More

    ಜನಮತ | ಸದ್ಯದ ಸ್ಥಿತಿಯಲ್ಲಿ ಸಾಹಿತ್ಯ ಸಮ್ಮೇಳನ ಬೇಡ

    ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದಷ್ಟೇ ತನ್ನ ಪರಮ ಗುರಿ ಮತ್ತು ಅದೊಂದೇ ಕನ್ನಡದ ಅಭಿವೃದ್ಧಿಯ ದಾರಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ನಂಬಿದಂತಿದೆ. ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಬೇಕೆಂದು ಸಮ್ಮೇಳನಗಳಲ್ಲಿ ನಿರ್ಣಯ ಮಂಡಿಸಿ ಅದು ಸುದ್ದಿ ಮಾಡುತ್ತದೆಯೆ ಹೊರತು ಇಷ್ಟೂ ಸಮ್ಮೇಳನಗಳ ನಿರ್ಣಯಗಳು ಏನಾದವು ಎಂಬುದರ ಬಗ್ಗೆ ಯೋಚಿಸಿದ ಬಗ್ಗೆ ಪುರಾವೆಗಳಿಲ್ಲ. ಸಾಹಿತ್ಯ ಪರಿಷತ್ತು ಸಮ್ಮೇಳನದ ನೆವದಲ್ಲಿ ಸುದ್ದಿಯಲ್ಲಿ ಇರುತ್ತದೆ ಅಷ್ಟೆ. ಈಗಂತೂ ಈ ಸಮ್ಮೇಳನಗಳ ಖರ್ಚುವೆಚ್ಚಗಳು ಹತ್ತು ಕೋಟಿಯನ್ನೂ ಮೀರುವುದರಿಂದ ಸಮ್ಮೇಳನವನ್ನು ನಡೆಸಲು ಯಾಕಿಷ್ಟು ಉತ್ಸಾಹ ಎಂದು ಮತ್ತೆ ಹೇಳಬೇಕಿಲ್ಲ.

    ಸದ್ಯ ನಮ್ಮೆಲ್ಲರ ತನು ಮನ ಧನವನ್ನು ಕಿತ್ತುಕೊಂಡಿರುವ ಕೋವಿಡ್ ವ್ಯಾಧಿ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಮಾಡಿರುವ ಪರಿಣಾಮ ಘೊರವಾದುದು. ದೇಶಕ್ಕೆ ದೇಶವೇ ಪರಿತಪಿಸುತ್ತ ಇರುವಾಗ, ಹಣಕಾಸಿನ ಸಮಸ್ಯೆ ಬಿಗಡಾ ಯಿಸಿರುವಾಗ ಪರಿಷತ್ತಿನ ಅಧಿಕಾರಾವಧಿಯನ್ನು ಮೂರರಿಂದ ಐದು ವರ್ಷಕ್ಕೆ ತಿದ್ದಿಕೊಂಡ ಕಾರ್ಯಕಾರಿಣಿ ಕ್ರಮ ಸರಿಯಾದುದಲ್ಲ. ಏಕೆಂದರೆ ಅದು ಬರುವ ಫೆಬ್ರವರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಹೇಳಿದೆ. ಇಂಥ ಆರ್ಥಿಕ ದುಸ್ಥಿತಿಯಲ್ಲಿ ಸಮ್ಮೇಳನದ ಅಗತ್ಯವಾದರೂ ಏನಿದೆ? ಕನ್ನಡದ ಉದ್ಧಾರಕ್ಕೆ ಸಮ್ಮೇಳನವೊಂದೇ ದಾರಿಯಲ್ಲ. ಈ ಕುರಿತು ನಾಡಿನ ಚಿಂತಕರು ರ್ಚಚಿಸಿ ಸಮ್ಮೇಳನವನ್ನು ಸದ್ಯದ ಸ್ಥಿತಿಯಲ್ಲಿ ನಡೆಸದೇ ಇರಲು ಸರ್ಕಾರವನ್ನು ಒತ್ತಾಯಿಸಬೇಕಿದೆ.

    | ಡಿ.ಎಸ್.ರಾಮಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts