More

    ಈಚಲಹೊಳೆಯಲ್ಲಿ ಬೀಡುಬಿಟ್ಟ ಕಾಡಾನೆಗಳು, ರೈತರಲ್ಲಿ ಆತಂಕ

    ಕಳಸ: ಕಳಸ ತಾಲೂಕಿನ ಹಲವೆಡೆ ಕಳೆದ ಹದಿನೈದು ದಿನಗಳಿಂದ ಉಪಟಳ ನೀಡುತ್ತಿರುವ ಎರಡು ಕಾಡಾನೆ ಈಚಲಹೊಳೆಯಲ್ಲಿ ಬೀಡುಬಿಟ್ಟಿದ್ದು ಸುತ್ತಮುತ್ತ ಗ್ರಾಮಗಳ ಜನರು ಮತ್ತು ರೈತರಲ್ಲಿ ಆತಂಕ ಮನೆ ಮಾಡಿದೆ.
    ಕಳಸದ ಸುತ್ತಮುತ್ತ ಗ್ರಾಮಗಳಲ್ಲಿ ಸಂಚರಿಸಿ ಕಟಾವಿಗೆ ಬಂದ ಬೆಳೆಗಳನ್ನು ನಾಶ ಮಾಡಿರುವ ಕಾಡಾನೆಗಳು ಎರಡು ದಿನಗಳ ಹಿಂದೆ ಎಸ್.ಕೆ.ಮೇಗಲ್ ಭಾಗದಲ್ಲಿ ವಾಸ್ತವ್ಯ ಹೂಡಿದ್ದವು. ಇದೀಗ ಈಚಲುಹೊಳೆಯ ಚಂದ್ರು ಅವರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬಾಳೆ ಮತ್ತು ಅಡಕೆ ಗಿಡಗಳನ್ನು ನಾಶ ಮಾಡಿವೆ.
    ಹಗಲಿನಲ್ಲಿ ಅರಣ್ಯ ಸೇರುತ್ತಿರುವ ಆನೆಗಳು ರಾತ್ರಿಯಾಗುತ್ತಿದ್ದಂತೆ ಜಮೀನು, ತೋಟಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿಯಿಂದ ಕಾಫಿ, ಅಡಕೆ, ಬಾಳೆಯನ್ನು ಕಳೆದುಕೊಂಡಿದ್ದೇವೆ. ಇದೀಗ ಕಾಡಾನೆ ಹಾವಳಿಯಿಂದ ಉಳಿದ ಅಲ್ಪಸ್ವಲ್ಪ ಬೆಳೆ ಹಾಳು ಮಾಡುತ್ತಿವೆ. ಕಾಡಾನೆಗಳ ಉಪಟಳದಿಂದ ಗ್ರಾಮಗಳಲ್ಲಿ ಓಡಾಡುವುದೂ ಕಷ್ಟಕರವಾಗಿದೆ. ಅರಣ್ಯ ಇಲಾಖೆಗೆ ಗಮನಕ್ಕೆ ತಂದರೂ ಪ್ರಯೋಜನೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts