More

    ಜನಮತ | ಅಲ್ಪಕಾಲೀನ ಯೋಜನೆಗಳೂ ಅಗತ್ಯ

    ಕೇಂದ್ರ ಬಜೆಟ್​ನ್ನು ‘ಹೊಸ ದಶಕದ ಅಭಿವೃದ್ಧಿಯ ಬೀಜಾಂಕುರ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಬೀಜ ಸಸಿಯಾಗಿ, ಮರವಾಗಿ ಬೆಳೆದು ಫಲ ನೀಡಲು ಕಾಯಬೇಕು. ಆದರೆ, ವಾಸ್ತವದಲ್ಲಿ ದೇಶದ ಜನತೆ ದೀರ್ಘಕಾಲ ಕಾಯಲಾರರು. ‘ಜಾಗತಿಕ ಚಿಂತನೆ ಪ್ರಾದೇಶಿಕ ಆಚರಣೆ’ (ಥಿಂಕ್ ಗ್ಲೋಬಲಿ ಆಕ್ಟ್ ಲೋಕಲಿ) ಎಂಬಂತೆ ದೇಶದ ಸಮಗ್ರ ಅಭಿವೃದ್ಧಿಯ ಕನಸುಗಳನ್ನು ಕಾಣುವ ಪ್ರಧಾನಿ ಜನತೆಯ ಆಶೋತ್ತರ ಮತ್ತು ನಾಡಿಮಿಡಿತ ಅರಿಯುವ ಪ್ರಯತ್ನವನ್ನೂ ಜೊತೆಜೊತೆಗೆ ಮಾಡಬೇಕು. ದೇಶಕ್ಕೆ ದೀರ್ಘಕಾಲೀನ ಯೋಜನೆಗಳ ಜೊತೆ ಅಭಿವೃದ್ಧಿ ಗೋಚರಿಸುವಂಥ ಅಲ್ಪಕಾಲೀನ ಯೋಜನೆಗಳನ್ನೂ ನೀಡಬೇಕಿದೆ. ಸಾಮಾನ್ಯರಿಗೆ ಬಜೆಟ್ ಎಂದರೆ ದೇಶದ ಅಭಿವೃದ್ಧಿ ಅಥವಾ ವಿಕಾಸಕ್ಕಿಂತ ನಿತ್ಯಬಳಕೆಯ ವಸ್ತುಗಳ ಬೆಲೆಯಲ್ಲಿ, ಪ್ರತ್ಯಕ್ಷ ತೆರಿಗೆಗಳಲ್ಲಿ ಏರಿಳಿತ ಎಂಬಂತಾಗಿದೆ. ಅಲ್ಲದೆ, ವಿರೋಧ ಪಕ್ಷಗಳು ಈ ವಿಷಯಗಳನ್ನೇ ಪ್ರಸ್ತಾಪಿಸಿ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆದರೆ, ಈ ಬಾರಿಯ ಬಜೆಟ್ ಘೋಷಣೆಗಳು ಅನಿಯಂತ್ರಿತ ಖಾಸಗೀಕರಣ, ವಿದೇಶಿ ಬಂಡವಾಳದ ಮೇಲೆ ನಿರ್ಭರತೆ, ಪ್ರಾದೇಶಿಕ ಅಸಮಾನತೆ ಮತ್ತು ನಿತ್ಯವಸ್ತುಗಳ ಬೆಲೆಏರಿಕೆಯ ಬಿಸಿಗೆ ಕಾರಣವಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಹಣಕಾಸು ಮಂತ್ರಿಗಳು ಪ್ರಸ್ತಾಪಿಸಿದ ವಚನದಂತೆ ‘ರಾಜನಾದವನು ಸಂಪತ್ತನ್ನು ನಿರ್ವಿುಸಿ, ಸಂಪಾದಿಸಿ, ವೃದ್ಧಿಸಿ, ರಕ್ಷಿಸಿ, ಸಾಮಾನ್ಯರ ಒಳಿತಿಗಾಗಿ ಬಳಸಬೇಕು. ಮತ್ತು ಅದರ ಮಾಹಿತಿ ಜನರಿಗೆ (ಫಲಾನುಭವಿಗಳಿಗೆ) ಆಗುವಂತೆ ಯೋಜನೆಗಳನ್ನು ರೂಪಿಸಬೇಕು’.

    | ಮಹಾದೇವಯ್ಯ ಕರದಳ್ಳಿ ಸ್ವದೇಶಿ ಅರ್ಥಿಕ ಚಿಂತಕರು, ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts