More

    ಹುನ್ನೂರಿನ ವೈಎಂಸಿ ಕ್ಲಬ್‌ಗೆ ಗೆಲುವು

    ಜಮಖಂಡಿ: ತಾಲೂಕಿನ ಹುನ್ನೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಪುರುಷರ ಮುಕ್ತ ಖೋಖೋ ಪಂದ್ಯಾವಳಿಯಲ್ಲಿ ಹುನ್ನೂರಿನ ವೈಎಂಸಿ ಕ್ಲಬ್ ಪ್ರಥಮ ಸ್ಥಾನ ಪಡೆದು ಟ್ರೋಫಿ ತನ್ನ ಮಡಿಲಿಗೆ ಹಾಕಿಕೊಂಡಿದೆ.

    ಸೋಮವಾರ ತಡರಾತ್ರಿ ಹೊನಲು ಬೆಳಕಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹುನ್ನೂರು ವೈಎಂಸಿ ಕ್ಲಬ್ ಬೆಳಗಾವಿ ವಿಘ್ನ ಹರ್ಥಾ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಸೆಣಸಾಡಿ ಗೆಲುವಿನ ಕೇಕೆ ಹಾಕಿತು. ಬೆಳಗಾವಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತು.

    ಸೆಮಿಫೈನಲ್ ಪಂದ್ಯಗಳು ಮುಗಿದ ಬಳಿಕ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕುಂದರಗಿ ತಂಡ ಅಮ್ಮಲಜೇರಿ ತಂಡವನ್ನು ಸೋಲಿಸಿತು. ಕುಂದರಗಿ ತಂಡ 3ನೇ ಸ್ಥಾನ ಪಡೆದರೆ ಅಮ್ಮಲಜೇರಿ ತಂಡ ನಾಲ್ಕನೇ ಸ್ಥಾನ ಪಡೆಯಿತು.

    ರೇಣುಕಾದೇವಿ ಗೆಳೆಯರ ಬಳಗ ಹಾಗೂ ವೈಎಂಸಿ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ದೈಹಿಕ ಶಿಕ್ಷಕರಾದ ಸಿ.ಕೆ.ಚನಾಳ, ಎಂ.ಪಿ.ಜೀರಗಾಳ, ಪಿ.ಎಸ್.ಸವಳತೋಟ, ಆರ್.ಡಿ.ಅಥಣಿ ಮತ್ತಿತರರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

    ಬಹಮಾನ ವಿತರಣೆ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ ಮೈಗೂರ, ಮಾಜಿ ಅಧ್ಯಕ್ಷ ರಾಜು ಸವಣೂರ, ಮಾಜಿ ಸದಸ್ಯ ನಿಂಗಪ್ಪ ಸವಣೂರ, ಶಂಕರ ಕೋರನವರ, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವರಾಜ ಬಾಗೆನ್ನವರ, ಮುಖಂಡ ಹಣಮಂತರಾಯ ಬಿರಾದಾರ, ಬಸವರಾಜ ಯಾದವಾಡ, ಬಸವರಾಜ ಹುಲ್ಯಾಳ ಇತರರು ಭಾಗವಹಿಸಿದ್ದರು.



    ಹುನ್ನೂರಿನ ವೈಎಂಸಿ ಕ್ಲಬ್‌ಗೆ ಗೆಲುವು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts