More

    ಹೊಸ ವಿದ್ವತ್ ಪರಂಪರೆಗೆ ತಳಹದಿ ಹಾಕಿದವರು ಕೆ.ಕೃಷ್ಣಮೂರ್ತಿ

    ಬೆಂಗಳೂರು: ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯದ ಕುರಿತು ಹೊಸ ಬಗೆಯ ವಿದ್ವತ್ ಪರಂಪರೆಗೆ ತಳಹದಿ ಹಾಕಿದವರು ಡಾ.ಕೆ.ಕೃಷ್ಣಮೂರ್ತಿ ಎಂದು ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅಭಿಪ್ರಾಯಪಟ್ಟರು.

    ಡಾ.ಕೆ.ಕೃಷ್ಣಮೂರ್ತಿಯವರ ಜನ್ಮ ದಿನ ನಿಮಿತ್ತ ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಹಯೋಗದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸೋಮವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಲಾಗಿದ್ದ ‘ಅಲಂಕಾರಶಾಸಕ್ಕೆ ಡಾ.ಕೆ.ಕೃಷ್ಣಮೂರ್ತಿಯವರ ಕೊಡುಗೆ’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.‘ಅಲಂಕಾರಶಾಸದ ವಿಮರ್ಶೆಯಲ್ಲಿ ಇವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ನವೋದಯ ಸಂಸ್ಕೃತ ಯುಗದ ಹರಿಕಾರರು. ಅಲಂಕಾರಶಾಸಕ್ಕೆ ಸೀಮಿತವಾಗದೆ ಬೇರೆ ವಿಷಯಗಳ ಕುರಿತು ಗದ್ಯ, ಪದ್ಯ ರಚಿಸಿದವರು. ಆಧುನಿಕ ಮತ್ತು ಪ್ರಾಚೀನ ವಿದ್ವತ್ ಪ್ರಬಂಧದ ಕೊಂಡಿಯಾಗಿದ್ದವರು. ಇವರ ಹೆಸರಿನಲ್ಲಿ ವಿಶ್ವವಿದ್ಯಾಲಯದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.

    ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ

    ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ಎಸ್.ಆರ್. ನಿರಂಜನ್ ಮಾತನಾಡಿ, ಗ್ರಾಮೀಣ ಭಾಗದಿಂದ ಬಂದಿರುವ ಕೃಷ್ಣಮೂರ್ತಿ, ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು. ರಾಜ್ಯದಲ್ಲಿರುವ ಸಂಸ್ಕೃತ ವಿವಿಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡರೆ ಸಾಹಿತ್ಯವನ್ನು ಹಂಚಿಕೊಳ್ಳಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು. ಕೇಂದ್ರೀಯ ಸಂಸ್ಕೃತ ವಿವಿ ಹಾಗೂ ಕರ್ನಾಟಕ ಸಂಸ್ಕೃತ ವಿವಿ ನಡುವೆ ಕೆಲ ವಿಚಾರಗಳ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಯಿತು. ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ. ಎಸ್.ಅಹಲ್ಯಾ, ಕುಲಸಚಿವೆ ಡಾ. ಎಸ್.ರೂಪಶ್ರೀ, ಸಂಶೋಧನಾರ್ಥಿಗಳು, ಪ್ರಾಧ್ಯಾಪಕರು, ಸಂಸ್ಕೃತ ಪ್ರೇಮಿಗಳು, ವಿದ್ಯಾರ್ಥಿಗಳು ಸೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts