More

    ವಾಸ್ತವಿಕ ಘಟಿಕೋತ್ಸವದ ಸಂತಸ ಕಸಿದ ಕೋವಿಡ್​ 19, ವರ್ಚುಯಲ್​ ಆಗಿ ಪದವಿ ಸ್ವೀಕರಿಸಿದ ಜಪಾನ್​ ಪದವೀಧರರು

    ನವದೆಹಲಿ: ಕರೊನಾ ಪಿಡುಗು ಇಡೀ ಜಗತ್ತನ್ನು ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ. ಇದರಿಂದಾಗಿ ಶಾಲಾ-ಕಾಲೇಜುಗಳು ಕೂಡ ಬಂದ್​ ಆಗಿವೆ. ಹೀಗಾಗಿ ಪದವಿ ಶಿಕ್ಷಣ ಪೂರೈಸಿದ್ದರೂ ಸಹಸ್ರಾರು ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಪಡೆಯಲಾಗದೆ ಪರದಾಡುತ್ತಿದ್ದಾರೆ.

    ಆದರೆ ಜಪಾನ್​ನ ಟೋಕಿಯೋದ ಬಿಜಿನೆಸ್​ ಬ್ರೇಕ್​ಥ್ರೂ ಯೂನಿವರ್ಸಿಟಿ ತನ್ನ ಪದವೀಧರರ ಸಂಕಷ್ಟವನ್ನು ಅರ್ಥ ಮಾಡಿಕೊಂಡಿತ್ತು. ಅವರೆಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲು ವರ್ಚುಯಲ್​ ಘಟಿಕೋತ್ಸವ ಆಯೋಜಿಸಿತ್ತು.

    ಎಎನ್​ಎ ಡೆವೆಲಪರ್ಸ್​ ಅಭಿವೃದ್ಧಿಪಡಿಸಿರುವ ನ್ಯೂಮೀ ಎಂಬ ರೋಬಾಟ್​ಗಳ ನೆರವಿನಿಂದ ಘಟಿಕೋತ್ಸವ ಕಾರ್ಯಕ್ರಮ ನಡೆಸಲಾಯಿತು. ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಎರಡು ರೋಬಾಟ್​ಗಳನ್ನು ನಿಲ್ಲಿಸಲಾಗಿತ್ತು. ಅವಕ್ಕೆ ಗ್ರಾಜುಯೇಷನ್​ ಕ್ಯಾಪ್​ಗಳು ಮತ್ತು ಗೌನ್​ಗಳನ್ನು ತೊಡಿಸಲಾಗಿತ್ತು. ರೋಬಾಟ್​ಗಳ ಮುಖ ಭಾಗದಲ್ಲಿ ಟ್ಯಾಬ್ಲೆಟ್​ಗಳನ್ನು ಅಳವಡಿಸಲಾಗಿತ್ತು. ಪದವೀಧರರು ವಿಡಿಯೋ ಕಾನ್ಫರೆನ್ಸ್​ ಮೂಲಕ ತಮ್ಮ ಮನೆಗಳಿಂದಲೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಹೆಸರು ಕೂಗುತ್ತಿದ್ದಂತೆ ಆಯಾ ಪದವೀಧರರ ಮುಖಗಳು ರೋಬಾಟ್​ಗಳ ಟ್ಯಾಬ್ಲೆಟ್​ಗಳಲ್ಲಿ ಕಾಣಿಸುತ್ತಿದ್ದವು.

    ಸಭಾಂಗಣದಲ್ಲಿದ್ದ ಕಾಲೇಜು ಸಿಬ್ಬಂದಿ ಕರತಾಡನ ಮಾಡಿ, ಪದವೀಧರರನ್ನು ಅಭಿನಂದಿಸಿದರೆ, ವಿಶ್ವವಿದ್ಯಾಲಯದ ಪ್ರಮುಖ ಕೆನಿಚಿ ಒಹಾಮೆ ಆಯಾ ಪದವೀಧರರ ಪದವಿ ಪ್ರಮಾಣಪತ್ರಗಳನ್ನು ರೋಬಾಟ್​ನ ಕೈಗಳಲ್ಲಿ ಇಡುತ್ತಿದ್ದರು.

    ವರ್ಚುಯಲ್​ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಸ್ವೀಕರಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕಾಜುಕಿ ತಾಮುರಾ, ಇದೊಂದು ವಿಶಿಷ್ಟ ಅನುಭವ ನೀಡಿತು. ಮನೆಯಲ್ಲೇ ಕುಳಿತು ಸಾರ್ವಜನಿಕವಾಗಿ ಪ್ರಮಾಣಪತ್ರ ಸ್ವೀಕರಿಸಿದ್ದು ವಿಶೇಷವಾಗಿತ್ತು ಎಂದು ಹೇಳಿದರು.

    ಸಾಮಾನ್ಯವಾಗಿ ಪದವೀಧರರು ಪದವಿ ಪ್ರಮಾಣಪತ್ರ ಸ್ವೀಕರಿಸಿದ ಬಳಿ ತಮ್ಮ ಸ್ನೇಹಿತರ ಜತೆಗೂಡಿ ಗ್ರಾಜುಯೇಷನ್​ ಕ್ಯಾಪ್​ಗಳನ್ನು ಗಾಳಿಯಲ್ಲಿ ತೂರಿ ಸಂಭ್ರಮಿಸುವುದು ವಾಡಿಕೆ. ಆದರೆ, ವರ್ಚುಯಲ್​ ಘಟಿಕೋತ್ಸವದಲ್ಲಿ ಇಂಥ ಸಂಭ್ರಮಾಚರಣೆಗೆ ಅವಕಾಶವಿಲ್ಲದ್ದು, ಪದವೀಧರರಿಗೆ ಸ್ವಲ್ಪ ನಿರಾಸೆಯನ್ನುಂಟು ಮಾಡಿತು. ಆದರೂ, ಪ್ರಮಾಣಪತ್ರಗಳನ್ನು ಸ್ವೀಕರಿಸಿದ ಹರ್ಷ ಅವರ ಮುಖದಲ್ಲಿ ಕಾಣಿಸುತ್ತಿತ್ತು.

    ಲಾಕ್​ಡೌನ್​ ವಿಸ್ತರಣೆಯ ಪ್ರಧಾನಿ ನರೇಂದ್ರ ಮೋದಿ ನಿರ್ಧಾರವನ್ನು ಸಮರ್ಥಿಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts