More

    ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು

    ಹುಬ್ಬಳ್ಳಿ : ಚಂದ್ರಯಾನ-3ರ ಯಶಸ್ಸಿನ ಹಿಂದೆ ಅನೇಕ ವಿಜ್ಞಾನಿಗಳ ಸಂಘಟಿತ ಪ್ರಯತ್ನ ಮತ್ತು ಕಠಿಣ ಪ್ರರಿಶ್ರಮ ಇದೆ ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಇಸ್ರೋ ವಿಜ್ಞಾನಿ ಎ.ಆರ್. ಪ್ರಶಾಂತ ಹೇಳಿದರು.

    ಇಲ್ಲಿಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯಲ್ಲಿ ನಡೆದ ಇಸ್ರೋ ವಿಜ್ಞಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಯಾವುದೇ ಯಶಸ್ಸಿನ ಹಿಂದೆ ಸತತ ಅಧ್ಯಯನ, ಬದ್ಧತೆ ಇರುತ್ತದೆ. ಗುರಿ ತಲುಪುವವರೆಗೆ ನಿರಂತರ ಪ್ರಯತ್ನ ಮುಂದುವರಿಸಿದಾಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದರು.

    ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಲು ಓದದೇ, ಜ್ಞಾನ ಪಡೆದುಕೊಳ್ಳಲು ಅಧ್ಯಯನ ಮಾಡಬೇಕು. ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮತ್ತೊಬ್ಬ ಇಸ್ರೋ ವಿಜ್ಞಾನಿ ಮಲ್ಲಿಕಾರ್ಜುನ ಖಾನಾಪುರಿ ಹೇಳಿದರು.

    ಬಿ.ವಿ.ಬಿ. ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹಾಗೂ ಇಸ್ರೋದ ವಿಜ್ಞಾನಿ ಶಾಂತಲಾ ಅವರು, ಚಂದ್ರಯಾನ-3ರ ಕಾರ್ಯವೈಖರಿ ಮತ್ತು ಯಶಸ್ಸಿನ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ನಂತರ ಈ ಮೂವರೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಈ ಮೂವರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

    ಕಾಲೇಜಿನ ಪ್ರಾಚಾರ್ಯು ಡಾ.ಉಮಾ ವಿ. ನೇರ್ಲೆ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ಉಪನ್ಯಾಸಕ ದೇವದತ್ತ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿಜಯಶ್ರೀ ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts