More

    ಕರಪಾವತಿ ಕೇಂದ್ರವನ್ನು ಸದುಪಯೋಗಿಸಿ

    ಹೂವಿನಹಡಗಲಿ: ಪಟ್ಟಣದ ನಾಗರಿಕರು ಬ್ಯಾಂಕ್ ಹಾಗೂ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಪುರಸಭೆ ಕಚೇರಿಯಲ್ಲಿಯೇ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯ ಕರಪಾವತಿ ಕೇಂದ್ರ ಆರಂಭಿಸಲಾಗಿದ್ದು, ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

    ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಹೋಟೆಲ್, ಟೈಲರ್ ಅಂಗಡಿ!

    ಪಟ್ಟಣದ ಪುರಸಭೆಯಲ್ಲಿ ಸೋಮವಾರ ತೆರಿಗೆ ಪಾವತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರು ಕರ ಪಾವತಿಗಾಗಿ ಪುರಸಭೆ ಕಚೇರಿ ಮತ್ತು ಬ್ಯಾಂಕಿನ ಮುಂದೆ ನಿಲ್ಲುವುದನ್ನು ತಪ್ಪಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕಾರಿಗಳ ಜತೆ ಚರ್ಚಿಸಿ ಕರಪಾವತಿ ಕೇಂದ್ರ ಆರಂಭಿಸಲಾಗಿದೆ.

    ಇ-ಸ್ವತ್ತು, ರೈತರ ಪಹಣಿಯಲ್ಲಿ ಇನಾಂ ಮತ್ತು ಫ್ಲ್ಯಾಗ್ ತೆಗೆದುಹಾಕುವ ಬಗ್ಗೆ ಜಿಲ್ಲಾಧಿಕಾರಿ ಬಳಿ ಚರ್ಚಿಸಿದ್ದು, ಫಲಾನುಭವಿಗಳ ಮನೆ ಬಾಗಿಲಿಗೆ ಪಹಣಿ ಮತ್ತು ಇ-ಸ್ವತ್ತು ತಲುಪಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

    ಪುರಸಭೆಯಲ್ಲಿ ಲಭ್ಯವಾಗುವ ಸೌಲಭ್ಯಗಳು ಹಾಗೂ ಇ-ಸ್ವತ್ತಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯುಳ್ಳ ಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿ, ಪುರಸಭೆಯಲ್ಲಿ ಶಾಸಕರ ಸಂಪರ್ಕ ಕೇಂದ್ರವನ್ನು ಆರಂಭಿಸಿದ್ದು ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಅರ್ಜಿಯನ್ನು ಸಲ್ಲಿಸಿದರೆ ನಮ್ಮ ಸಿಬ್ಬಂದಿಗಳು ಶೀಘ್ರವಾಗಿ ಸ್ಪಧಿಸುವರು ಎಂದರು.

    ಪಟ್ಟಣದ ಫಲಾನುಭವಿಗಳಿಗೆ ಫಾರಂ-3ಯನ್ನು ಸಾಂಕೇತಿಕವಾಗಿ ವಿತರಿಸಿದರು. ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ ಮಾತನಾಡಿ, ಪಟ್ಟಣದಲ್ಲಿ 11ಸಾವಿರ ಆಸ್ತಿಗಳಲ್ಲಿ 8ಸಾವಿರ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಶೇ.30ರಷ್ಟು ಆಸ್ತಿಗಳಿಗೆ ಮಾತ್ರ ಕರ ಪಾವತಿಯಾಗಿದೆ. ಸಾರ್ವಜನಿಕರು ಬೇಗ ಕರ ಪಾವತಿಸಿ ಅರ್ಜಿ ಸಲ್ಲಿಸಿದರೆ ಮನೆ ಬಾಗಿಲಿಗೆ ಇ-ಸ್ವತ್ತು ನೀಡಲಾಗುವುದು ಎಂದರು.

    ಪರಿಸರ ಅಭಿಯಂತರ ಅಮರೇಶ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಮಾರುತಿ, ಕಂದಾಯ ಅಧಿಕಾರಿ ಸಂತೋಷ್, ಪುರಸಭೆ ಸದಸ್ಯರಾದ ವಾರದ ಗೌಸ್ ಮೊದ್ದೀನ್, ಸೊಪ್ಪಿನ ಮಂಜುನಾಥ, ಯು.ಹನುಮಂತಪ್ಪ, ಮಾಜಿ ಅಧ್ಯಕ್ಷ ಸೆರೆಗಾರ ಅಂಜಿನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts