More

    ಕಾರಟಗಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿಸಿದ ಪೊಲೀಸರು, ಪುರಸಭೆ ಅಧಿಕಾರಿಗಳು

    ಕಾರಟಗಿ: ಪಟ್ಟಣದಲ್ಲಿ ದಿನ ಬಳಕೆಯ ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ ಇತರ ಅಂಗಡಿಗಳನ್ನು ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳು ಗುರುವಾರ ಮುಚ್ಚಿಸಿದರು.

    ಪಟ್ಟಣದಲ್ಲಿ ಹಾಲು, ಹಣ್ಣು, ಕಿರಾಣಿ ಅಂಗಡಿಗಳು ಸೇರಿ ಬಟ್ಟೆ ಅಂಗಡಿ, ಹೋಟೇಲ್, ಎಲೆಕ್ಟ್ರಾನಿಕ್ಸ್ ಶಾಪ್ ಸೇರಿ ಇತರೆ ಅಂಗಡಿಗಳೂ ತೆರೆದಿದ್ದವು. ತರಕಾರಿ, ದಿನಸಿ, ಔಷಧ ಅಂಗಡಿಗಳನ್ನು ಹೊರತು ಪಡಿಸಿ ಉಳಿದವುಗಳನ್ನು ತೆರೆಯದಂತೆ ಆಯಾ ಮಾಲೀಕರಿಗೆ ಸೂಚಿಸಿದರು.

    ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಕರೊನಾ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಲ ಗಂಟೆಗಳಿಗೊಮ್ಮೆ ಸ್ಯಾನಿಟೈಸರ್ ಬಳಸಬೇಕು. ಆಗಾಗ ಕೈ ತೊಳೆಯಬೇಕು. ಅನಗತ್ಯವಾಗಿ ಹೊರಗಡೆ ಓಡಾಡಬಾರದು. ಕರೊನಾ ನಿಯಂತ್ರಣಕ್ಕಾಗಿ ಸರ್ಕಾರದ ಜತೆಗೆ ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ತಾಲೂಕು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಕುಂತಲಾ ಪಾಟೀಲ್, ಪಿಎಸ್‌ಐ ಅವಿನಾಶ ಕಾಂಬಳೆ, ಸಿಬ್ಬಂದಿ ಲಕ್ಕಪ್ಪ, ಭೀಮಣ್ಣ, ಪುರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts