More

  ಏಸುಕ್ರಿಸ್ತ ಪ್ರತಿಮೆ ನಿರ್ಮಾಣ; ಕೈ ಕೊಟ್ಟ ಕಾಂಗ್ರೆಸ್​ ನಾಯಕರಿಂದಾಗಿ ಕಪಾಲ ಬೆಟ್ಟದಲ್ಲಿ ಏಕಾಂಗಿ ಬಂಡೆಯಂತಾದ ಡಿಕೆಶಿ

  ಬೆಂಗಳೂರು: ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಸಾಥ್ ನೀಡದ ಕಾಂಗ್ರೆಸ್ ನಾಯಕರಿಂದಾಗಿ ಡಿ.ಕೆ. ಶಿವಕುಮಾರ್​ ಏಕಾಂಗಿಯಾಗಿದ್ದಾರೆ.

  ಕನಕಪುರಕ್ಕೆ ಮಾತ್ರ ಸಿಮೀತವಾದ ಘಟನೆ ಎಂದು ನಿರ್ಧಾರ ಮಾಡಿದ ಕಾಂಗ್ರೆಸ್​ ನಾಯಕರು ಮೌನಕ್ಕೆ ಜಾರಿದ್ದಾರೆ. ಪ್ರತಿಮೆ ನಿರ್ಮಾಣದ ಬಗ್ಗೆ ಯಾರೋಬ್ಬರು ಚಕಾರ ಎತ್ತಲು ತಯಾರಿಲ್ಲ.

  ಬೆಂಗಳೂರಿನ ಕಾವೇರಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ಮೌನಕ್ಕೆ ಜಾರಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಬೆಂಗಳೂರಿನಲ್ಲಿಯೇ ಇದ್ರೂ ತುಟಿ ಬಿಚ್ಚದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್.

  ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಕಾಂಗ್ರೆಸ್​ ನಾಯಕರು ಜಾಣ ಮೌನಿಗಳಾಗಿದ್ದಾರೆ. ಕಲ್ಲಡ್ಕ ಪ್ರಭಾಕರ್​ ಭಟ್​ ಅವರ ಕೇಸರಿ ಸವಾರಿ ಮುಂದೆ ಡಿ.ಕೆ.ಶಿವಕುಮಾರ್​ ಮಂಕಾಗಿದ್ದಾರೆ.

  ಕನಕಪುರದ ಉಸಾಬರಿ ನಮಗೆ ಬೇಡ ಅಂದುಕೊಂಡ ರಾಜ್ಯ ಕಾಂಗ್ರೆಸ್​ ನಾಯಕರಿಂದಾಗಿ ಕಪಾಲ ಬೆಟ್ಟದಲ್ಲಿ ಏಕಾಂಗಿಯಾದರೇ ಶಿವಕುಮಾರ್​ ಎಂಬ ಬಂಡೆ ಎಂಬುದು ಸದ್ಯ ಕಾಂಗ್ರೆಸ್​ನಲ್ಲಿ ಹರಿದಾಡುತ್ತಿರುವ ಮಾತು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts