More

    ಸಾಪ್ತಾಹಿಕ ರೈಲು ಇನ್ಮುಂದೆ ವಾರಕ್ಕೆ ಮೂರು ದಿನ ಸಂಚಾರ


    ಕಲಬುರಗಿ: ಬೆಂಗಳೂರು-ಕಲಬುರಗಿ ಸಾಪ್ತಾಹಿಕ ರೈಲು ಇನ್ಮುಂದೆ ವಾರಕ್ಕೆ ಮೂರು ದಿನ ಸಂಚರಿಸಲಿದೆ. ಕಲಬುರಗಿಯಿಂದ ಬೆಂಗಳೂರಿನ ಬೈಯಪ್ಪನಹಳ್ಳಿ ವಿಶ್ವೇಶ್ವರಯ್ಯ ಟರ್ಮಿನಲï‌ವರೆಗೆ ಸಂಚರಿಸುವ (೦೬೫೮೯/೦೬೫೯೦) ರೈಲು ಪ್ರತಿ ಭಾನುವಾರ ಮತ್ತು ಮಂಗಳವಾರ ಬೈಯ್ಯಪ್ಪನಹಳ್ಳಿಯಿಂದ ರಾತ್ರಿ ೧೧ಕ್ಕೆ ಹೊರಟು ಮರುದಿನ ಬೆಳಗ್ಗೆ ೯.೦೫ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಸೋಮವಾರ ಸಂಜೆ ೫.೧೦ಕ್ಕೆ ಹೊರಟು ಬೈಯಪ್ಪನಹಳ್ಳಿಗೆ ಮರುದಿನ ಬೆಳಗ್ಗೆ ೪.೧೫ಕ್ಕೆ ತಲುಪಲಿದೆ. ಇದರಿಂದಾಗಿ ಈ ರೈಲು ಸೇವೆ ವಾರಕ್ಕೆ ಮೂರು ದಿನ ಸಿಗಲಿದೆ. ಪ್ರಸ್ತುತ ರೈಲು ಬೆಂಗಳೂರಿAದ ಏ.೧೯ರಿಂದ ಸಂಚಾರ ಆರಂಭಿಸಲಿದ್ದು ಕಲಬುರಗಿಯಿಂದ ೨೦ರಂದು ಹೊರಡಲಿದೆ. ಏ.೧೨ರಂದು ರೈಲು ಮೊದಲ ಸಂಚಾರ ಪ್ರಾರಂಭಿಸಿದ ದಿನ ಶೇ.೧೦೦ ಭರ್ತಿಯಾಗಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಚುನಾವಣಾ ಪ್ರಚಾರ ಮಧ್ಯೆಯೂ ಸಂಚಾರ ದಿನಗಳಲ್ಲಿ ಹೆಚ್ಚಿಸುವಂತೆ ನಿರಂತರ ಒತ್ತಡ ಹೇರಿದ ಪರಿಣಾಮ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಪ್ರಯಾಣಿಕರು ಈ ರೈಲು ಸೇವೆ ಪ್ರಯೋಜನ ಪಡೆಯಬೇಕು ಎಂದು ಕೋರಿದ ಸಂತಸ ವ್ಯಕ್ತಪಡಿಸಿರುವ ಸಂಸದ ಡಾ.ಉಮೇಶ ಜಾಧವ್, ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts