More

    2021ರ ಅಂತ್ಯದಲ್ಲಿ ಜಿಯೋ 5ಜಿ ತಂತ್ರಜ್ಞಾನ ಲಭ್ಯ

    ನವದೆಹಲಿ: ಭಾರತದಲ್ಲಿ 2021ರ ದ್ವಿತೀಯಾರ್ಧದಲ್ಲಿ ಜಿಯೋ 5ಜಿ ತಂತ್ರಜ್ಞಾನ ಲಭ್ಯವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ. ಮೊಬೈಲ್ ಕಾಂಗ್ರೆಸ್ 2020ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ನಾಲ್ಕು ಕಲ್ಪನೆಗಳು ಭಾರತದ ಡಿಜಿಟಲ್ ರೂಪಾಂತರಕ್ಕೆ ಸಹಾಯ ಮಾಡುತ್ತವೆ. ಇವುಗಳ ಕೇಂದ್ರ ಬಿಂದು ಭಾರತದಲ್ಲಿ 5ಜಿ ತಂತ್ರಜ್ಞಾನವನ್ನು ತರುವುದು ಎಂದಿದ್ದಾರೆ.

    ಭಾರತವು ಇಂದು ವಿಶ್ವದ ಅತ್ಯುತ್ತಮ ಡಿಜಿಟಲ್ ಸಂಪರ್ಕ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಮುನ್ನಡೆ ಕಾಯ್ದುಕೊಳ್ಳಲು ಸರ್ಕಾರವು ಪ್ರಮುಖ ಉತ್ತಮ ನೀತಿ, ಕ್ರಮಗಳನ್ನು ತುರ್ತಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಇದರಿಂದ ಸುಮಾರು 30 ಕೋಟಿಗೂ ಹೆಚ್ಚು ಜನರೊಂದಿಗೆ ಸಂಪರ್ಕ ಬೆಳೆಸಲು ಸಹಾಯವಾಗುತ್ತದೆ. ಭಾರತದ ಮುಂದಿನ ಪೀಳಿಗೆಗೆ 5ಜಿ ಸಂಪರ್ಕವನ್ನು ವೇಗವಾಗಿ ಲಭ್ಯಗೊಳಿಸಲು ಸರ್ಕಾರದ ಸಹಾಯವೂ ಅವಶ್ಯಕ ಎಂದಿದ್ದಾರೆ.

    ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಹಳ್ಳಿಗಳಿಗೂ ಹೈಸ್ಪೀಡ್ ಇಂಟರ್​ನೆಟ್ ಲಭ್ಯವಾಗಲಿದೆ. ಕರೊನಾ ಲಸಿಕೆಯ ವಿತರಣೆಗೆ ಪ್ರಕ್ರಿಯೆಯಲ್ಲಿ ಮೊಬೈಲ್ ತಂತ್ರಜ್ಞಾನ ಸಮರ್ಪಕವಾಗಿ ಬಳಕೆಯಾಗಲಿದೆ. ಮೊಬೈಲ್ ತಂತ್ರಜ್ಞಾನದ ಸಹಾಯದಿಂದ ನಾವು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಯೋಜನೆಯನ್ನು ಪ್ರಾರಂಭಿಸುತ್ತೇವೆ.

    | ನರೇಂದ್ರ ಮೋದಿ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts