More

    ಇಬ್ಬರು ಮಕ್ಕಳ ತಾಯಿಯಾದ ಶ್ರೀಲೀಲಾ! ಶಬ್ಬಾಸ್ ಎಂದ ಅಭಿಮಾನಿಗಳು…

    ಬೆಂಗಳೂರು: ನಟಿ ಶ್ರೀಲೀಲಾ ಅವರು ಸದ್ಯ ಕ್ನನಡ, ತೆಲುಗು ಅಂತ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು, ಮುದ್ದು ಬೆಡಗಿ ಶ್ರೀಲೀಲಾ ಅಭಿನಯದ ಬೈ ಟು ಲವ್ಕನ್ನಡ ಸಿನಿಮಾ ಬಿಡುಗಡೆಯಾಗಲು ರೆಡಿಯಾಗಿದೆ. ‘ಬೈ ಟು ಲವ್ಸಿನಿಮಾ ಫೆಬ್ರವರಿ 18ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಕುರಿತು ಮತ್ತು ಒಂದು ವಿಶೇಷ ಕಾರಣಕ್ಕೆ ಶ್ರೀಲೀಲಾ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೌದು, ಶ್ರೀಲೀಲಾ ಅವರು ಇಬ್ಬರು ಮುದ್ದಾದ ಮಕ್ಕಳನ್ನು ದತ್ತು ಪಡೆದಿದ್ದಾರೆ. ‘ಕಿಸ್ಬೆಡಗಿ ಇಬ್ಬರೂ ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. ಈ ಸುದ್ದಿ ಈಗ ಸಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೇ ಎಲ್ಲರನ್ನು ಶಾಕ್ ಮತ್ತು ಖುಷ್ ಕೂಡಾ ಮಾಡಿದೆ.
    ಅಂದಹಾಗೆ, ತಾವು ದತ್ತು ಪಡೆದ ಮಕ್ಕಳ ಸಂಪೂರ್ಣ ಜವಾಬ್ದಾರಿ ನಟಿ ಶ್ರೀಲೀಲಾ ಅವರದ್ದೇ ಅಂತೆ. ನಟಿ ‘ಶ್ರೀ ಮನೋವಿಕಾಸ ಕೇಂದ್ರ’ದಿಂದ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಗುರು ಎಂಬ ಮಗು ಕೇವಲ 8 ತಿಂಗಳ ಮಗುವಾಗಿದ್ದು, ಈ ಪುಟ್ಟ ಕಂದನ ಜೊತೆಗೆ, ಶೋಭಿತಾ ಎನ್ನುವ ಹೆಣ್ಣು ಮಗುವನ್ನು ಕೂಡಾ ನಟಿ ಶ್ರೀಲೀಲಾ ದತ್ತು ಪಡೆದಿದ್ದಾರೆ. ಮಕ್ಕಳನ್ನು ದತ್ತು ಪಡೆದ ನಂತರ ಶ್ರೀಲೀಲಾ ತುಂಬಾ ಭಾವುಕರಾದರು. ಇಷ್ಟು ಕಿರಿಯ ವಯಸ್ಸಿನಲ್ಲಿ ಮಕ್ಕಳನ್ನು ದತ್ತು ಪಡೆದು ಶ್ರೀಲೀಲಾ ಕೋಟಿ ಕೋಟಿ ಮಂದಿಗೆ ಮಾದರಿ ಆಗಿದ್ದಾರೆ. ಅವರ ಈ ಉತ್ತಮ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
    ಬೈ ಟು ಲವ್ಚಿತ್ರದಲ್ಲಿ ಒಂದು ಮಗುವಿನ ಜೊತೆ ನಟಿಸಿದ್ದಾರೆ ಶ್ರೀಲೀಲಾ. ಆ ಮಗುವಿನೊಂದಿಗೆ ಶ್ರೀಲೀಲಾ ಅವರಿಗೆ ಒಂದೊಳ್ಳೆ ಬಂಧ ಬೆಸೆದಿದೆಯಂತೆ. ಹಾಗಾಗಿ, ಮಾತೃ ಶ್ರೀ‌ಮನೋವಿಕಾಸ ಕೇಂದ್ರದಲ್ಲಿನ ಮಕ್ಕಳನ್ನು ಕಂಡೊಡನೆ ನಟಿ ಅಕ್ಷರಶಃ ಭಾವುಕರಾಗಿ ಇಬ್ಬರು ಮಕ್ಕಳನ್ನ ದತ್ತು ಪಡೆಯುವ ನಿರ್ಧಾರ ಮಾಡಿದ್ದಾರೆ. ಎಲ್ಲರೂ ಸುಂದರವಾಗಿರುವ, ಆರೋಗ್ಯವಾಗಿರುವ ಮಕ್ಕಳನ್ನೇ ದತ್ತು ಪಡೆಯಲು ಇಷ್ಟ ಪಡುತ್ತಾರೆ. ಆದರೆ, ನಟಿ ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿರುವುದು ಎಲ್ಲರನ್ನು ನಿಜಕ್ಕೂ ಶಬ್ಬಾಸ್ ಎನ್ನುವಂತೆ ಮಾಡಿದೆ. ಈ ಮೂಲಕ ನಟಿ ಶ್ರೀಲೀಲಾ ಕೇವಲ ತೆರೆಯ ಮೇಲೆ ಮಾತ್ರವಲ್ಲದೇ, ನಿಜ ಜೀವನದಲ್ಲೂ ಕೂಡಾ ಹೀರೋಯಿನ್ ಆಗಿದ್ದಾರೆ

    ಇಬ್ಬರು ಮಕ್ಕಳ ತಾಯಿಯಾದ ಶ್ರೀಲೀಲಾ! ಶಬ್ಬಾಸ್ ಎಂದ ಅಭಿಮಾನಿಗಳು... ಇಬ್ಬರು ಮಕ್ಕಳ ತಾಯಿಯಾದ ಶ್ರೀಲೀಲಾ! ಶಬ್ಬಾಸ್ ಎಂದ ಅಭಿಮಾನಿಗಳು... ಇಬ್ಬರು ಮಕ್ಕಳ ತಾಯಿಯಾದ ಶ್ರೀಲೀಲಾ! ಶಬ್ಬಾಸ್ ಎಂದ ಅಭಿಮಾನಿಗಳು... ಇಬ್ಬರು ಮಕ್ಕಳ ತಾಯಿಯಾದ ಶ್ರೀಲೀಲಾ! ಶಬ್ಬಾಸ್ ಎಂದ ಅಭಿಮಾನಿಗಳು...

    ಇಬ್ಬರು ಮಕ್ಕಳ ತಾಯಿಯಾದ ಶ್ರೀಲೀಲಾ! ಶಬ್ಬಾಸ್ ಎಂದ ಅಭಿಮಾನಿಗಳು... ಇಬ್ಬರು ಮಕ್ಕಳ ತಾಯಿಯಾದ ಶ್ರೀಲೀಲಾ! ಶಬ್ಬಾಸ್ ಎಂದ ಅಭಿಮಾನಿಗಳು...

    24 ಗಂಟೆಗಳಲ್ಲಿ ಎಷ್ಟು ಕೋಟಿ ವೀಕ್ಷಣೆ​ ಪಡೆಯಿತು ‘ಜೇಮ್ಸ್’ ಟೀಸರ್?

    We Miss You Appu ಎಂದು ಭಾವುಕರಾದ ಡಾರ್ಲಿಂಗ್ ಪ್ರಭಾಸ್! ‘ಜೇಮ್ಸ್’ ಟೀಸರ್ ಕಂಡು ಬಾಹುಬಲಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts