More

    ಅಕ್ರಮ ಕಂಡು ಬಂದರೆ ಕ್ರಮ

    ಜಮಖಂಡಿ: ಚುನಾವಣೆ ಅಕ್ರಮ, ಹಣ ಮತ್ತು ಹೆಂಡ ಹಂಚುವುದನ್ನು ತಡೆಗಟ್ಟಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಪಂಗೆ ಸದಸ್ಯರ ಆಯ್ಕೆಯಲ್ಲಿ ಹರಾಜು ಪ್ರಕ್ರಿಯೆ ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಜೇಂದ್ರ ಎಚ್ಚರಿಸಿದರು.

    ನಗರದ ರಮಾನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಒಟ್ಟು 26 ಗ್ರಾಮ ಪಂಚಾಯಿತಿಗಳ 496 ಸ್ಥಾನಗಳಿಗೆ 1070 ಅಭ್ಯರ್ಥಿಗಳು ಕಣದಲ್ಲಿದ್ದು 39 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಜಮಖಂಡಿ ಉಪವಿಭಾಗ ವ್ಯಾಪ್ತಿಯ 89 ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಒಟ್ಟು 5597 ನಾಮಪತ್ರಗಳು ಸ್ವೀಕೃತವಾಗಿದ್ದು 89 ನಾಮಪತ್ರಗಳು ತಿರಸ್ಕೃತಗೊಂಡಿವೆ. ಮೊದಲನೇ ಹಂತದ ಒಟ್ಟು 89 ಗ್ರಾಮ ಪಂಚಾಯಿತಿಗಳ 1592 ಸ್ಥಾನಗಳ ಪೈಕಿ 41 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಜಮಖಂಡಿ ತಾಲೂಕಿನಲ್ಲಿ ಸ್ವೀಕೃತವಾದ ಒಟ್ಟು 1865 ನಾಮಪತ್ರಗಳ ಪೈಕಿ 30 ತಿರಸ್ಕೃತವಾಗಿವೆ. ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಸ್ವೀಕೃತವಾದ ಒಟ್ಟು 1220 ನಾಮಪತ್ರಗಳ ಪೈಕಿ 15 ತಿರಸ್ಕೃತವಾಗಿವೆ. ಮುಧೋಳ ತಾಲೂಕಿನಲ್ಲಿ ಸ್ವೀಕೃತವಾದ 1414 ನಾಮಪತ್ರಗಳ ಪೈಕಿ 19 ತಿರಸ್ಕೃತವಾಗಿವೆ. ಬೀಳಗಿ ತಾಲೂಕಿನಲ್ಲಿ ಸ್ವೀಕೃತವಾದ ಒಟ್ಟು 1098 ನಾಮಪತ್ರಗಳ ಪೈಕಿ 25 ತಿರಸ್ಕೃತವಾಗಿವೆ.

    ಜಮಖಂಡಿ ತಾಲೂಕಿನ ಸಾವಳಗಿ ಹಾಗೂ ಬೀಳಗಿ ತಾಲೂಕಿನ ರೊಳ್ಳಿ ಗ್ರಾಪಂ ಚುನಾವಣೆ ಬಹಿಷ್ಕಾರವಾಗಿದ್ದು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಎಸ್‌ಪಿ ಲೋಕೇಶ ಜಗಲಾಸರ್ ಮಾತನಾಡಿ, ಮೊದಲ ಹಂತದ ಚುನಾವಣೆಯಲ್ಲಿ ಪ್ರತಿ ಬೂತ್‌ಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. 162 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದರು. ಎಸಿ ಡಾ.ಸಿದ್ದು ಹುಲ್ಲೋಳಿ, ಡಿವೈಎಸ್‌ಪಿ ಜಿ.ಪಾಂಡುರಂಗಯ್ಯ, ತಹಸೀಲ್ದಾರ್ ಸಂಜಯ ಇಂಗಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts