More

    ರಾಜಣ್ಣ ಜತೆ ಜೆಡಿಎಸ್ ಸಖ್ಯ; ಕಾಂಗ್ರೆಸ್ ಮಾಜಿ ಶಾಸಕ ಕೆಎನ್‌ಆರ್ ಭೇಟಿಯಾದ ಜೆಡಿಎಸ್ ಮುಖಂಡರು

    ತುಮಕೂರು: ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಮಧುಗಿರಿಯ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಜೆಡಿಎಸ್ ಮುಖಂಡರು ಗುರುವಾರ ಭೇಟಿ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಕ್ಯಾತಸಂದ್ರದ ರಾಜಣ್ಣ ನಿವಾಸಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಪಾವಗಡ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮತ್ತಿತರರು ಭೇಟಿ ನೀಡಿ ಗಂಟೆಗೂ ಹೆಚ್ಚು ಕಾಲ ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಶಿರಾ ಬೈಎಲೆಕ್ಷನ್‌ನಲ್ಲಿ ತಾವು ಕೂಡಾ ಟಿಕೆಟ್ ಆಕಾಂಕ್ಷಿ ಎಂದು ರಾಜಣ್ಣ ಹೇಳಿಕೆ ನೀಡಿರುವುದರಿಂದ ಜೆಡಿಎಸ್ ಮುಖಂಡರ ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.

    ಸ್ಪರ್ಧಿಸುವ ಅಪೇಕ್ಷೆ: ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆನ್ನುವ ಅಪೇಕ್ಷೆ ನನಗಿದೆ. ಕಾಂಗ್ರೆಸ್‌ನಿಂದಲೇ ಟಿಕೆಟ್ ಕೇಳುತ್ತೇನೆ. ಬಿಜೆಪಿಯಿಂದ ನಿಲ್ಲುವುದಿಲ್ಲ. ಅಂತಿಮವಾಗಿ ನಮ್ಮ ನಾಯಕರಾದ ಸಿದ್ದರಾಮಯ್ಯ ಹೇಳಿದಂತೆ ಕೇಳುವೆ ಎಂದು ರಾಜಣ್ಣ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
    ಶಿರಾದಲ್ಲಿ ಸ್ವಾಭಿಮಾನಿ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು ಅದಕ್ಕೆ ಸಿದ್ದರಾಮಯ್ಯ ಸೇರಿ ಜಾತ್ಯತೀತವಾಗಿ ಎಲ್ಲ ಮುಖಂಡರನ್ನು ಆಹ್ವಾನಿಸಲಿದ್ದು, ಆ ಸಭೆಗೆ ನಾನೂ ಅತಿಥಿಯಾಗಿ ಭಾಗವಹಿಸುವೆ, ಸಂಘಟಕನಾಗಿ ಅಲ್ಲ. ಆ ಸಭೆಯಲ್ಲಿ ಮುಖಂಡರ ಅಭಿಪ್ರಾಯಗಳನ್ನು ಆಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಪಕ್ಷ ಸೂಚಿಸಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವೆ. ಜಯಚಂದ್ರ ಎರಡು ಬಾರಿ ಶಾಸಕ, ಮಂತ್ರಿ ಕೂಡ ಆಗಿದ್ದವರು, ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ ಎಂದರು.

    ನನ್ನನ್ನ ಉದಾಸಿನ ಮಾಡಿ ಗೆಲ್ಲಲಿ: ಇಡೀ ಜಿಲ್ಲೆಯಲ್ಲಿ ನನ್ನನ್ನು ಉದಾಸೀನ ಮಾಡಿ ಯಾರಾದರೂ ಚುನಾವಣೆ ಗೆಲ್ಲುವೆ ಅನ್ನಲಿ ನೋಡುವೆ. ಜಿಲ್ಲೆಯ 11 ಕ್ಷೇತ್ರದಲ್ಲಿ ಶಿರಾದಲ್ಲೇ ಹೆಚ್ಚು ಜನಪ್ರಿಯತೆ, ಜನರ ಪ್ರೀತಿ ವಿಶ್ವಾಸ ಇರೋದು. 2015ರ ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಮಗ ಆರ್.ರಾಜೇಂದ್ರ ವಿರುದ್ಧ ಜಯಚಂದ್ರ ಕೆಲಸ ಮಾಡಿ ಅವನ ಸೋಲಿಗೆ ಕಾರಣ ಆದ. 2018ರ ವಿಧಾನಸಭೆ ಚುನಾವಣೆಯಲ್ಲಿ ಶಿರಾದಲ್ಲಿ ಜಯಚಂದ್ರ ಗೆದ್ದರೇ ಅರ್ಧ ಮೀಸೆ ತೆಗೀತೀನಿ ಅಂತಾ ಅವತ್ತೇ ಸವಾಲು ಹಾಕಿದ್ದೆ. ಅಷ್ಟು ಧೈರ್ಯವಾಗಿ ಹೇಳಬೇಕು ಅಂದ್ರೇ, ಅಲ್ಲಿನ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿತ್ತು. ಅದಕ್ಕೆ ಅವತ್ತು ಚಾಲೆಂಜ್ ಮಾಡಿದ್ದು, ಸುಮ್ನೆ ಸವಾಲು ಹಾಕಲಿಕ್ಕೆ ಆಗುತ್ತಾ? ದೇವೇಗೌಡರ ಮಯ ಮಾಡೋಕೆ ಹೋದ್ವಿ, ಆದರೆ ಮಾಯಾ ಆಗಿಬಿಟ್ಟರು. ಈಗ ಜಯಚಂದ್ರ ಮಯ ಎಂದು ರಾಜಣ್ಣ ಪರೋಕ್ಷವಾಗಿ ಜಯಚಂದ್ರಗೆ ಎಚ್ಚರಿಕೆ ನೀಡಿದರು.

    ನನ್ನನ್ನ ಉದಾಸಿನ ಮಾಡಿ ಗೆಲ್ಲಲಿ : ಇಡೀ ಜಿಲ್ಲೆಯಲ್ಲಿ ನನ್ನನ್ನು ಉದಾಸೀನ ಮಾಡಿ ಯಾರಾದರೂ ಚುನಾವಣೆ ಗೆಲ್ಲುವೆ ಅನ್ನಲಿ ನೋಡುವೆ. ಜಿಲ್ಲೆಯ 11 ಕ್ಷೇತ್ರದಲ್ಲಿ ಶಿರಾದಲ್ಲೇ ಹೆಚ್ಚು ಜನಪ್ರಿಯತೆ, ಜನರ ಪ್ರೀತಿ ವಿಶ್ವಾಸ ಇರೋದು. 2015ರ ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಮಗ ಆರ್.ರಾಜೇಂದ್ರ ವಿರುದ್ಧ ಜಯಚಂದ್ರ ಕೆಲಸ ಮಾಡಿ ಅವನ ಸೋಲಿಗೆ ಕಾರಣ ಆದ. 2018ರ ವಿಧಾನಸಭೆ ಚುನಾವಣೆಯಲ್ಲಿ ಶಿರಾದಲ್ಲಿ ಜಯಚಂದ್ರ ಗೆದ್ದರೇ ಅರ್ಧ ಮೀಸೆ ತೆಗೀತೀನಿ ಅಂತಾ ಅವತ್ತೇ ಸವಾಲು ಹಾಕಿದ್ದೆ. ಅಷ್ಟು ಧೈರ್ಯವಾಗಿ ಹೇಳಬೇಕು ಅಂದ್ರೇ, ಅಲ್ಲಿನ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿತ್ತು. ಅದಕ್ಕೆ ಅವತ್ತು ಚಾಲೆಂಜ್ ಮಾಡಿದ್ದು, ಸುಮ್ನೆ ಸವಾಲು ಹಾಕಲಿಕ್ಕೆ ಆಗುತ್ತಾ? ದೇವೇಗೌಡರ ಮಯ ಮಾಡೋಕೆ ಹೋದ್ವಿ, ಆದರೆ ಮಾಯಾ ಆಗಿಬಿಟ್ಟರು. ಈಗ ಜಯಚಂದ್ರ ಮಯ ಎಂದು ರಾಜಣ್ಣ ಪರೋಕ್ಷವಾಗಿ ಜಯಚಂದ್ರಗೆ ಎಚ್ಚರಿಕೆ ನೀಡಿದರು.

    ಲಂಚ ಚರ್ಚೆ ತಪ್ಪು !: ಮೈತ್ರಿ ಸರ್ಕಾರ ಬೀಳಿಸೋಕೆ ಡ್ರಗ್ ಮಾಫಿಯಾ ಹಣ ಬಳಸಲಾಗಿದೆ ಎಂಬ ಮಾಜಿ ಸಿಎಂ ಎಚ್‌ಡಿಕೆ ಆರೋಪ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಅದೇ ಥರದ ದುಡ್ಡಲ್ಲಿ ಇವರು ಸರ್ಕಾರ ಉಳಿಸಿಕೊಳ್ಳೋಕೆ ಯಾರಿಗೂ ದುಡ್ಡು ಕೊಟ್ಟೇ ಇಲ್ವಾ? ಇವರೇನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳಾ..? ಇವತ್ತಿನ ದೃಷ್ಟಿಯಲ್ಲಿ ಲಂಚದ ಬಗ್ಗೆ ಯಾರೂ ಚರ್ಚೆ ಮಾಡಬಾರದು. ಚರ್ಚಿಸುವನು ಅಯೋಗ್ಯ ಎಂದರು. ಸ್ವಾಮೀಜಿಗಳಿಗೆ ಕಾಣಿಕೆ, ದಕ್ಷಿಣೆ ರೂಪದಲ್ಲಿ, ಲಾಯರ್‌ಗಳಿಗೆ ಕೊಡುವುದನ್ನು ಫೀಸ್ ಅಂತೀವಿ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕೊಟ್ಟರೆ ಲಂಚ ಅಂತೀವಿ. ನಾನಂತೂ ಮೈತ್ರಿ ಸರ್ಕಾರ ಹೋಗಬೇಕು ಅಂತಿದ್ದವನು. ಅದರಲ್ಲಿ ಅನುಮಾನವೇ ಇಲ್ಲ ಎಂದರು.

    ಟಿಬಿಜೆ ಮಾಜಿ ಮಂತ್ರಿ, ನಂ 2. ಮುಂದೆ ಸಿಎಂ ಆಗೋ ಕ್ಯಾಂಡಿಡೇಟ್. ಅವರು ಗೆಲ್ಲೋಕೆ ಆಗಲ್ಲಾ ಅಂದ್ರೇ ಏನ್ ಅರ್ಥ. ನನ್ನಂತ ನೂರು ಜನ ವಿರೋಧಿಸಿದರೂ ಗೆಲ್ಲುತ್ತಾರೆ. ರಾಜಕಾರಣದಲ್ಲಿ ಇವತ್ತು ಇದ್ದಿದ್ದು ನಾಳೆ ಇರೊಲ್ಲ. ಗೆಲ್ಲೋವಾಗ ಎಲ್ಲಾ ನನ್ನ ಬಳಸಿಕೊಳ್ಳುತ್ತಾರೆ. ನಮಗ್ಯಾರೂ ಸಹಾಯ ಮಾಡಲ್ಲಾ. ಅದು ಈ ಜಿಲ್ಲೆಯ ದುರಂತ.
    ಕೆ.ಎನ್.ರಾಜಣ್ಣ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts