More

    24ರಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

    ಚಿತ್ರದುರ್ಗ: ಚಿತ್ರದುರ್ಗ ಸ್ಫೋರ್ಟ್ಸ್ ಕ್ಲಬ್ ಹಾಗೂ ರಾಜ್ಯಅಮೆಚೂರ್ ಕಬಡ್ಡಿ ಅಸೋಷಿಯನ್‌ನಿಂದ, ಫೆ.24ರಿಂದ 26ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಪ್ರೋ ಮಾದರಿ,22 ವರ್ಷದೊಳಗಿನ ಪುರುಷರ ರಾಜ್ಯಮಟ್ಟದ ಹೊನಲು ಬೆಳಕಿನ ಚಿತ್ರದುರ್ಗ ಕಬಡ್ಡಿ ಪ್ರೀಮಿಯರ್‌ಲೀಗ್(ಸಿಕೆಪಿಎಲ್)ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಿಕೆಪಿಎಲ್ ಅಧ್ಯಕ್ಷ ಟಿ.ಕೆ.ಬಸವರಾಜ್ ಹೇಳಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 72 ಕ್ರೀಡಾಪಟುಗಳನ್ನು ಆಯ್ಕೆ ಮಾಡ ಲಾಗಿದೆ. ವಿಜೇತ ತಂಡಗಳಿಗೆ 50 ಸಾವಿರ ರೂ.,40,30 ಹಾಗೂ 20 ಸಾವಿರ ರೂ.ನಗದು ಬಹುಮಾನ ಹಾಗೂ ಪಾರಿತೋಷಕ ವಿತರಿಸ ಲಾಗುವುದು. ಉತ್ತಮ ಹಿಡಿತಗಾರ,ದಾಳಿಗಾರ,ಸರ್ವೋತ್ತಮ ಆಟಗಾರರನ್ನು ಪುರಸ್ಕರಿಸಲಾಗುವುದು.

    ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ 24ರಂದು ಸಂಜೆ 7ಕ್ಕೆ ಪಂದ್ಯಾವಳಿ ಆರಂಭವಾಗಲಿದೆ. ಮಾಜಿ ಶಾ ಸಕ ಎಸ್.ಕೆ. ಬಸವರಾಜನ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್,ಬಿಜೆಪಿ ಮುಖಂಡರಾದ ಜಿ.ಎಸ್.ಅನಿತ್‌ಕುಮಾರ್,ರಘುಚಂದ ನ್,ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಫಾತ್ಯರಾಜನ್, ಉದ್ಯಮಿಗಳಾದ ಬಿ.ಅರುಣ್‌ಕುಮಾರ್,ನಾಡಿಗ ನಟರಾಜರೆಡ್ಡಿ ಹಾಗೂ ಅರ್ಜುನ್ ಪ್ರ ಶಸ್ತಿ ಪುರಸ್ಕೃತ ಕಬಡ್ಡಿ ಕ್ರೀಡಾಪಟು ಬಿ.ಸಿ.ರಮೇಶ್ ಉಪಸ್ಥಿತರಿರುತ್ತಾರೆ.

    ರವೀಂದ್ರ ಕುಮಾರ್ ರಾಥೋಡ್,ಚಿತ್ರದುರ್ಗ ಡೆವಿಲ್ಸ್,ರಂಗಸ್ವಾಮಿ,ಯುವರತ್ನ ತಂಡ,ದೇವರಾಜ್,ಕ್ರಾಂತಿದರ್ಶನ್,ಚೇತನ್ ಮ ದಕರಿ ಸೂಪರ್‌ಕಿಂಗ್ಸ್,ಧರ್ಮ ಡಿವಿಎಸ್ ಕಬಡ್ಡಿ ಬಾಯ್ಸ ಮತ್ತು ಪುನೀತ್ ಕಂತಕ ಅವರ ಮಾಲೀಕತ್ವದಲ್ಲಿರುವ ಆರು ತಂಡಗಳು ಪಂ ದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ.

    ಮಾದಾರ ಶ್ರೀ ಸಾನ್ನಿಧ್ಯ 26ರಂದು ಸಂಜೆ ಸಮಾರೋಪ ಜರುಗಲಿದ್ದು,ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ,ಎಂಎಲ್‌ಸಿ ಕೆ.ಎಸ್.ನವೀನ್‌ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಪಿ.ಸಿ.ಮುರುಗೇಶ್ (9482013306) ಅವರನ್ನು ಸಂಪರ್ಕಿಸ ಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts