ ಏಕೀಕರಣಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾನ್ ಸಂತರಾಗಿದ್ದಾರೆ ಎಂದರು. 1924ರಲ್ಲಿ ಬೆಳಗಾವಿಗೆ ಆಗಮಿಸಿದ್ದ ಮಹಾತ್ಮಗಾಂಧೀಜಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿರುವುದನ್ನು ಸ್ಮರಿಸಿದರು.

    ಉಪನ್ಯಾಸಕ ಮಹಾಂತೇಶ ಸಾಲಿಮಠ ಮಾತನಾಡಿ, ಯುವಜನರು ಕನ್ನಡವನ್ನು ಕಣ್ಣಿನಂತೆ ರಕ್ಷಿಸಬೇಕು ಎಂದ ಅವರು, ಕರ್ನಾಟಕ ಏಕೀಕರಣ ಹೋರಾಟದಲ್ಲಿ ನಾಗನೂರಿನ ಶಿವಬಸವ ಸ್ವಾಮೀಜಿ ನಡೆದುಬಂದ ದಾರಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

    ಸವದತ್ತಿ ತಾಲೂಕು ಕಸಾಪ ಅಧ್ಯಕ್ಷ, ಪ್ರಾಚಾರ್ಯ ವೈ.ಎಂ.ಯಾಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಆರ್.ಬಿ.ಚಿನವಾಲರ, ಪತ್ರಕರ್ತ ಚಂದ್ರಕಾಂತ ಸಂಗಟಿ, ರವಿ ಚೋಳಕೆ, ಉಪನ್ಯಾಸಕರಾದ ಎಸ್.ಸಿ.ಹೆಬ್ಬಳ್ಳಿ, ಮಾಲತೇಶ ಡಿ., ಚಿನ್ನಪ್ಪ ಕುಂಬಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts