More

    ಕನಕಾಚಲಪತಿ ಗೋಪುರ ಪ್ರತಿಬಿಂಬದಲ್ಲಿ ಉಲ್ಟಾ

    ಕನಕಗಿರಿ: ಪಟ್ಟಣದ ಕನಕಾಚಲ ದೇವಸ್ಥಾನದಲ್ಲಿ ಹಂಪೆಯ ಮಾದರಿಯಲ್ಲಿಯೇ ಗೋಪುರದ ಪ್ರತಿಬಿಂಬ ಉಲ್ಟಾ ಕಾಣುತ್ತಿರುವುದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ವಿಜಯನಗರದ ರಾಜಧಾನಿ ಐತಿಹಾಸಿಕ ಹಂಪೆಯ ವಿರುಪಾಕ್ಷ ದೇವಾಲಯದಲ್ಲಿ 15ನೇ ಶತಮಾನದಲ್ಲಿಯೇ ವಿಜ್ಞಾನಿಗಳು ಬೆರಗಾಗುವಂತೆ ಮುಖ್ಯ ಗೋಪುರದ ಪ್ರತಿಬಿಂಬ ಉಲ್ಟಾ ಕಾಣುವಂತೆ ಮಾಡಲಾಗಿದೆ. ವಿಜಯನಗರ ಸಾಮ್ರಾಜ್ಯದ ಆಡಳಿತ ಅವಧಿಯಲ್ಲೇ ಈ ಭಾಗದಲ್ಲಿ ಅವರ ಸಾಮಂತರಾಗಿ ನಾಯಕರು ಕನಕಗಿರಿ ಭಾಗವನ್ನು ಆಳಿದ್ದಾರೆ. ಹಂಪೆಯಂತೆಯೇ ಕನಕಗಿರಿಯಲ್ಲಿಯೂ ಹಲವು ಸ್ಮಾರಕ ಹಾಗೂ ಧಾರ್ಮಿಕ ಕಟ್ಟಡಗಳನ್ನು ನಾಯಕ ವಂಶಸ್ಥರು ನಿರ್ಮಿಸಿದ್ದಾರೆ.

    ಕೆಲವಡಿ ಉಡುಚ ನಾಯಕನ ಅವಧಿಯಲ್ಲಿ ನಿರ್ಮಿಸಲಾಗಿರುವ ಈ ದೇವಸ್ಥಾನದ ಗೋಪುರಗಳಲ್ಲಿ ದಕ್ಷಿಣ ಗೋಪುರದ ಪ್ರತಿಬಿಂಬ ದಕ್ಷಿಣ ಬಾಗಿಲನ್ನು ಕಿಂಡಿಯಿಂದ ದೇವಸ್ಥಾನದೊಳಗಿನ ಮಧ್ಯರಂಗದೊಳಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಲವರಿಗೆ ಇದರ ಬಗ್ಗೆ ತಿಳಿದಿರಲಿಲ್ಲ. ಆದರೆ, ಮಧ್ಯರಂಗದಲ್ಲಿನ ಮೂರು ಬಾಗಿಲುಗಳು ಮುಚ್ಚಿದಾಗ ಆಗುವ ಕತ್ತಲಿನಲ್ಲಿ ಮಾತ್ರ ಸ್ಪಷ್ಟವಾಗಿ ಕಾಣುವುದರಿಂದ ಸ್ಥಳೀಯರು ಸಹಿತ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಮಾಹಿತಿಯಿಲ್ಲ. ಇದೀಗ ಈ ವಿಡಿಯೋದಿಂದ ಕನಕಗಿರಿಯ ಹೆಮ್ಮೆ ಎಂದುಕೊಳ್ಳುತ್ತಿದ್ದಾರೆ. ಇದು ವಿಜ್ಞಾನಿಗಳನ್ನು ಬೆರಗುಗೊಳಿಸುತ್ತದೆ.

    ದೇವಸ್ಥಾನದ ಮಧ್ಯರಂಗದಲ್ಲಿ ಎಲ್ಲ ಬಾಗಿಲುಗಳು ಬಂದ್ ಮಾಡಿ ಕತ್ತಲೆ ಮಾಡಿದರೆ ದಕ್ಷಿಣ ಗೋಪುರದ ಪ್ರತಿಬಿಂಬವೂ ಗೋಪುರಕ್ಕೆ ಬಳಿಯಲಾದ ಬಣ್ಣದ ಸಹಿತ ಉಲ್ಟಾ ಕಾಣುತ್ತಿದೆ. ಇದು ನೇರ ಮತ್ತು ಸ್ಪಷ್ಟವಾಗಿ ಗೋಚಿರಿಸುತ್ತಿದೆ.
    ಸಿದ್ದಲಿಂಗಯ್ಯ ಸ್ವಾಮಿ ,ಕನಕಾಚಲ ದೇವಸ್ಥಾನದ ಕಾರ್ಯದರ್ಶಿ

    ಕನಕಗಿರಿಯ ಕನಕಾಚಲ ದೇವಸ್ಥಾನದ ಪ್ರಕಾರದ ಮೂರು ಗೋಪುರಗಳನ್ನು ಕೆಲವಡಿ ಉಡುಚ ನಾಯಕನ ಕಾಲದಲ್ಲಿ ನಿರ್ಮಿಸಿದ್ದವಾಗಿವೆ. ಗೋಪುರಗಳು ಕ್ರಿ.ಶ. 15ನೇ ಶತಮಾನದಲ್ಲಿ ನಿರ್ಮಾಣಗೊಂಡಿವೆ.
    > ಇಮಾಮ್‌ಸಾಹೇಬ್ ಹಡಗಲಿ ಸಂಶೋಧಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts