More

    ಕರ್ನಾಟಕ ವಿಧಾನಸಭಾ ಚುನಾವಣೆ: 42 ಅಭ್ಯರ್ಥಿಗಳ ಕಾಂಗ್ರೆಸ್ 2ನೇ ಪಟ್ಟಿ ರಿಲೀಸ್​, ಕೋಲಾರ ಇನ್ನೂ ನಿಗೂಢ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್​ ಎರಡನೇ ಹಂತದಲ್ಲಿ ತನ್ನ 42 ಅಭ್ಯರ್ಥಿಗಳ ಪಟ್ಟಿಯನ್ನು ಇಂದು (ಏ.6) ಬಿಡುಗಡೆ ಮಾಡಿದೆ.

    ಕಳೆದ ಮಾರ್ಚ್​ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತ್ತು. ಒಟ್ಟು 166 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಈವರೆಗೆ ಬಿಡುಗಡೆ ಮಾಡಿದ್ದು, ಇನ್ನು 58 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ.

    ಇದನ್ನೂ ಓದಿ: ಬಿಜೆಪಿ ಪರ ಸುದೀಪ್ ಪ್ರಚಾರದ ಬಗ್ಗೆ ಕಾಂಗ್ರೆಸ್ ಲೇವಡಿ ವಿಚಾರ: ಬಿಎಸ್​ವೈ ತಿರುಗೇಟು

    ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇರುವುದರಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆಗೆ ಬಯಸಿದ್ದು, ಅದರ ಕುತೂಹಲವೂ ಹಾಗೇ ಇದೆ.

    ಎರಡನೇ ಪಟ್ಟಿಯಲ್ಲೂ ಮತ್ತೆ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಲಿಂಗಸೂಗುರು, ಕುಂದಗೋಳ, ಶಿಡ್ಲಘಟ್ಟ, ಪುಲಕೇಶಿ ನಗರ ಹಾಗೂ ಅಫಜಲಪುರದ ಹಾಲಿ ಶಾಸಕರ ಟಿಕೆಟ್ ಅನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಇನ್ನು ಮಾಜಿ ಸಚಿವರ ಟಿಕೆಟ್ ಖಚಿತವಾಗಿದೆ. ವಿನಯ್ ಕುಲಕರ್ಣಿ, ಕಿಮ್ಮನೆ ರತ್ನಾಕರ, ಎಚ್​. ಆಂಜನೇಯ, ಸಂತೋಷ್​ ಲಾಡ್​ಗೆ ಟಿಕೆಟ್​ ಹಂಚಿಕೆಯಾಗಿದೆ.

    ವಲಸಿಗರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಗುರುಮಿಟ್ಕಲ್​ಗೆ ಬಾಬುರಾವ್ ಚಿಂಚನಸೂರ್, ಮೊಳಕಾಲ್ಮೂರಿಗೆ ಎನ್.ವೈ ಗೋಪಾಲಕೃಷ್ಣ, ಚಿತ್ರದುರ್ಗಕ್ಕೆ ವೀರೇಂದ್ರ ಹಾಗೂ ಗುಬ್ಬಿ ಕ್ಷೇತ್ರಕ್ಕೆ ಎಸ್.ಆರ್. ಶ್ರೀನಿವಾಸ್​ಗೆ ಟಿಕೆಟ್​ ಖಚಿತವಾಗಿದೆ.

    Congress Candidates 2nd List

    Congress Candidates 2nd List

    ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ; ಮಧು, ಬಿಕೆಎಸ್, ಬೇಳೂರು ಟಿಕೆಟ್ ಅಂತಿಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts