More

    ಜಂಗಮ ವಟುಗಳಿಗೆ ಉಚಿತ ಅಯ್ಯಾಚಾರ ಮತ್ತು ಭಕ್ತರಿಗೆ ಶಿವದೀಕ್ಷೆ: ಪ್ರಭಯ್ಯ ದಂಡಾವತಿ ಮಠ

    ಗದಗ: ಅಖಿಲ ಭಾರತ ಜಂಗಮ ಸೇವಾ ಸಮಿತಿ ಗದಗ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ, ಜಂಗಮ ವಟುಗಳಿಗೆ ಉಚಿತ ಅಯ್ಯಾಚಾರ ಮತ್ತು ಭಕ್ತರಿಗೆ ಶಿವದೀಕ್ಷೆ  ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಇದೇ ಫೆ. ೧೧ ರಂದು ಮುಂಜಾನೆ ೧೦ ಗಂಟೆಗೆ  ಮುಳಗುಂದನಾಕಾದ  ಅಡವೀಂದ್ರಸ್ವಾಮಿ ಮಠದಲ್ಲಿ ಜರುಗಲಿದೆ ಎಂದು ಅಖಿಲ ಭಾರತ ಜಂಗಮ ಸೇವಾ ಸಮಿತಿ ಅಧ್ಯಕ್ಷ ಪ್ರಭಯ್ಯ ದಂಡಾವತಿ ಮಠ ಅವರು ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ  ಫೆ. ೧೧ ರಂದು ಬೆಳಿಗ್ಗೆ ೪.೩೦  ಗಂಟೆಗೆ ಜಂಗಮ ವಟುಗಳಿಗೆ  ಉಚಿತ ಅಯ್ಯಾಚಾರ ಮತ್ತು ಭಕ್ತರಿಗೆ ಶಿವದೀಕ್ಷೆ ಸಮಾರಂಭ ಜರುಗಲಿದೆ. ಅಡ್ನೂರು-ರಾಜೂರು-ಗದಗ  ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮಲ್ಲಸಮುದ್ರ-ಸೊರಟೂರು-ಕಳಸಾಪುರ ಓಂಕಾರೇಶ್ವರ ಹಿರೇಮಠದ ಪೂಜ್ಯಶ್ರೀ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ವೈದಿಕ ವೃಂದದಿಂದ   ಜಂಗಮ ವಟುಗಳಿಗೆ ಉಚಿತ ಅಯ್ಯಾಚಾರ ಮತ್ತು ಭಕ್ತರಿಗೆ ಶಿವದೀಕ್ಷೆ ಕರುಣಿಸುವರು.

    ಫೆ. ೧೧ ರಂದು ಬೆಳಿಗ್ಗೆ ೯.೩೦ ಗಂಟೆಗೆ ಡಾ. ಶಿವಬಸಯ್ಯ ಗಡ್ಡದಮಠ, ಪ್ರೊ. ಮೃತ್ಯುಂಜಯ ಮಠದ, ಶ್ರೀಶೈಲ ಚಿಕ್ಕಮಠ ಹಾಗೂ ಅಕ್ಷತಾ ಹಿರೇಮಠ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗುವುದು. ಬೆಳಿಗ್ಗೆ ೧೦  ಗಂಟೆಗೆ ಅಖಿಲ ಭಾರತ ಜಂಗಮ ಸೇವಾ ಸಮಿತಿ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗುವುದು. ಈ ಕಾರ್ಯಕ್ರಮದಲ್ಲಿ ಉಜ್ಜಯಿನಿ ಮಹಾಪೀಠದ ಪೂಜ್ಯಶ್ರೀ ಅಭಿನವ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಹಾಗೂ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ಪೂಜ್ಯಶ್ರೀ ನಾಡೋಜ ಜ. ಡಾ. ಅನ್ನದಾನೇಶ್ವರ ಮಹಾಶಿವಯೋಗಿಗಳು ಪಾವನ ಸಾನಿಧ್ಯ ವಹಿಸುವವರು.

    ಅಡವಿಂದ್ರ ಸ್ವಾಮಿಗಳಮಠದ ಧರ್ಮದರ್ಶಿಗಳಾದ ಪೂಜ್ಯಶ್ರೀ ಮಹೇಶ್ವರಸ್ವಾಮಿಗಳು ಹೊಸಳ್ಳಿಮಠ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ರಾಜಗುರು ಗುರುಸ್ವಾಮಿ ಕಲಿಕೇರಿ ಗವಾಯಿಗಳು ಸಮ್ಮುಖ ವಹಿಸುವವರು. ಅಖಿಲ ಭಾರತ ಜಂಗಮ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಭಯ್ಯ ದಂಡಾವತಿಮಠ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಬಸಯ್ಯ ಸಾಸ್ವಿಹಳ್ಳಿಮಠ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಅಸೂಟಿ ಹಿರೇಮಠದ ರೇವಣಸಿದ್ದಯ್ಯ ಸ್ವಾಮಿಗಳು, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್. ಪಿ.  ಸಂಶಿಮಠ, ನಿವೃತ್ತ ಡಿವೈಎಸ್ಪಿ ಬಿ. ಆರ್. ಚೌಕಿಮಠ, ಹುಬ್ಬಳ್ಳಿಯ ಯುವ ಮುಖಂಡರಾದ ಬಂಗಾರೇಶ ಹಿರೇಮಠ, ಗದಗ ವಾಣಿಜ್ಯೋಧ್ಯಮ ಸಂಸ್ಥೆಯ ಅಧ್ಯಕ್ಷ ಈಶಣ್ಣ ಮುನವಳ್ಳಿ, ಡಾ. ಎಸ್. ಕೆ. ನಾಲತ್ವಾಡಮಠ, ಶ್ರೀಮತಿ ಎಸ್. ಎಸ್. ಜಂಗಿನಮಠ, ವೀರೇಶಕುಮಾರ ಹೆಬ್ಬಾಳ, ರಾಜೇಶ ಕಲ್ಯಾಣಶೆಟ್ಟಿ, ಮಂಜುನಾಥ ಬೇಲೇರಿ ಸೇರಿದಂತೆ ಮುಂತಾದವರು ಭಾಗವಹಿಸುವರು.

    ಇದೇ ಸಂದರ್ಭದಲ್ಲಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ವೇ.ಮೂ. ಪಂಡಿತ ಸಿದ್ದೇಶ್ವರ ಶಾಸ್ತ್ರಿಗಳು ತೆಲ್ಲೂರ, ಬದರಿನಾಥ ಹೊಂಬಾಳಿ ಪ್ರಶಸ್ತಿ ಪುರಸ್ಕೃತ  ಪತ್ರಕರ್ತರಾದ ವೆಂಕಟೇಶ ಬಿ. ಇಮರಾಪೂರ ಹಾಗೂ ಟಿ. ನಾರಾಯಣಪ್ಪ ಪ್ರಶಸ್ತಿ ಪುರಸ್ಕೃತ ಮಾಳಿಂಗರಾಯ ಅವರನ್ನು ಸನ್ಮಾನಿಸಲಾಗವುದು.

    ಕಾರ್ಯದರ್ಶಿ ಮೃತ್ಯುಂಜಯ ಕುಲಕರ್ಣಿ ಅವರು ಮಾತನಾಡಿ, ಸೇವಾಸಮಿತಿ ವತಿಯಿಂದ 75 ಜನರಿಗೆ ಅಯ್ಯಾಚಾರ,100 ಜನರಿಗೆ ಶಿವದೀಕ್ಷೆ ಹಮ್ಮಿಕೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ಉದ್ಯೋಗಮೇಳ, ವಧು-ವರರ ಸಮಾವೇಶ ಹಾಗೂ ಎಲ್ಲ ವರ್ಗದ ಸಾಧಕರಿಗೆ ಸನ್ಮಾನ  ಮಾಡಲಾಗುವದು ಎಂದು ಹೇಳಿದರು.

    ಈ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಜಂಗಮ ಸೇವಾ ಸಮಿತಿಯ  ಬಸಯ್ಯ ಸಾಸ್ವಿಹಳ್ಳಿಮಠ ಗೌರಾವಾಧ್ಯಕ್ಷ,ಉಪಾಧ್ಯಕ್ಷ ಶಾಂತಯ್ಯ ಮುತ್ತಿನಪೆಂಡಿಮಠ, ಕುಮಾರಸ್ವಾಮಿ ಹಿರೇಮಠ, ಖಜಾಂಚಿ ವೀರಯ್ಯ ಕಂಬಾಳಿಮಠ ಸೇರಿದಂತೆ ಮುಙತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts