More

    ಕನ್ನಡ ಭಾಷಾಂತರ ಸಾಹಿತ್ಯದಲ್ಲಿ ಮಾನವೀಯತೆಯ ಅನಾವರಣ

    ಹೊಸಪೇಟೆ: ಭಾಷಾಂತರ ಎನ್ನುವುದು ಭಾಷೆಯಿಂದ ಭಾಷೆಗೆ ವರ್ಗಾಹಿಸುವ ಪ್ರಕ್ರಿಯೆಯಲ್ಲ. ಸಂಸ್ಕೃತಿಯಿಂದ ಸಂಸ್ಕೃತಿಗೆ ಅನುವಾದಿಸುವ ಪ್ರಕ್ರಿಯೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಹೇಳಿದರು.

    ಇದನ್ನೂ ಓದಿ: 2 ಕೋಟಿ ವೀಕ್ಷಣೆ ಸನಿಹ ಇನ್ನಷ್ಟು ಬೇಕೆನ್ನ ಹೃದಯಕೆ: ಗಜಾನನ ಶರ್ಮಾ ಸಾಹಿತ್ಯದ ಗೀತೆ ಹಲವು ಭಾಷೆಗಳಲ್ಲಿ ಭಾಷಾಂತರ

    ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಪ್ರಯುಕ್ತ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಶನಿವಾರ ಕನ್ನಡ ಭಾಷಾಂತರ ಸಾಹಿತ್ಯದಲ್ಲಿ ಮಾನವೀಯತೆಯ ಅನಾವರಣ ಕುರಿತು ಉಪನ್ಯಾಸ ನೀಡಿದರು.

    ಭಾಷಾಂತರ ಜ್ಞಾನವನ್ನು ಪ್ರಜಾಪ್ರಭುತ್ವೀಕರಣಗೊಳಿಸುತ್ತದೆ. ಅಧಿಕಾರ ಕೇಂದ್ರಗಳನ್ನು ಪ್ರಶ್ನೆ ಮಾಡುತ್ತದೆ. ಭಾಷಾಂತರವು ಪುನರ್ ಸೃಷ್ಟಿ ಹಾಗೂ ಪುನರ್‌ಲೇಖನ ಆಗಬಾರದು. ಅದು, ಮಾನವೀಯತೆಯನ್ನು ಅಭಿವ್ಯಕ್ತಗೊಳಿಸಬೇಕು.

    ಅದರಲ್ಲಿ ವಸಾಹತುಶಾಹಿಯ ಸೂಕ್ಷ್ಮ ಅರಿವು ಸಹ ಕಂಡುಬರಬೇಕು. ಸಾಹಿತ್ಯದಲ್ಲಿ ಅಭಿವ್ಯಕ್ತವಾದ ಸ್ತ್ರೀ ವ್ಯಕ್ತಿತ್ವದಲ್ಲಿ ಆಗಿರುವ ಬದಲಾವಣೆಗಳಿಗೆ ಅನುವಾದಗಳೇ ಪ್ರೇರಣೆ. ಕ್ಷಾತ್ರವೇ ಮಹಿಳೆಯ ಆದರ್ಶ ಎಂಬ ಅನುವಾದಗಳ ಕಾಲವೊಂದಿತ್ತು.

    ಮುಂದೆ ಪ್ರತಿಭಟನೆ ಮಾಡುವ, ವ್ಯವಸ್ಥೆ ಮತ್ತು ಪುರುಷ ಪ್ರಾಧಾನ್ಯವನ್ನು ಪ್ರಶ್ನಿಸುವ ಸ್ತ್ರೀತ್ವದ ಮಾನವೀಯ ವ್ಯಕ್ತಿತ್ವಗಳನ್ನು ಅನುವಾದ ಸಾಹಿತ್ಯಗಳಲ್ಲಿ ಗುರುತಿಸಬಹುದು ಎಂದರು.

    ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಎಸ್.ಪ್ರದೀಪ, ಜಂಬನಗೌಡ, ಮಂಜುನಾಥ, ದೇವೇಂದ್ರಪ್ಪ, ಎಂ.ಕೆ ಖಾಜಸಾಬ್, ಕೆ.ಆರ್.ಕೃತ್ತಿಕ, ಪಿ.ಚೌಡಪ್ಪ, ಕೆ.ಅನಂತ, ವಿನೋದ್ ಬಾದರ್ಲಿ, ರಾಘವೇಂದ್ರ ಕುಪ್ಪೆಲೂರು, ಶ್ವೇತಾ ಬಾಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts