More

    ಏ.1ರಿಂದ ನರೇಗಾ ಕೂಲಿ ದರ ಹೆಚ್ಚಳ

    275 ರೂ.ನಿಂದ 289ರೂ.ಗೆ | ಯೋಜನೆಯ ಸದ್ಬಳಕೆಗೆ ತಾಪಂ ಇಒ ಡಾ.ಡಿ.ಮೋಹನ್ ಕರೆ


    ಕನಕಗಿರಿ: ಇದುವರೆಗೆ ನರೇಗಾದಲ್ಲಿ ಕೂಲಿ ಕಾರ್ಮಿಕರಿಗೆ 275 ರೂ. ಕೂಲಿ ನೀಡುತ್ತಿದ್ದ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯು ಏ.1ರಿಂದ ಮತ್ತೆ 14 ರೂ. ಕೂಲಿಯನ್ನು ಹೆಚ್ಚಿಸಲಿದ್ದು, ಇನ್ಮುಂದೆ 289 ರೂ. ಕೂಲಿ ದೊರೆಯಲಿದೆ ತಾಪಂ ಇಒ ಡಾ.ಡಿ.ಮೋಹನ್ ಹೇಳಿದರು.

    ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯ ದೇವಲಾಪುರ ಕೆರೆಯಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನ ಶುರುಮಾಡಿದ್ದು, 60 ದಿನ ದುಡಿದರೆ 17,340 ರೂ. ಪಡೆಯಬಹುದು. ವರ್ಷದಲ್ಲಿ ನರೇಗಾದನ್ವಯ 100 ದಿನ ದುಡಿಯಲು ಅವಕಾಶವಿದೆ. ವೈಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿ ಕೈಗೊಳ್ಳಬಹುದು. ಜಾಬ್ ಕಾರ್ಡ್ ಇದ್ದವರು ಕೆಲಸ ಮಾಡಲು ಮುಂದಾಗಬೇಕು. ಜಾಬ್‌ಕಾರ್ಡ್ ಇಲ್ಲದವರು ಪಂಚಾಯತಿಗೆ ಅಗತ್ಯ ದಾಖಲೆ ನೀಡಿ ಅರ್ಜಿ ಸಲ್ಲಿಸಿ ಉದ್ಯೋಗ ಚೀಟಿ ಪಡೆಯಬೇಕು. ದುಡಿಯೋಣ ಬಾ ಅಭಿಯಾನದಲ್ಲಿ ಭಾಗಿಯಾಗಿ ಇದ್ದೂರಲ್ಲೇ ಕೆಲಸ ಮಾಡಲು ಮುಂದಾಗಬೇಕು. ಮಹಿಳೆಯರು, ಪುರುಷರಿಗೂ ಉದ್ಯೋಗ ಖಾತ್ರಿಯಡಿ ಸಮಾನ ಕೂಲಿ ನೀಡಲಾಗುತ್ತಿದೆ. ಕೂಲಿ ಕಾರ್ಮಿಕರು ಗುಳೆ ಹೋಗದೆ ಯೋಜನೆ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.

    ತಾಪಂ ಸಹಾಯಕ ನಿರ್ದೇಶಕ ವೀರಣ್ಣ ನಕ್ರಳ್ಳಿ ಮಾತನಾಡಿ, ಎಲ್ಲ ವರ್ಗದವರ ಪರವಾದ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕ್ರಾಂತಿಯಾಗುತ್ತಿದೆ ಎಂದರು. ಗ್ರಾಪಂ ಸದಸ್ಯರಾದ ಈರಮ್ಮ ಕುಂಟೆಪ್ಪ, ಬಿ.ಕೃಷ್ಣ, ಸಿ.ವೆಂಕಟೇಶ, ಪಿಡಿಒ ಸಿ.ಆರ್.ನಾಗಲಿಂಗಪ್ಪ, ನರೇಗಾ ಐಇಸಿ ಕೋರ್ಡಿನೇಟರ್ ಬಾಳಪ್ಪ ತಾಳಕೇರಿ, ತಾಂತ್ರಿಕ ಸಂಯೋಜಕ ಅಕ್ಷಯ್ ಕುಮಾರ್, ಟಿಎಇ ಮಲ್ಲಿಕಾರ್ಜುನ, ಗ್ರಾಪಂ ಸಿಬ್ಬಂದಿ ಮೋಹನ್, ವಿಜಯ್, ಕಾಯಕಬಂಧು ಶಾರದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts