More

    ಕೀರ್ತನೆಯಿಂದ ಸಮಾಜ ಬೆಳಗಿದ ಸಂತಶ್ರೇಷ್ಠ

    ಗದಗ: ಜಿಲ್ಲಾಡಳಿತದ ವತಿಯಿಂದ ಗುರುವಾರ ಕನಕ ಜಯಂತಿ ಆಚರಿಸಲಾಯಿತು. ನಗರದ ಹಾತಲಗೇರಿ ನಾಕಾದ ಕನಕದಾಸ ವೃತ್ತದಲ್ಲಿ ದಾಸಶ್ರೇಷ್ಠ ಕನಕದಾಸರ ಭಾವಚಿತ್ರ ಜಿಲ್ಲಾಧಿಕಾರಿ ಸುಂದರೇಶಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಪುಷ್ಪಾರ್ಚನೆಗೈದರು.

    ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ, ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವಿ ದಂಡಿನ, ಸಹಕಾರ್ಯದರ್ಶಿ ಡಾ. ಪುನೀತ ಬೆನಕನವಾರಿ, ವಾಸಣ್ಣ ಕುರುಡಗಿ, ಶಕುಂತಲಾ ದಂಡಿನ, ಎಸ್.ಎನ್. ಬಳ್ಳಾರಿ, ಅನಿಲ ಸಿಂಗಟಾಲಕೇರಿ, ಪ್ರಾಚಾರ್ಯ ಎನ್.ಎಂ. ಅಂಬಲಿ, ಎನ್.ಎಚ್. ಮುಂಡರಗಿ, ಟಿ.ಎನ್. ಗೋಡಿ, ಪವನ ಗೊರವರ, ರವಿ ಜ್ಯೋತಿ, ಚನ್ನಮ್ಮ ಹುಳಕಣ್ಣವರ, ಲೋಹಿತ ಕರಿಗಾರ, ಶಿವಣ್ಣ ಸಿಂಗಟಾಲಕೇರಿ ಇತರರಿದ್ದರು.

    ಭಾವಚಿತ್ರಕ್ಕೆ ಪುಷ್ಪಾರ್ಚನೆ

    ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಗುರುವಾರ ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಆಚರಿಸಲಾಯಿತು. ಅಧ್ಯಕ್ಷೆ ಪೂರ್ಣಿಮಾ ಪಾಟೀಲ ಹಾಗೂ ಸದಸ್ಯರು ಕನಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಸಮರ್ಪಿಸಿದರು.

    ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಸಂತ ಕನಕದಾಸರು 16 ನೇ ಶತಮಾನದಲ್ಲಿಯೇ ಮೇಲು-ಕೀಳು ಎನ್ನುವ ಭೇದಭಾವವನ್ನು ಪ್ರತಿಭಟಿಸಿದ್ದರು. ಎಲ್ಲರೂ ಒಂದೇ ಎನ್ನುವ ಮೂಲಕ ಸಮಾಜ ನಿರ್ವಣಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಜಾತಿ ವ್ಯವಸ್ಥೆ ವಿರೋಧಿಸುತ್ತಿದ್ದ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶ ಇಂದಿಗೂ ಪ್ರಸ್ತುತವಾಗಿವೆ ಎಂದರು.

    ಕನಕದಾಸರ ಸಾಹಿತ್ಯ ಜನಮನದಲ್ಲಿ ಉಳಿಯುವಂತಾಗಿವೆ. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ… ನಿಮ್ಮ ಕುಲದ ನೆಲೆಯೇನೆನಾದರೂ ಬಲ್ಲಿರಾ?‘ ಎನ್ನುವ ಮೂಲಕ ಜಾತಿ ಪದ್ಧತಿ ವಿರೋಧಿಸುತ್ತಿದ್ದರು. ಕನ್ನಡ, ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕೀರ್ತನೆಗಳು, ಸಂಗೀತ ಕ್ಷೇತ್ರಕ್ಕೆ ಹೊಸ ಮೆರುಗು ನೀಡಿದವು. ಕನಕದಾಸರ ಬದುಕು ಮತ್ತು ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ ಎಂದು ಹೇಳಿದರು.

    ಆರ್.ಎಂ. ಪಾಟೀಲ, ಪ್ರವೀಣ ಬಾಳಿಕಾಯಿ ಮಾತನಾಡಿದರು. ರಾಮಪ್ಪ ಗಡದವರ, ಬಸವರಾಜ ಓದುನವರ, ಪೂಜಾ ಖರಾಟೆ, ಎಸ್.ಕೆ. ಹವಾಲ್ದಾರ, ಕವಿತಾ ಶರಸೂರಿ, ಮುಷ್ತಾಕ ಶಿರಹಟ್ಟಿ, ಎಸ್.ಕೆ. ಹವಾಲ್ದಾರ, ಯಲ್ಲವ್ವ ದುರಗಣ್ಣವರ, ನೀಲವ್ವ ಮೆಣಸಿನಕಾಯಿ, ವಿಜಯ ಕರಡಿ, ಬಸವರಾಜ ಮೆಣಸಿನಕಾಯಿ, ಪ್ರಮೋದ ಖರಾಟೆ, ದುರ್ಗಣ್ಣವರ, ಎಂ.ಆರ್. ಪಾಟೀಲ, ಮಂಜುಳಾ ಹೂಗಾರ, ಮಂಜುನಾಥ ಮುದಗಲ್ ಇತರರಿದ್ದರು.

    ಕನಕರ ಆದರ್ಶ ಮೈಗೂಡಿಸಿಕೊಳ್ಳಿ

    ಗಜೇಂದ್ರಗಡ:16 ನೇ ಶತಮಾನದಲ್ಲಿಯೇ ಕನಕದಾಸರು ಜಾತಿಯ ವಿಷ ಬೀಜ ತೊಡೆದು ಹಾಕಿ ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಎಚ್.ಎಸ್. ಸೋಂಪೂರ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು ಯಾವುದೇ ಜಾತಿಗೆ ಸೀಮಿತ ವಾದವರಲ್ಲ. ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿ, ಮಾನವರೆಲ್ಲರೂ ಒಂದೇ ಎಂದು ಸಾರಿ ಹೇಳಿದ್ದಾರೆ ಎಂದರು.

    ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸದಸ್ಯ ರಾಜು ಸಾಂಗ್ಲೀಕರ, ಅಶೋಕ ವನ್ನಾಲ, ಶರಣಪ್ಪ ದೊಣ್ಣೆಗುಡ್ಡ ಮಾತನಾಡಿದರು. ಮಲ್ಲಿಕಾರ್ಜುನ ಆವಾರಿ, ಕನಕಪ್ಪ ಅರಳಿಗಿಡದ, ನಾಗಣ್ಣ ಲಕ್ಕಲಕಟ್ಟಿ, ಕಳಕನಗೌಡ ಗೌಡ್ರ, ರಮೇಶ ಗಡಾದ, ಪಿ.ಎಚ್. ಮ್ಯಾಗೇರಿ, ಎಂ.ಬಿ. ಸೋಂಪುರ, ಮಲ್ಲು ಮಾರನಬಸರಿ, ಮಲ್ಲೇಶ ಜಂತ್ಲಿ, ರಂಗನಾಥ ಮೇಟಿ, ಯಲ್ಲಪ್ಪ ಅಬ್ಬಿಗೇರಿ, ಅಶೋಕ ವದೆಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts