More

    ಕರೊನಾ ಇಲ್ಲದಿದ್ದರೂ 15 ದಿನಗಳಲ್ಲಿ 12 ಜನರ ಸಾವು! ಪ್ರತಿನಿತ್ಯ ನಿಧನ ವಾರ್ತೆಯಿಂದಾಗಿ ಬೆಚ್ಚಿಬಿದ್ದಿದೆ ಈ ಗ್ರಾಮ

    ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಪ್ರತಿದಿನ 50 ರಿಂದ 80 ವರ್ಷದೊಳಗಿನ ಒಬ್ಬಿಬ್ಬರು ಸಾವಿಗೀಡಾಗುತ್ತಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ.

    ಕರೊನಾ ಎರಡನೇ ಅಲೆ ಆರಂಭಗೊಂಡ ನಂತರ ನಿತ್ಯವೂ ಒಬ್ಬಿಬ್ಬರು ವಯಸ್ಸಾದವರು ತೀರಿಕೊಳ್ಳುತ್ತಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ 70-80 ವಯಸ್ಸಿನ ಎಂಟು ಜನ ಸಾವಿಗೀಡಾಗಿದ್ದು, ಅದರಲ್ಲಿ ಇಬ್ಬರು ಮಹಿಳೆಯರು, ಆರು ಜನ ಸೇರಿದ್ದಾರೆ. ಇನ್ನು 50 ವರ್ಷದ ಇಬ್ಬರು ಮಹಿಳೆಯರು, ಒಬ್ಬ ಪುರುಷ ಸೇರಿ ಹಲವರು ಮೃತಪಟ್ಟಿದ್ದಾರೆ. ಒಬ್ಬರು ಮಾತ್ರ ಕರೊನಾಕ್ಕೆ ಬಲಿಯಾಗಿದ್ದಾರೆ.

    ಕರೊನಾ ಭಯ ಇಲ್ಲವೆ ದೀರ್ಘ ಕಾಯಿಲೆಗಳನ್ನು ತಾಳದೆ ಮೃತಪಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ತಾಲೂಕು ಆಡಳಿತ ಗ್ರಾಮದಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಗ್ರಾಪಂ ಮಾಜಿ ಸದಸ್ಯ ದಂಡಿನ ದೊಡ್ಡ ಬಸವ ಒತ್ತಾಯಿಸಿದ್ದಾರೆ.

    ದೇವಸಮುದ್ರ ಗ್ರಾಮದಲ್ಲಿ ಮೇ 1ರಿಂದ ಈವರೆಗೆ 12 ಜನ ಸಾವಿಗೀಡಾಗಿರುವ ಬಗ್ಗೆ ದಾಖಲೆ ಇದೆ. ಇನ್ನ್ನೂ ಕೆಲವರು ಮೃತಪಟ್ಟಿದ್ದು ಸಂಬಂಧಿಸಿದವರು ಅಗತ್ಯ ಮಾಹಿತಿ ನೀಡಿ ಮರಣ ಹೊಂದಿದವರ ಹೆಸರು ನೋಂದಾಯಿಸಬೇಕಿದೆ.
    | ಕೆ.ಜಿಲಾನ್ ವಿಎ, ದೇವಸಮುದ್ರ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts