More

  ಮುಡಿಪು ಕಾರಾಗೃಹ 2 ವರ್ಷದಲ್ಲಿ ಪೂರ್ಣ ಎಡಿಜಿಪಿ ಅಲೋಕ್ ಮೋಹನ್ ಹೇಳಿಕೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪುವಿನಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಒಂದು ಸಾವಿರ ಕೈದಿಗಳು ವಾಸ ಮಾಡಬಹುದಾದ ಜೈಲು ನಿರ್ಮಾಣವಾಗುತ್ತಿದ್ದು, ಕಾಮಗಾರಿ 2 ವರ್ಷದೊಳಗೆ ಪೂರ್ಣವಾಗಲಿದೆ ಎಂದು ರಾಜ್ಯ ಬಂದೀಖಾನೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದರು.

  ನಗರದ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಈ ಜೈಲು ಭಾರಿ ಭದ್ರತೆ ಹೊಂದಲಿದೆ. ಜಿಲ್ಲೆಯಲ್ಲಿ ಶಿಕ್ಷೆಗೊಳಗಾದ ಕೈದಿಗಳನ್ನು ಪ್ರಸ್ತುತ ಶಿವಮೊಗ್ಗ ಸೇರಿದಂತೆ ವಿವಿಧ ಕಾರಾಗೃಹಕ್ಕೆ ಕಳುಹಿಸಲಾಗುತ್ತಿದ್ದು, ನೂತನ ಜೈಲು ಉದ್ಘಾಟನೆಯಾದ ಬಳಿಕ ಎಲ್ಲರನ್ನೂ ಹೊಸ ಜೈಲಿಗೆ ಸ್ಥಳಾಂತರಿಸಲಾಗುವುದು. ಈಗ ಇರುವ ಜೈಲಿನಲ್ಲಿ ನ್ಯಾಯಾಂಗ ಬಂಧನದ ಕೈದಿಗಳನ್ನು ಮಾತ್ರ ಇರಿಸಲಾಗುವುದು ಎಂದರು.

  ಜೈಲಿಗೆ ಗಾಂಜಾ ಸಾಗಾಟ, ಮೊಬೈಲ್ ಸಾಗಾಟವಾಗದಂತೆ ಎಚ್ಚರ ವಹಿಸಲಾಗಿದೆ. ಜೈಲಿನಲ್ಲಿ ಗೂಂಡಾ ತಂಡಗಳ ಬಗ್ಗೆಯೂ ನಿಗಾ ಇಡಲಾಗಿದೆ. ಈ ಬಗ್ಗೆ ನಿಗಾ ಇಡಲು ಸ್ಥಳೀಯ ಪೊಲೀಸ್ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಲಾಗುತ್ತಿದೆ ಎಂದರು.
  ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜೈಲು ಅಧೀಕ್ಷಕ ಚಂದನ್ ಪಟೇಲ್, ಐಜಿಪಿ ದೇವಜ್ಯೋತಿ ರೇ ಉಪಸ್ಥಿತರಿದ್ದರು.

  ಸಂಬಂಧಿಕರೊಂದಿಗೆ ಕೈದಿಗಳ ವಿಡಿಯೋ ಕಾನ್ಫರೆನ್ಸ್: ರಾಜ್ಯದ ಎಲ್ಲ ಜಿಲ್ಲಾ ಜೈಲುಗಳಲ್ಲಿ ಕರೊನಾ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಪದ್ಧತಿ ಜಾರಿ ಮಾಡಲಾಗಿದ್ದು, ಅದಕ್ಕೆ ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೋವಿಡ್ ಬಳಿಕ ರಾಜ್ಯದ ಜೈಲುಗಳಲ್ಲಿರುವ ಕೈದಿಗಳ, ವಿಚಾರಣಾಧೀನ ಕೈದಿಗಳ ಸಂಬಂಧಿಕರು, ಆಪ್ತರಿಗೆ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕಾರಣದಿಂದ ಕೈದಿಗಳು ಅವರ ಸಂಬಂಧಿಕರ ಜತೆ ಮಾತನಾಡಲು ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ಝೂಮ್ ಮೀಟ್ ಮಾದರಿಯಲ್ಲೇ ಸ್‌ಟಾವೇರ್‌ವೊಂದನ್ನು ತಯಾರಿಸಿ ಇ ವಿಡಿಯೋ ಕಾನ್ಪರೆನ್ಸ್ ಸಿಸ್ಟಂ ಮಾಡಲಾಗಿದೆ. ಕೈದಿಗಳ ಜತೆ ಮಾತನಾಡಲು ಸಂಬಂಧಿಕರು ಆಗ್ರಹ ಸಲ್ಲಿಸಿದರೆ ಅವರಿಗೆ ಲಿಂಕ್ ಕಳುಹಿಸಿ ಅದರ ಮೂಲಕ ಮಾತನಾಡಬಹುದು. ಮಂಗಳೂರಿನಲ್ಲಿ ಎರಡು ತಿಂಗಳಲ್ಲಿ ಸುಮಾರು 170 ಮಂದಿ ಇದರ ಅನುಕೂಲ ಪಡೆದುಕೊಂಡಿದ್ದಾರೆ. ಇದು ಮಾತ್ರವಲ್ಲದೆ ಜೈಲಿನ ೆನ್ ಬಳಸಿ ಸಂಬಂಧಿಕರ ಜತೆ ಮಾತನಾಡಲು ಅವಕಾಶ ನೀಡಲಾಗಿದೆ ಎಂದು ಎಡಿಜಿಪಿ ತಿಳಿಸಿದರು.

  See also  ಕಾನೂನಿನ ತಿಳಿವಳಿಕೆಯಿಲ್ಲದೆ ಕೃತ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts