More

    ಅಲ್ಲಾಗಿರಿರಾಜಗೆ ಒಲಿದ ಸಮ್ಮೇಳನಾಧ್ಯಕ್ಷ ಸ್ಥಾನ : ಬೈರನಹಟ್ಟಿಯಲ್ಲಿ ಅ.30ರಂದು ಗಜಲ್ ಸಾಹಿತ್ಯ ಜಾತ್ರೆ


    ಕನಕಗಿರಿ: ಗದಗ ಜಿಲ್ಲೆ ನರಗುಂದದ ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಅ.30ರಂದು ನಡೆಯುವ ಅಖಿಲ ಭಾರತ ಗಜಲ್ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದವರಾದ ಸಾಹಿತಿ ಅಲ್ಲಾಗಿರಿರಾಜ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಭಾಗದ ಹಿರಿಮೆ ಹೆಚ್ಚಿಸಿದೆ.

    ವಿದ್ಯಾರ್ಥಿ ದೆಸೆಯಿಂದಲೇ ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯ ಜತೆಗೆ ಸಾಹಿತ್ಯದ ಕಡೆಗೂ ಒಲವು ತೋರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಕೆಲ ವರ್ಷ ಪತ್ರಿಕಾರಂಗದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಮುಖ ಎನ್‌ಜಿಒಗಳಲ್ಲಿ ಕೆಲಸ ಮಾಡುತ್ತ ಹಲವು ರಾಜ್ಯ ಸುತ್ತಿ ಅಧ್ಯಯನ ಕೈಗೊಂಡಿದ್ದಾರೆ. ಗಜಲ್ ಸಾಹಿತ್ಯದ ಕಡೆಗೆ ಮುಖ ಮಾಡಿದ ನಂತರ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಗಜಲ್ ಎಂದರೆ ಏನು ಎಂದು ಕೇಳುವ ಈ ಭಾಗದ ಹಲವರನ್ನು ಗಜಲ್ ಸಾಹಿತ್ಯ ಕಡೆಗೆ ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿ, ಕವಿಗೋಷ್ಠಿಗಳನ್ನು ಆಯೋಜಿಸಿ ಗಜಲ್ ಸಾಹಿತ್ಯ ಬೆಳೆಸಿದ್ದಾರೆ.

    ಸಾಹಿತ್ಯ ಕೃತಿಗಳು: ಸಾಹಿತಿ ಅಲ್ಲಾಗಿರಿರಾಜ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕಾವ್ಯ ಕಡಲು, ಕೊರಳ ಕೂಗು, ಹಸಿ ಬಾಣಂತಿ ಮತ್ತು ಗಾಂಧಿ ಬಜಾರ್, ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ (ಕವನ ಸಂಕಲನಗಳು), ಸ್ಲಂ ಜನರ ಬದುಕು ಬವಣೆ, ಪುಣ್ಯಕ್ಷೇತ್ರ ಕನಕಗಿರಿ, ಕನಕಗಿರಿ ಕಲಾವೈಭವ, ನೂರು ಗಜಲ್, 99 ಗಜಲ್, ಸುರೂರ್ ಗಜಲ್, ಮುತ್ತು ಒಡೆಯುವ ಬನ್ನಿ, ಸಂದಲ್ ಗಜಲ್, ಹಿಲಾಲ್ ಗಜಲ್, ಸಂತನ ಸಾಲುಗಳ ಗಜಲ್, ರೀಖ್ತಿ ಗಜಲ್, ಫಕೀರ್ ಗಜಲ್ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಸೇವೆಗೆ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ, ಹೂಗಾರ ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿ, ಸುಯತೀಂದ್ರ ಪ್ರಶಸ್ತಿ, ದೆಹಲಿ ಕನ್ನಡಿಗರಿಂದ ರಾಷ್ಟ್ರೀಯ ಕಾವ್ಯ ಪ್ರಶಸ್ತಿ ಸೇರಿ ನೂರಕ್ಕೂ ಹೆಚ್ಚು ಪುರಸ್ಕಾರಗಳು ಲಭಿಸಿವೆ.

    ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಖುಷಿ ತಂದಿದೆ. ಗಜಲ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಸಂದ ಫಲವಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ನನ್ನ ಬದಲಾಗಿ ಸಂವಿಧಾನ ಹಾಗೂ ಗಜಲ್, ಸಾಹಿತ್ಯ ಪುಸ್ತಕಗಳನ್ನು ಇಡಲು ಬಯಸಿದ್ದೇನೆ.
    | ಅಲ್ಲಾಗಿರಿರಾಜ ಗಜಲ್ ಸಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts