More

    ಕಪಿಲ್ ದೇವ್- ಸೈಯದ್ ಕಿರ್ಮಾನಿ ಜತೆಯಾಟದ ದಾಖಲೆ ಮುರಿದ ನೆದರ್ಲೆಂಡ್: ಲಂಕಾಗೆ ಮೊದಲ ಜಯ

    ಲಖನೌ: ಪ್ರಮುಖ ಆಟಗಾರರ ಅಲಭ್ಯತೆಯ ಹಿನ್ನಡೆಯಿಂದಾಗಿ ಸತತ ಸೋಲಿನ ಸುಳಿಗೆ ಸಿಲುಕಿದ್ದ ಮಾಜಿ ಚಾಂಪಿಯನ್ ಶ್ರೀಲಂಕಾ ಏಕದಿನ ವಿಶ್ವಕಪ್‌ನಲ್ಲಿ ಕೊನೆಗೂ ಮೊದಲ ಗೆಲುವಿನ ರುಚಿ ಕಂಡಿದೆ. ಬ್ಯಾಟರ್ ಸಧೀರ ಸಮರವಿಕ್ರಮ (91* ರನ್, 107 ಎಸೆತ, 7 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ, ನೆದರ್ಲೆಂಡ್ ವಿರುದ್ಧ 5 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ ಕುಸಲ್ ಮೆಂಡಿಸ್ ಬಳಗ ಸೋಲಿನ ಸರಪಳಿ ಕಳಚಿದೆ.

    ಏಕನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ನೆದರ್ಲೆಂಡ್, ದಿಲ್ಶಾನ್ ಮಧುಶಂಕ (49ಕ್ಕೆ4) ಹಾಗೂ ಕಸುನ್ ರಜಿತಾ (50ಕ್ಕೆ4) ದಾಳಿಗೆ ಸಿಲುಕಿ 91 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಬಳಿಕ ಸೈಬ್ರಾಂಡ್ ಎಂಗಲ್‌ಬ್ರೆಕ್ಟೃ್ (70 ರನ್, 82 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಲೋಗನ್ ವಾನ್ ಬೀಕ್ (59 ರನ್, 75 ಎಸೆತ, 1 ಬೌಂಡರಿ, 1 ಸಿಕ್ಸರ್) 7ನೇ ವಿಕೆಟ್‌ಗೆ ಪೇರಿಸಿದ 130 ರನ್‌ಗಳ ಬಲದಿಂದ 49.4 ಓವರ್‌ಗಳಲ್ಲಿ 262 ರನ್ ಪೇರಿಸಿ ಆಲೌಟ್ ಆಯಿತು. ಪ್ರತಿಯಾಗಿ ಲಂಕಾ, ಸಧೀರ ಸಮರ ವಿಕ್ರಮ ಹಾಗೂ ಪಥುಮ್ ನಿಸ್ಸಂಕಾ (54) ಬ್ಯಾಟಿಂಗ್ ಬಲದಿಂದ 48.2 ಓವರ್‌ಗಳಲ್ಲಿ 5 ವಿಕೆಟ್‌ಗೆ 263 ರನ್ ಪೇರಿಸಿ ಜಯಿಸಿತು.

    ನೆದರ್ಲೆಂಡ್: 49.4 ಓವರ್‌ಗಳಲ್ಲಿ 262 (ವಿಕ್ರಮ್‌ಜಿತ್ 4, ಮ್ಯಾಕ್ಸ್ ಒ ಡೌಡ್ 16, ಅಕೆರ್‌ಮನ್ 29, ಎಡ್ವರ್ಡ್ಸ್ 16, ಸೈಬ್ರಾಂಡ್ ಎಂಗಲ್‌ಬ್ರೆಕ್ಟೃ್ 70, ವಾನ್ ಬೀಕ್ 59, ದಿಲ್ಶಾನ್ ಮಧುಶಂಕ 49ಕ್ಕೆ4, ಕಸುನ್ ರಜಿತಾ 50ಕ್ಕೆ4).
    ಶ್ರೀಲಂಕಾ: 48.2 ಓವರ್‌ಗಳಲ್ಲಿ 5 ವಿಕೆಟ್‌ಗೆ 263 ( ಪಥುಮ್ 54, ಪೆರೇರಾ 5, ಮೆಂಡಿಸ್ 11, ಸಧೀರ 91, ಅಸಲಂಕಾ 44, ಧನಂಜಯ 30, ಆರ್ಯನ್ ದತ್ 44ಕ್ಕೆ3). ಪಂದ್ಯಶ್ರೇಷ್ಠ: ಸಧೀರ ಸಮರ ವಿಕ್ರಮ.

    1: ಸೈಬ್ರಾಂಡ್ ಎಂಗಲ್‌ಬ್ರೆಕ್ಟೃ್ -ಲೋಗನ್ ವಾನ್ ಬೀಕ್ 130 ರನ್ ಸೇರಿಸಿ ಏಕದಿನ ವಿಶ್ವಕಪ್‌ನಲ್ಲಿ ಏಳು ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಗರಿಷ್ಠ ಜತೆಯಾಟದ ದಾಖಲೆ ಬರೆಯಿತು. ಭಾರತದ ಕಪಿಲ್ ದೇವ್- ಸೈಯದ್ ಕಿರ್ಮಾನಿ ಜೋಡಿ 1983ರಲ್ಲಿ 126 ರನ್ ಜತೆಯಾಟವಾಡಿದ್ದು ಹಿಂದಿನ ಗರಿಷ್ಠ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts