More

    ಶುಕ್ರದೆಸೆ ವಂಚಿತ ಜಾಲವಾಡಗಿ ಏತ ನೀರಾವರಿ?

    ಶಿವಾನಂದ ಹಿರೇಮಠ ಗದಗ
    ನರಗುಂದ ಹೊರತುಪಡಿಸಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದ 29 ಹಳ್ಳಿಗಳ ಕುಡಿಯುವ ನೀರಿನ ಬರ ಹೋಗಲಾಡಿಸಲು 29 ಕೆರೆಗಳ ಭತಿರ್ಗೆ ರೂಪಿಸಿದ್ದ 197.50 ಕೋಟಿ ರೂ. ವೆಚ್ಚದ ಜಾಲವಾಡಗಿ ಏತ ನೀರಾವರಿ ಯೋಜನೆಗೆ ಇನ್ನೂ ಶುಕ್ರದೆಸೆ ಕೂಡಿ ಬಂದಿಲ್ಲ.
    ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಸಿಎಂ ನೇತೃತ್ವದ ಕರ್ನಾಟಕ ನೀರಾವರಿ ನಿಗಮ ಮಂಡಳಿ ರಚನೆಯಾಗದ ಹಿನ್ನೆಲೆ ಯೋಜನೆಗೆ ಆರಂಭಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಅದಾಗ್ಯೂ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಥಿರ್ಕ ಕ್ರೂಢಿಕರಣವೇ ಭಾರ ಎನಿಸಿದ್ದು, ಹೊಸ ನೀರಾವರಿ ಯೋಜನೆಗೆ ಅನುದಾನ ಒದಗಿಸುವ ಬಗ್ಗೆ ಅನುಮಾನ ಮೂಡುತ್ತಿದೆ.
    ಮುಂಡರಗಿ ತಾಲೂಕಿನ ರೋಣ ವಿಧಾನಸಭಾ ಕ್ಷೇತ್ರದಲ್ಲಿ, ಚುನಾವಣಾ ಸಂದರ್ಭದಲ್ಲಿ ಮಾಜಿ ಶಾಸಕ ಕಳಕಪ್ಪ ಬಂಡಿ ಕಾಮಗಾರಿ ಅನುಷ್ಠಾನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ರಾಜ್ಯದಲ್ಲಿ ಸರ್ಕಾರ ಬದಲಾಗಿ ಈಗ ಹೊಸ ಸರ್ಕಾರ ಅಸ್ತಿತ್ವದಲ್ಲಿದೆ. ನೂತನ ಮಂಡಳಿ ಅನುಮತಿ ಯೋಜನೆಗೆ ಅನಿವಾರ್ಯವಿದೆ ಹಾಗೂ ಈ ಯೋಜನೆಗೆ ತಾಂತ್ರಿಕ ಅನುಮೋದನೆಯೂ ಬಾಕಿ ಎಂದು ಹೇಳಲಾಗುತ್ತಿದೆ.

    ಏನಿದು ಯೋಜನೆ?
    ಶಿರಹಟ್ಟಿ ವ್ಯಾಪ್ತಿಯಲ್ಲಿ 10 ಕೆರೆ, ಮುಂಡರಗಿ 5 ಹಾಗು ಗದಗ ತಾಲೂಕಿನ 19 ಹಳ್ಳಿಯ ಕೆರೆಗಳು ಸೇರಿ ಒಟ್ಟಾರೆ 29 ಕೆರೆಗಳಿಗೆ ಮುಂಡರಗಿ ತಾಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರ ನದಿಗೆ ನಿಮಿರ್ಸಿಲಾಗಿರುವ ಸಿಂಗಟಾಲೂರು ಬ್ಯಾರೇಜ್​ ಹಿನ್ನೀರಿನ ಎಡಭಾಗದಲ್ಲಿ ಇರುವ ಹಮ್ಮಗಿ ಮತ್ತು ಕಡಕೋಳದಲ್ಲಿ ನೀರನ್ನು ಎತ್ತುವಳಿ ಮಾಡಲಾಗುತ್ತದೆ. 557 ಮಿಲಿಯನ್​ ಕ್ಯೂಬಿಕ್​ ಫೀಟ್​(ಎಂಸಿ​ಟಿ) ನೀರನ್ನು ಜುಲೈ ನಿಂದ ನವೆಂಬರ್​ ಅವಧಿಯಲ್ಲಿ 150 ದಿನ ಎತ್ತುವಳಿ ಮಾಡಿ ಕೆರೆಗಳಿಗೆ ಪೂರೈಸುವ ಯೋಜನೆ ಇದಾಗಿದೆ. ಹಮ್ಮಗಿ ಮತ್ತು ಕಡಕೋಳ ಗ್ರಾಮದಲ್ಲಿ ಪ್ರತ್ಯೇಕ ಎರಡು ನೀರು ಎತ್ತುವಳಿ ಕೇಂದ್ರ ಸ್ಥಾಪಿಸಲಾಗುತ್ತದೆ. ಹಮ್ಮಗಿಯಲ್ಲಿ 4 ಪಂಪ್​, ಕಡಕೋಳದಲ್ಲಿ 3 ಪಂಪ್​ ಅಳವಡಿಸಲಾಗುತ್ತದೆ. ನೀರು ಪೂರೈಕೆಗೆ 57 ಕಿಮೀ ಉದ್ದ ಪೈಪ್​ಲೈನ್​ ಅಳವಡಿಸಲಾಗುವುದು. ಶಿಪ್ರಾಮಾ ಕನ್ಸಲ್ಟಿಂಗ್​ ಇಂಜಿನಿಯರ್ಸ್​ ಯೋಜನೆಯ ನೀಲ ನೆ ತಯಾರಿಸಿದೆ.

    ವಿದ್ಯುತ್​ ಪೂರೈಕೆ:
    ಯೋಜನೆ ಅನುಷ್ಠಾನಕ್ಕೆ ಹಮ್ಮಗಿ ಪಾಂಯಿಂಟ್​ನಲ್ಲಿ 7000 ಕೆವಿ ಆಂಪ್ಸ್​, ಕಡಕೋಳದಲ್ಲಿ 4000 ಕೆವಿ ಆಂಪ್ಸ್​ ವಿದ್ಯುತ್​ ಅಗತ್ಯದೆ ಇದೆ. ಹಮ್ಮಗಿ ಮತ್ತು ಶಿರಗಟ್ಟಿಯ ವಿದ್ಯುತ್​ ಉಪ ಕೇಂದ್ರದಿಂದ ವಿದ್ಯುತ್​ ಪೂರೈಕೆ ಲಭ್ಯವಿದ್ದರೂ ಅಗತ್ಯಕಕ್ಕೆ ಅನುಗುಣವಾಗಿ ವಿದ್ಯುತ್​ ಪೂರೈಕೆ ಸಾಧ್ಯವಿಲ್ಲ. ಈ ಹಿನ್ನೆಲೆ ಈ ಎರಡೂ ನೀರು ಎತ್ತುವಳಿಕೆ ಕೇಂದ್ರಕ್ಕಾಗಿಯೇ ತಲಾ 33ಕೆವಿ ವಿದ್ಯುತ್​ ಪೂರೈಕೆ ಮಾಡುವ ವಿದ್ಯುತ್​ ಉಪ ಕೇಂದ್ರ ಸ್ಥಾಪಿಸಲು ಯೋಜನೆ ರಚನೆಗೊಂಡಿದೆ.

    ಯೋಜನೆ ಉದ್ದೇಶ:
    ಯೋಜನೆಯಲ್ಲಿ ಪ್ರಸ್ತಾಪಿತ 29 ಕೆರೆಗಳಲ್ಲಿ ಶೇ. 50 ರಷ್ಟು ನೀರು ಸಂಗ್ರಹ ಆಗುತ್ತಿಲ್ಲ. ಬರಗಾಲದಲ್ಲಿ ಸೋರಿಕೆ, ಆವಿಯಾಗುವಿಕೆಯಿಂದ ನೀರು ಬರಿದಾಗುತ್ತಿದೆ. ಈ ಭಾಗದ ಜನರಿಗೆ ಕುಡಿಯುವ ನೀರಿನ ಕೊರತೆ ಉದ್ಭವಿಸುತ್ತಿದೆ. ಈ ಹಿನ್ನೆಲೆ ಕರೆಯಲ್ಲಿ ಶೇ.75ರಷ್ಟು ನೀರನ್ನು ತುಂಬಿಸಲು ಈ ಯೋಜನೆ ಸಿದ್ಧವಾಗಿದೆ.

    2018 – 19ರ ಅವಧಿಯಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಹಾಗಾಗಿ ಯೋಜನೆಯ ವೆಚ್ಚ ಅಧಿಕಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಪ್ರತಿವರ್ಷ ಶೇ. 10 ರಷ್ಟು ವೆಚ್ಚ ಅಧಿಕಗೊಳ್ಳುತ್ತಿದೆ. ಅದರಂತೆ 197 ಕೋಟಿಗೂ ಅಧಿಕ ವೆಚ್ಚ ಯೋಜನೆಗೆ ಸರ್ಕಾರ ಭರಿಸಬೇಕಿದೆ.

    ಮುಂಡರಗಿ ತಾಲೂಕಿನ ಕೆರೆಗಳು
    ಕೆರೆ – ನೀರಿನ ಸಾಮರ್ಥ್ಯ(ಎಂಸಿ​ಟಿ) – ಪ್ರಸ್ತಾಪಿತ ನೀರು ಪೂರೈಕೆ(ಎಂಸಿಟಿ)
    ಹಮ್ಮಗಿ – 61 – 45.75
    ಕಟ್ಟೆಬಸವಣ್ಣ ಕೆರೆ – 55 – 41.25
    ಮುರಡಿ – 78.84 – 59.13
    ಕೆಲೂರು – 99 – 74.25
    ಚಿಕ್ಕವಡ್ಡಟಿ1 – 14 – 10.50
    ಚಿಕ್ಕವಡ್ಡಟಿ 2 – 3.0 – 2.25

    ಶಿರಹಟ್ಟಿ ತಾಲೂಕಿನ ಕೆರೆಗಳು
    ಕೆರೆ – ನೀರಿನ ಸಾಮರ್ಥ್ಯ(ಎಂಸಿ​ಟಿ) – ಪ್ರಸ್ತಾಪಿತ ನೀರು ಪೂರೈಕೆ(ಎಂಸಿ​ಟಿ)
    ಕಡಕೊಳ – 9.40 – 7.05
    ಜಲ್ಲಿಗೇರಿ – 8.50 – 6.37
    ಹೊಸಳ್ಳಿ – 20.50 – 15.97
    ಮಾಗಡಿ – 67 – 50.25

    ಗದಗ ತಾಲೂಕಿನ ಕೆರೆಗಳು
    ಕೆರೆ – ನೀರಿನ ಸಾಮರ್ಥ್ಯ(ಎಂಸಿ​ಟಿ) – ಪ್ರಸ್ತಾಪಿತ ನೀರು ಪೂರೈಕೆ(ಎಂಸಿ​ಟಿ)
    ಮಹಾಲಿಂಗಪೂರು – 1.20 – 0.90
    ಸೊರಟೂರು – 2.60 – 1.95
    ಅತ್ತಿಕಟ್ಟಿ – 8.50 – 6.37
    ನಭಾಪೂರು – 4.50 – 3.375
    ನಾಗಾವಿ – 2.50 – 1.87
    ಹೊಸೂರು – 35.50 – 26.62
    ಶೀತಾಲಹರಿ – 69.14 – 51.85
    ಹತಿ – 35.50 – 26.62
    ಕುರ್ತಕೋಟಿ – 5.36 – 4.02
    ಮುಳಗುಂದ – 10.10 – 7.57
    ಕಬಲಾಯತಕಟ್ಟಿ – 5.0 – 3.75
    ಬೆಳದಡಿ – 3.50 – 2.62
    ಮಲ್ಲಸಮುದ್ರ – 3.0 – 2.25
    ಕಣವಿ – 4.50 – 3.37
    ಚಿಂಚಲಿ – 4.0 – 3.0
    ಕಲ್ಲೂರು – 4.0 – 3.0
    ನೀಲಗುಂದ – 4.0 – 3.0
    ಕಳಸಾಪುರು – 12 – 9
    ಪಾಪನಾಶಿ – 88 – 66

    ಕೋಟ್​:
    ಜನರ ಅಗತ್ಯಕ್ಕೆ ಅನುಗುಣವಾಗಿ ಯೋಜನೆ ಸಿದ್ದಪಡಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ವಿಷಯ ಚರ್ಚೆಯಾಗಿದೆ. ಕೆಲ ಅನುಮೋದನೆಗಳು ಮಾತ್ರ ಬಾಕಿ ಇದ್ದು, ಶೀಗ್ರದಲ್ಲಿ ಯೋಜನೆ ಅನುಷ್ಠಾನಗೊಳ್ಳುವ ನಿರೀೆ ಇದೆ.
    – ಐ. ಪ್ರಕಾಶ, ಇಇ – ಸಿಂಗಟಾಲುರು ಏತನೀರವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts