More

    ಇಟಲಿ ದೇಶ ಸ್ತಬ್ಧವಾಗಲು ಕಾರಣವೇನು ಗೊತ್ತಾ..? ಬಿಕೋ ಎನ್ನುತ್ತಿದೆ ರೋಮ್ ನಗರ!

    ರೋಮ್​: ಚೀನಾದಲ್ಲಿ ಶುರುವಾದ ಡೆಡ್ಲಿ ಕೊರೊನಾ ವೈರಸ್​ ಎಫೆಕ್ಟ್​ ಜಾಗತಿಕ ಮಟ್ಟದಲ್ಲಿ ಭಾರೀ ಹೊಡೆತ ಕೊಟ್ಟಿದೆ. ಮಾರಕ ಕೊರೊನಾದಿಂದ ಇಟಲಿ ದೇಶ ಸಂಪೂರ್ಣ ಸ್ತಬ್ಧವಾಗಿದೆ.

    ಹೌದು, ಭಾನುವಾರದವರೆಗೆ 9 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಯುರೋಪ್​ನ ಇತರೆ ದೇಶಗಳಿಗೆ ಹೋಲಿಸಿದರೆ ಇಟಲಿಯಲ್ಲೇ ಅತ್ಯಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

    ಕೊರೊನಾ ವೈರಸ್ ನಿಯಂತ್ರಣ ಇಟಲಿ ಪ್ರಧಾನಿ ಗಿಸೆಪ್ಪೆ ಕೌಂಟೆಗೆ ಸವಾಲಾಗಿದ್ದು, ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದನ್ನು ಬ್ಯಾನ್ ಮಾಡಿದ್ದಾರೆ. ಈ ಮೊದಲು ಉತ್ತರ ಇಟಲಿಯಲ್ಲಿ ಮಾತ್ರ ಸಾರ್ವಜನಿಕರು ಒಂದೆಡೆ ಸೇರುವುದಕ್ಕೆ ನಿಷೇಧ ಹೇರಲಾಗಿತ್ತು.

    ಭಾನುವಾರದ ವೇಳೆಗೆ ಇಟಲಿಯಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಒಟ್ಟು 463. ಹೀಗಾಗಿ ದೇಶದಲ್ಲಿನ ನಾಗರಿಕರ ರಕ್ಷಣೆ ಹಾಗೂ ವಯೋವೃದ್ಧರ ಸುರಕ್ಷತೆಗಾಗಿ ಇಟಲಿ ಪ್ರಧಾನಿ ಈ ಕಠಿಣ ಕ್ರಮ ಕೈಗೊಂಡಿದ್ದಾರೆ.

    ಉತ್ತರ ಇಟಲಿಯ ಲಾಂಬಾರ್ಡಿ ಪ್ರಾಂತ್ಯದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಂಡು ಬಂದಿವೆ. ಇಲ್ಲಿನ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ತೀವ್ರ ನಿಗಾ ಘಟಕ ಮತ್ತು ಬೆಡ್​ಗಳ ಕೊರತೆ ಕಾಡುತ್ತಿದೆ. ಹೀಗಾಗಿ ಉತ್ತರ ಇಟಲಿಯ ಲಾಂಬಾರ್ಡಿ ಪ್ರಾಂತ್ಯವನ್ನು ಸಂಪೂರ್ಣ ಬಂದ್ ಮಾಡಿದ್ದು, 16 ಮಿಲಿಯನ್​​ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

    ಸುನಾಮಿ ರೀತಿಯಲ್ಲಿ ಕೊರೊನಾ ವೈರಸ್​ ಹರಡುತಿದ್ದು, 18 ಸಾವಿರದಷ್ಟು ರೋಗಿಗಳು ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಲಾಂಬಾರ್ಡಿ ಅಧ್ಯಕ್ಷ ಅಟಿಲಿಯೊ ಫಂಟಾನಾ ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಇಟಲಿಯ 14 ಪ್ರಾಂತ್ಯಗಳಲ್ಲೂ ಸಾರ್ವಜನಿಕರು ಗುಂಪು ಸೇರುವುದಕ್ಕೆ ನಿಷೇಧ ಮುಂದುವರಿಸಲಾಗಿದೆ.(ಏಜೇನ್ಸಿಸ್​)

    ಕೊರೊನಾದಿಂದ ಚೇತರಿಸಿಕೊಂಡ ಚೀನಾ: 16 ತಾತ್ಕಾಲಿಕ ಆಸ್ಪತ್ರೆಗಳಲ್ಲಿ ಸೇವೆ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts