More

    ಕೆ.ಆರ್.ಎಸ್. ಅಣೆಕಟ್ಟೆಗೆ ಮೋಟಾರು ಅಳವಡಿಕೆ

    ಕೆ.ಆರ್.ಸಾಗರ; ಕುಡಿಯುವ ನೀರಿಗಾಗಿ ಜನರು ಕಷ್ಟಪಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಇತ್ತ ಇಬ್ಬರು ಪ್ರಭಾವಿ ವ್ಯಕ್ತಿಗಳು ತಮ್ಮ ಫಾರ್ಮ್‌ಹೌಸ್‌ನಲ್ಲಿನ ಗಿಡಗಳಿಗಾಗಿ ಅಣೆಕಟ್ಟೆಗೆ ಅಕ್ರಮವಾಗಿ ಮೋಟಾರು ಅಳವಡಿಸಿ ನೀರು ತೆಗೆಯುತ್ತಿದ್ದಾರೆ.

    ಕೆ.ಆರ್.ಸಾಗರ ಮುಖ್ಯ ದ್ವಾರದ ಬಳಿಯ ಹಿನ್ನೀರು ಸಮೀಪದಲ್ಲಿ ಫಾರ್ಮ್ ಹೌಸ್ ನಿರ್ಮಿಸಿದ್ದು, ಇಬ್ಬರು ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಹಿನ್ನೀರಿಗೆ ವಿದ್ಯುತ್‌ಚಾಲಿತ ಮೋಟಾರು, ಸುಮಾರು 300 ಮೀಟರ್‌ನಷ್ಟು ಪೈಪ್ ಅಳವಡಿಸಿ ನೀರು ಪಡೆಯುತ್ತಿದ್ದಾರೆ.

    ಈ ನಡುವೆ ಪ್ರಭಾವಿಗಳು ನೀರು ಪಡೆದುಕೊಳ್ಳಲು ಅಳವಡಿಸಿರುವ ವಿದ್ಯುತ್ ವೈಯರ್‌ಗಳ ಜಾಯಿಂಟ್‌ಗಳು ಅಸುರಕ್ಷಿತವಾಗಿದೆ. ಈ ವೈಯರ್‌ಗಳು ಫೌರಂ ಹೌಸ್ ಮತ್ತು ಹಿನ್ನೀರಿನ ನದಿ ಪಾತ್ರದ ನಡುವೆ ಬಿದ್ದಿದೆ. ಈ ಸ್ಥಳಕ್ಕೆ ಹಸು ಮೇಯಿಸುವ ಹಾಗೂ ಮೀನುಗಾರರು ಬರಲಿದ್ದು, ವೈಯರ್ ತುಳಿದರೆ ಅವಘಢ ಸಂಭವಿಸುವುದು ಗ್ಯಾರಂಟಿ.

    ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಅಣೆಕಟ್ಟೆ ಉಸ್ತುವಾರಿಗೆ ನಿಯೋಜನೆಗೊಂಡಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಕಣ್ಣು ತಪ್ಪಿಸಿ ಈ ಕೆಲಸ ಮಾಡಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಸಿಬೇಕು ಎಂಬುದು ಸ್ಥಳೀಯರ ಆಗ್ರಹ.

    ಅಣೆಕಟ್ಟೆಯಲ್ಲಿ ಮೀನು ಹಿಡಿಯಲು ಹೋದರೆ ಅಕ್ರಮ ಎನ್ನುವ ಅಣೆಕಟ್ಟೆಯ ಭದ್ರತಾ ಸಿಬ್ಬಂದಿ, ಅಣೆಕಟ್ಟೆ ಸಮೀಪದಲ್ಲಿ ಕ್ರಮ ನಡೆಯುತ್ತಿದೆ. ಇಬ್ಬರು ಪ್ರಭಾವಿ ವ್ಯಕ್ತಿಗಳು ನಿರ್ಮಿಸಿರುವ ಫೌರಂ ಹೌಸನಲ್ಲಿನ ಗಿಡಗಳಿಗೆ ನೀರುಣಿಸಲು ಬೇಕಾಬಿಟ್ಟಿ ವಿದ್ಯುತ್ ವೈಯರ್‌ಗಳನ್ನು ನೆಲದಲ್ಲಿ ಅಳವಡಿಸಿ, ಮೋಟಾರು ಹಾಕಿ ನೀರು ಪಡೆಯುತ್ತಿದ್ದು ಅಂತಹವರ ವಿರುದ್ಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು.
    ಸಿ.ಮಂಜುನಾಥ್ ಗ್ರಾಪಂ ಸದಸ್ಯ, ಕೆ.ಆರ್.ಸಾಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts