More

    ಜಿನ್ನಾ ಸಂಸ್ಕೃತಿ ಕಾಂಗ್ರೆಸಿಗರ ರಕ್ತದಲ್ಲೇ ಇದೆ: ಕೆಎಸ್‌ಈ ಆಕ್ರೋಶ

    ಶಿವಮೊಗ್ಗ: ಸ್ವಾತಂತ್ರೃ ಬಂದ ಬಳಿಕ ಅಧಿಕಾರಕ್ಕಾಗಿ ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಿತು. ಈಗ ಅದೇ ಪಕ್ಷದ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ದಕ್ಷಿಣದ ರಾಜ್ಯಗಳನ್ನು ಪ್ರತ್ಯೇಕ ದೇಶವಾಗಿಸಬೇಕೆಂದು ಹೇಳಿದ್ದಾರೆ. ಜಿನ್ನಾ ಸಂಸ್ಕೃತಿ ಕಾಂಗ್ರೆಸಿಗರ ರಕ್ತದಲ್ಲೇ ಹರಿದು ಬಂದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

    ದೇಶ ವಿಭಜನೆ ಬಳಿಕ ಪಾಕಿಸ್ತಾನದಲ್ಲಿರುವ ಹಿಂದುಗಳು ಬಹಳಷ್ಟು ನೋವುಂಡರು. ಈಗ ದೇಶದಲ್ಲಿ ಎಲ್ಲ ಧರ್ಮದವರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ದಕ್ಷಿಣ ಭಾರತ-ಉತ್ತರ ಭಾರತ ಎಂದು ದೇಶ ಒಡೆಯುವ ಹೇಳಿಕೆಯನ್ನು ಸಂಸದರೊಬ್ಬರು ನೀಡಿರುವುದು ದುರದೃಷ್ಟಕರ ಎಂದು ಹೇಳಿದರು.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ತನ್ನ ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಸಿಎಂ ಸಿದ್ದರಾಮಯ್ಯ ಇದನ್ನು ಖಂಡಿಸಿರುವುದು ಸ್ವಾಗತಾರ್ಹ. ದೇಶದ ಜನರಿಗೆ ಮತ್ತೊಂದು ನೋವು ನೀಡಲು ಡಿ.ಕೆ.ಸುರೇಶ್ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
    ಸುರೇಶ್ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಎಂದುಕೊಂಡಿದ್ದೇನೆ. ಆ ಪಕ್ಷದ ನಾಯಕರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಈ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ಜನರಿಗೆ ತಿಳಿಸಬೇಕೆಂದು ಈಶ್ವರಪ್ಪ ಸವಾಲು ಹಾಕಿದರು.
    ಪ್ರಚಾರಕ್ಕಾಗಿ ಸುರೇಶ್ ಇಂತಹ ಹೇಳಿಕೆ ನೀಡಿದ್ದಾರೆ. ದೇಶ ಅಂದರೆ ತಾಯಿ ಎನ್ನುವ ಕಲ್ಪನೆ ಅವರಿಗಿಲ್ಲ. ಭಾರತ್ ಜೋಡೋ ಎನ್ನುವವರು ಭಾರತ್ ತೋಡೋ ಮಾಡುತ್ತಿದ್ದಾರೆ. ಬಜೆಟ್ ಸಂದರ್ಭದಲ್ಲಿ ತನ್ನ ವೈಯಕ್ತಿಕ ಅಸ್ತಿತ್ವ ತೋರಿಸಿಕೊಳ್ಳಲು ಈ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಬೇಕಾದರೂ ಮಾತನಾಡಬಹುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನೂ ಆ ಪಕ್ಷದ ಮುಖಂಡರು ಕೇಳುವುದಿಲ್ಲ ಎಂದು ಲೇವಡಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts