More

    ಪ್ರಸನ್ನಾನಂದಪುರಿ ಶ್ರೀಗಳ ಹೋರಾಟ ಶ್ಲಾಘನೀಯ: ಶಾಸಕ ಬಸವರಾಜ ದಢೇಸುಗೂರು

    ಕಾರಟಗಿ: ವಾಲ್ಮೀಕಿ ನಾಯಕ ಸಮುದಾಯದ ಮೀಸಲಾತಿಗಾಗಿ ಪ್ರಸನ್ನಾನಂದಪುರಿ ಶ್ರೀಗಳು ನಡೆಸಿದ ಅವಿರತ ಹೋರಾಟ ಶ್ಲಾಘನೀಯವಾಗಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ಪಟ್ಟಣದ ಗುಡಿ ತಿಮ್ಮಪ್ಪ ಕ್ಯಾಂಪ್‌ನ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಾಂವಿಧಾನಿಕ ಹಕ್ಕಿಗಾಗಿ ಶ್ರೀಗಳು ನಡೆಸಿದ ಹೋರಾಟಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ. ಅಲ್ಲದೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಶ್ರೀಗಳು ಸಮುದಾಯಗಳ ಬೆನ್ನೆಲುಬು ಇದ್ದಂತೆ. ಮಹರ್ಷಿ ವಾಲ್ಮೀಕಿ ಜಾತ್ರೆಗೆ ನನ್ನ ಸಹಕಾರವಿದೆ ಎಂದರು.

    ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಶ್ರೀಗಳು ಕೇವಲ ಒಂದೇ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಲಿಲ್ಲ.ಎಸ್ಸಿ,ಎಸ್ಟಿ ಒಳಪಂಗಡಗಳ 151 ಜಾತಿಗಳ ಮೀಸಲಾತಿಗಾಗಿ 257 ದಿನಗಳ ಕಾಲ ನಿರಂತರ ಅಹೋರಾತ್ರಿ ಧರಣಿ ನಡೆಸಿ ಸರ್ಕಾರವನ್ನು ಮಣಿಸುವ ಮೂಲಕ ಮೀಸಲಾತಿ ಪಡೆದಿದ್ದಾರೆ. ಎಲ್ಲ ಸಮುದಾಯಗಳು ಶ್ರೀಗಳಿಗೆ ಸದಾ ಋಣಿಯಾಗಿವೆ ಎಂದರು.

    ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಾತ್ರೆಯ ಕರಪತ್ರ ಬಿಡುಗಡೆಗೊಳಿಸಲಾಯಿತು. ಪ್ರಮುಖರಾದ ಬಿ.ಶಿವರೆಡ್ಡಿ ನಾಯಕ, ಬಸವರಾಜ ಬಿಲ್ಗಾರ್, ಸಿದ್ದಪ್ಪ ಮೈಲಾಪುರ, ಹುಲುಗಪ್ಪ ಪಾಳೆ, ಫಕೀರಪ್ಪ ಕಾರಟಗಿ, ರಮೇಶ ನಾಯಕ, ಸುರೇಶ ಬೂದಗುಂಪಾ, ಹನುಮಂತಪ್ಪ ಕಾರಟಗಿ, ಶಿವನಗೌಡ ಸಿಂಗನಾಳ, ನಾಗನಗೌಡ ತೊಂಡಿಹಾಳ ಇತರರಿದ್ದರು.

    ಸಹಬಾಳ್ವೆಯಿಂದ ಜೀವನ ನಡೆಸಿ: ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಮೀಸಲಾತಿ ಹೋರಾಟವೇ ಸಾಕ್ಷಿ. ಎಲ್ಲ ಸಮುದಾಯಗಳು ಸಹಬಾಳ್ವೆಯಿಂದ ಬದುಕಬೇಕು. ಕರೊನಾ ಕಾರಣದಿಂದಾಗಿ ಎರಡು ವರ್ಷ ಸರಳವಾಗಿ ಜಾತ್ರೆ ನಡೆಸಲಾಯಿತು. ಈ ವರ್ಷ ಫೆ.8, 9ರಂದು ಅದ್ದೂರಿಯಾಗಿ ಜಾತ್ರೆ ನಡೆಯಲಿದ್ದು, ನೂತನ ರಥದ ಪ್ರಥಮ ರಥೋತ್ಸವ ನೆರವೇರಲಿದೆೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts