More

    ದೇಶದ್ರೋಹಿ ಘೋಷಣೆ ಕೂಗಿದ್ದ ಕಾಶ್ಮೀರಿಗಳ ನ್ಯಾಯಾಂಗ ಬಂಧನ 7ರ ತನಕ ವಿಸ್ತರಿಸಿದ ಜೆಎಂಎಫ್​ಸಿ ಕೋರ್ಟ್​

    ಹುಬ್ಬಳ್ಳಿ: ಪಾಕಿಸ್ತಾನ ಪರ ಘೋಷಣೆ ಕೂಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜಿಲ್ಲಾ ನ್ಯಾಯಾಲಯ ಮಾರ್ಚ್​ 7ರ ತನಕ ವಿಸ್ತರಿಸಿದೆ.

    ಸ್ಥಳೀಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಾದ ಆಮಿರ್, ಬಾಸಿತ್ ಮತ್ತು ತಾಲಿಬ್​ ಇತ್ತೀಚೆಗೆ ಪಾಕ್ ಪರ ಘೋಷಣೆ ಕೂಗಿದವರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಿಲ್ಲಾ ನ್ಯಾಯಾಲಯ ಸೋಮವಾರ ಇವರ ಬಂಧನದ ಅವಧಿಯನ್ನು ಇನ್ನೂ ಐದು ದಿನದ ಮಟ್ಟಿಗೆ ವಿಸ್ತರಿಸಿದೆ.

    ಇದೇ ವೇಳೆ, ಇವರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿರುವ ಐದನೇ ಜಿಲ್ಲಾ ಸತ್ರ ನ್ಯಾಯಾಲಯ, ಈ ಕುರಿತು ಆಕ್ಷೇಪಣೆ ಸಲ್ಲಿಸುವುದಕ್ಕೆ ಸರ್ಕಾರಿ ವಕೀಲರಿಗೆ ಮಾರ್ಚ್​ 5ರತನಕ ಕಾಲಾವಕಾಶ ನೀಡಿದೆ. ಕಾಲಾವಕಾಶ ಕೋರಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ಅರ್ಜಿ ಸಲ್ಲಿಸಿದ್ದರು. ಮಾ.5ರೊಳಗೆ ತಕರಾರು ಅರ್ಜಿ ಸಲ್ಲಿಸಲು ನ್ಯಾಯಾದೀಶ ಕೆ.ಎನ್. ಗಂಗಾಧರ ಸೂಚಿಸಿದ್ದಾರೆ. ಮಾರ್ಚ್ 5ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

    ಸದ್ಯ ಈ ಆರೋಪಿಗಳು ಹಿಂಡಲಗಾ ಜೈಲಿನಲ್ಲಿದ್ದಾರೆ. ದೇಶದ್ರೋಹಿ ಘೋಷಣೆ ಕೂಗಿ ಫೆಬ್ರುವರಿ 17ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts