More

    ಕಣಗಲಸರ ಬಳಿ 10 ಮಂಗಗಳು ಅನುಮಾನಾಸ್ಪದ ಸಾವು ?

    ಶಿವಮೊಗ್ಗ/ಭದ್ರಾವತಿ: ತಾಲೂಕಿನ ಉಂಬ್ಳೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗಲಸರ ಗ್ರಾಮ ಸಮೀಪದ ಆನೆಕಲ್ಲು ಉದ್ಭವ ಗಣಪತಿ ದೇವಸ್ಥಾನದ ಬಳಿ 10 ಮಂಗಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಕಿಡಿಗೇಡಿಗಳು ವಿಷವಿಕ್ಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.
    ಮಂಗಗಳು ದೇವಾಲಯದ ಸುತ್ತಮುತ್ತ ಸತ್ತು ಬಿದ್ದಿರುವುದು ಕಂಡುಬಂದಿದ್ದು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದು ಸಹಜವಾಗಿಯೇ ಸುತ್ತಮುತ್ತ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮಂಗಗಳು ಸಾವನ್ನಪ್ಪಿರುವ ಸುದ್ದಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯರು ಸ್ಥಳಕ್ಕೆ ದೌಡಾಯಿಸಿ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ವೈಜ್ಞಾನಿಕವಾಗಿ ಅಂತ್ಯಕ್ರಿಯೆ ನಡೆಸಿದರು.
    ಮಂಗನಕಾಯಿಲೆ ಇದ್ದರೂ ಒಂದೆರಡು ಮಂಗಳು ಸಾವನ್ನಪ್ಪುತ್ತಿದ್ದವು. ಆದರೆ ಒಂದೇ ಭಾಗದಲ್ಲಿ 10 ಮಂಗಗಳು ಸತ್ತಿರುವುದಕ್ಕೆ ಕಾರಣವೇನು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಬಹಿರಂಗಗೊಳ್ಳಬೇಕಿದೆ.
    ವಲಯ ಅರಣ್ಯಾಧಿಕಾರಿ ಬಿ.ಜೆ.ತೇಜ, ಕಾಚಿನಕಟ್ಟೆ ಪಶು ವೈದ್ಯಾಧಿಕಾರಿ ಮಹದೇವ ಶರ್ಮಾ, ಹಿರಿಯ ಪಶು ಪರೀಕ್ಷಕ ಎನ್.ಎಸ್.ರಮೇಶ್, ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ. ರಘುಪ್ರಸಾದ್, ಗ್ರಾಮಪಂಚಾಯಿತಿ ಪಿಡಿಒ ಅಮಿತ್‌ರಾಜ್, ವೆಂಕಟೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
    ವಿಷವಿಟ್ಟು ಕೊಂದರೇ ?:
    ಉಂಬ್ಳೆಬೈಲ್ ಗ್ರಾಪಂ ವ್ಯಾಪ್ತಿಯು ಕಾಡಂಚಿನಲ್ಲಿದ್ದು ಕಾಡುಪ್ರಾಣಿಗಳು ಜಮೀನುಗಳ ಮೇಲೆ ದಾಳಿ ಮಾಡಿ ಬೆಳೆಗಳನ್ನು ನಾಶ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಅದರಲ್ಲೂ ಮಂಗಗಳು ಮೆಕ್ಕೆಜೋಳ, ಅಡಕೆ, ಬಾಳೆ ಸೇರಿದಂತೆ ಹಲವು ಫಸಲನ್ನು ನಾಶ ಮಾಡುತ್ತಿವೆ. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಮಂಗಗಳಿಗೆ ವಿಷವಿಟ್ಟು ಕೊಂದಿದ್ದಾರೆ ಎಂಬ ಶಂಕೆ ಮೂಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts