More

    ನೀರಿನಿಂದ ಮುಕ್ತಗೊಂಡರೂ ಸಂಚಾರಕ್ಕಿಲ್ಲ ಅವಕಾಶ

    ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ ಜಲಾಶಯದಿಂದ ಹರಿದು ಬರುವ ನೀರಿನ ಪ್ರಮಾಣ ಗುರುವಾರ ತಗ್ಗಿದ್ದರಿಂದ ಕಂಪ್ಲಿ-ಗಂಗಾವತಿ ಸೇತುವೆ ನೀರಿನ ಮುಳುಗಡೆಯಿಂದ ಮುಕ್ತವಾಗಿದೆ. ಸೇತುವೆಯ ರಕ್ಷಣಾ ಕಂಬಿಗಳು ಮತ್ತು ಸೇತುವೆ ಮೇಲೆ ಅಡರಿದ ತ್ಯಾಜ್ಯ ತೆರವುಗೊಳಿಸುವಲ್ಲಿ ಪುರಸಭೆ ಸಿಬ್ಬಂದಿ ನಿರತವಾಗಿದೆ. ಆದ್ದರಿಂದ ಸಂಚಾರಕ್ಕೆ ಇನ್ನೂ ಅವಕಾಶ ಸಿಕ್ಕಿಲ್ಲ.

    ನದಿಗೆ ಹರಿದು ಬರುವ ನೀರಿನ ಪ್ರಮಾಣ ಗುರುವಾರ 71 ಸಾವಿರ ಕ್ಯೂಸೆಕ್‌ಗೆ ಕುಗ್ಗಿದ್ದರಿಂದ ಸೇತುವೆ ನೀರಿನಿಂದ ಮುಕ್ತವಾಗಿದೆ. ಸೇತುವೆಗಿಂತ ಒಂದಡಿಯಷ್ಟು ಕೆಳಗಡೆ ನೀರು ಹರಿಯುತ್ತಿದೆ. ಜು.13ರಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ಜು.20ರತನಕ ಸೇತುವೆ ಮುಳುಗಡೆಗೊಂಡಿತ್ತು. ಸದ್ಯ ಸೇತುವೆ ನೀರಿನಿಂದ ಮುಕ್ತಗೊಂಡಿದ್ದರೂ ಪಾದಚಾರಿ ಹಾಗೂ ವಾಹನಗಳ ಸಂಚಾರ ನಿಷೇಧ ಮುಂದುವರಿದಿದೆ. ವಾರಗಳ ಕಾಲ ಸೇತುವೆ ನೀರಿನಲ್ಲಿ ಮುಳುಗಿದ್ದರಿಂದ ನೀರಿನ ರಭಸಕ್ಕೆ ಸೇತುವೆ ಮೇಲಿನ ಮೇಲ್ಪದರ ಅಲ್ಲಲ್ಲಿ ಕಿತ್ತು ಹೋಗಿದೆ. ಎಕ್ಸ್‌ಫ್ಯಾನ್ಷನ್ ಜಾಯಿಂಟ್ಸ್ ಕಿತ್ತು ಹೋಗಿವೆ. ಸೇತುವೆಯ ಬಲಗಡೆಯ ರಕ್ಷಣಾ ಕಂಬಿಗಳು ಕೆಲವಡೆ ನೀರಿನ ಕೊಚ್ಚಿ ಹೋಗಿವೆ. ಬಿದ್ದಿವೆ. ರಕ್ಷಣಾಕಂಬಿಗೆ ಅಳವಡಿಸಿದ ಕೇಬಲ್ ಜಖಂಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts