More

    ಬಸವೇಶ್ವರರ ಕಂಚಿನ ಮೂರ್ತಿ ಅನಾವರಣ 10ಕ್ಕೆ

    ಗಂಗಾವತಿ: ಎಲ್ಲ ಸಮುದಾಯದ ನೆರವಿನೊಂದಿಗೆ ಜಗಜ್ಯೋತಿ ಬಸವೇಶ್ವರರ ಅಶ್ವಾರೂಢ ಕಂಚಿನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ನ.10ರಂದು ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಯೋಪ್ರಾ ಮಾಜಿ ಅಧ್ಯಕ್ಷ ಹಾಗೂ ಜಗಜ್ಯೋತಿ ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ ಹೇಳಿದರು.

    ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದರು. ನಗರದ ಶ್ರೀಕೃಷ್ಣ ದೇವರಾಯ ವೃತ್ತದ ಬಳಿಯ ನೆಹರು ಪಾರ್ಕ್‌ನಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ಮೂರ್ತಿ ಮೆರವಣಿಗೆ ಎಪಿಎಂಸಿ ಶ್ರೀ ಚನ್ನಬಸವ ಸ್ವಾಮಿ ದೇವಾಲಯದಿಂದ ಜರುಗಲಿದೆ.

    ಹೆಜ್ಜೆ ಕುಣಿತ, ಕೋಲಾಟ, ಡೊಳ್ಳು, ನಂದಿಕೋಲು ಕುಣಿತ ಮತ್ತು ಭಜನೆ ಮೇಳಗಳು ಭಾಗವಹಿಸಲಿವೆ. ವಚನ ಗ್ರಂಥಗಳೊಂದಿಗೆ ಎಲ್ಲ ಸಮುದಾಯದ ಆರಾಧ್ಯ ದೇವತೆಗಳ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಸವ ಸಮಿತಿ ಅಧ್ಯಕ್ಷ ಬೆಂಗಳೂರಿನ ಅರವಿಂದ ಜತ್ತಿ ಸೇರಿ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ವಿವಿಧ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

    ಟ್ರಸ್ಟ್ ಕಾರ್ಯದರ್ಶಿ ರಾಚಪ್ಪ ಸಿದ್ದಾಪುರ ಮಾತನಾಡಿ, ಬಿಡದಿಯ ವಿಜಯಕುಮಾರ ಅವರು ಪ್ರತಿಮೆ ತಯಾರಿಸಿದ್ದು, 10 ಅಡಿ ಎತ್ತರ, 10 ಅಗಲದ ಕಂಚಿನ ಮೂರ್ತಿ 1400ಕೆಜಿ ತೂಕವಿದೆ. ಅಂದಾಜು 21 ಲಕ್ಷ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಬೆಳಗ್ಗೆ ಮೂರ್ತಿ ಮೆರವಣಿಗೆ ನಡೆದು ಸಂಜೆ ಅನಾವರಣಗೊಳ್ಳಲಿದೆ. ವಚನ ಸಂಗೀತ, ಬಸವೇಶ್ವರ ಕಲಾ ಸಂಘದಿಂದ ಶಿವಶರಣ ಮಡಿವಾಳ ಮಾಚಿದೇವ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

    ಉಪಾಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್, ಕೋಶಾಧ್ಯಕ್ಷ ಎ.ಕೆ.ಮಹೇಶಕುಮಾರ, ಪದಾಧಿಕಾರಿಗಳಾದ ಮಂಜುನಾಥ ಮಸ್ಕಿ, ನವೀನ್ ಮಾಲಿ ಪಾಟೀಲ್, ಉಮೇಶ ಎಸ್.ಸಿಂಗನಾಳ್, ಸಂಗಮೇಶ ಮಹಾದೇವಪ್ಪ ಕೋಟಿ, ಆನಂದ ಕೊಟ್ರಪ್ಪ ಅಕ್ಕಿ, ಚೇತನಕುಮಾರ ಹೊಸ್ಕೇರಿ, ಹಿರಿಯ ಮುಖಂಡರಾದ ಹೊಸಳ್ಳಿ ಶಂಕರಗೌಡ, ಸರಿಗಮಪ ಗಾಯಕ ಹನುಮಂತಪ್ಪ, ಕೆ.ಬಸವರಾಜ, ದಿಲೀಪ್ ವಂದಾಲ್, ಸಂಗಮೇಶ ಕೋಟಿ, ಶಿವಪ್ಪ ಯಲಬುರ್ಗಿ ಇತರರಿದ್ದರು.

    ಕೊಪ್ಪಳ ಶ್ರೀಗಳಿಂದ ಮೂರ್ತಿ ಅನಾವರಣ

    ಕೊಪ್ಪಳ ಗವಿಮಠದ ಶ್ರೀ ಅಭಿನವ ಗಸಿದ್ದೇಶ್ವರ ಸ್ವಾಮೀಜಿಯಿಂದ ಮೂರ್ತಿ ಅನಾವರಣಗೊಳ್ಳಲಿವೆ. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ಸ್ವಾಮೀಜಿ, ಅರಳಹಳ್ಳಿಯ ಗವಿಸಿದ್ದಯ್ಯತಾತಾ ಸಾನ್ನಿಧ್ಯವಹಿಸಲಿದ್ದಾರೆ. ಶಾಸಕ ಗಾಲಿ ಜನಾರ್ದನರೆಡ್ಡಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಂಸದ ಎಚ್.ಜಿ.ರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ಕರಡಿ ಸಂಗಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರಾದ ಪರಣ್ಣಮುನವಳ್ಳಿ, ಬಸವರಾಜ ದಢೇಸೂಗೂರು, ಜಿ.ವೀರಪ್ಪ, ಎಚ್.ಎಸ್.ಮುರಳೀಧರ, ಮಾಜಿ ಸಚಿವರಾದ ಎಂ.ಮಲ್ಲಿಕಾರ್ಜುನ ನಾಗಪ್ಪ, ಇಕ್ಬಾಲ್ ಅನ್ಸಾರಿ, ಸಾಲೋಣಿ ನಾಗಪ್ಪ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಸೇರಿ ಉದ್ಯಮಿಗಳು, ವಿವಿಧ ಸಮಾಜದ ಅಧ್ಯಕ್ಷರು ಮತ್ತು ಮುಖಂಡರು ಭಾಗವಹಿಸಲಿದ್ದಾರೆ.

    ಮೂರ್ತಿ ಪ್ರತಿಷ್ಠಾಪನೆ ಹಲವು ವರ್ಷಗಳ ಕನಸಾಗಿದ್ದು, 2007ರಿಂದಲೇ ಸಂಕಲ್ಪ ಮಾಡಿದ್ದು 2023ರಲ್ಲಿ ಕಾಲ ಕೂಡಿಬಂದಿದೆ. ಎಲ್ಲರೂ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಮೂರ್ತಿ ಪ್ರತಿಷ್ಠಾಪನೆಗೆ ಸಹಕರಿಸಿದ್ದಾರೆ.
    ಡಾ.ಶಿವಕುಮಾರ ಮಾಲಿ ಪಾಟೀಲ್
    ಉಪಾಧ್ಯಕ್ಷ, ಜಗಜ್ಯೋತಿ ಬಸವೇಶ್ವರ ಟ್ರಸ್ಟ್, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts