More

    ರಸ್ತೆಯಲ್ಲಿ ಕೊಳಚೆ ನೀರು ನಿಲ್ಲದಂತೆ ತಾತ್ಕಾಲಿಕ ಕ್ರಮ

    ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಪಂ ವ್ಯಾಪ್ತಿಯ ಕಲಕೇರಿಯಿಂದ ಜೀರಾಳ ಸಂಪರ್ಕಿಸುವ ಜಿಲ್ಲಾ ಹೆದ್ದಾರಿಯಲ್ಲಿ ಕೊಳಚೆ ನೀರು ನಿಲ್ಲದಂತೆ ಗ್ರಾಮಾಡಳಿತದಿಂದ ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳಲಾಗಿದೆ.

    ಗ್ರಾಮದ ನಾನಾ ಓಣಿಗಳ ಕೊಳಚೆ ನೀರು ಸಮರ್ಪಕವಾಗಿ ಹರಿಯಲು ಚರಂಡಿ ಇಲ್ಲವಾಗಿದೆ. ಈಗಿನಂತೆ ಹಿಂದೆಯೂ ತ್ಯಾಜ್ಯ ನೀರು ರಸ್ತೆಯಲ್ಲಿ ನಿಂತಾಗ ಎರಡು ಬಾರಿ ಮರಂ ಹಾಕಿ ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಇದೀಗ ಮತ್ತೆ ಕೊಳಚೆ ನೀರು ನಿಂತು ಗುಂಡಿ ಬಿದ್ದಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ.

    ಇದನ್ನೂ ಓದಿ: ಜಿಲ್ಲಾ ಹೆದ್ದಾರಿಯಲ್ಲಿ ನಿಲ್ಲುವ ಕೊಳಚೆ ನೀರು – ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ

    ಇದರಿಂದ ವಾಹನ ಸಂಚಾರ ಕಷ್ಟಕರವಾಗಿತ್ತು. ಸಾಕು ಪ್ರಾಣಿಗಳು ಇದೇ ಕೊಳಚೆ ನೀರಿನಲ್ಲಿ ದಣಿವಾರಿಸಿಕೊಳ್ಳುತ್ತಿದ್ದವು. ಈ ಕುರಿತು ಏ.24ರಂದು ‘ಹೆದ್ದಾರಿಯಲ್ಲಿ ನಿಲ್ಲುವ ಕೊಳಚೆ ನೀರು’ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.

    ಇದರಿಂದ ಎಚ್ಚೆತ್ತ ತಾಪಂ ಇಒ ಚಂದ್ರಶೇಖರ ಕಂದಕೂರು ಸ್ಥಳ ಪರಿಶೀಲಿಸಿದ್ದು, ಚರಂಡಿ ನಿರ್ಮಾಣವೇ ಶಾಶ್ವತ ಪರಿಹಾರವಾಗಿದೆ. ಚುನಾವಣೆ ಬಳಿಕ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸುವ ಭರವಸೆ ನೀಡಿರುವ ಅವರು, ತಾತ್ಕಾಲಿಕವಾಗಿ ರಸ್ತೆಯಲ್ಲಿ ಕೊಳಚೆ ನೀರು ನಿಲ್ಲದಂತೆ ಮಂಗಳವಾರ ಕ್ರಮ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts