More

    ಇಸ್ರೇಲ್​ನಲ್ಲಿ 1 ಲಕ್ಷ ಭಾರತೀಯರಿಗೆ ನೌಕ್ರಿ! ಬೆಂಜಮಿನ್​ ಸರ್ಕಾರದ ಮುಂದೆ ಬಿಲ್ಡರ್​ ಅಸೋಸಿಯೇಷನ್​ ಬೇಡಿಕೆ

    ಜೆರುಸಲೇಮ್​: ಹಮಾಸ್​ ವಿರುದ್ಧದ ಯುದ್ಧ ನಡುವೆಯೇ ಇಸ್ರೇಲ್​ ಸರ್ಕಾರ ಒಂದು ಲಕ್ಷ ಭಾರತೀಯರಿಗೆ ಉದ್ಯೋಗ ನೀಡಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಇಸ್ರೇಲಿ ಬಿಲ್ಡರ್​ ಅಸೋಸಿಯೇಷನ್​ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡುವಂತೆ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಸರ್ಕಾರದ ಮುಂದೆ ಬೇಡಿಕೆ ಇರಿಸಿದೆ.

    ನಾವು ಪ್ರಸ್ತುತ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅದನ್ನು ಅನುಮೋದಿಸಲು ಇಸ್ರೇಲ್​ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. 50,000 ದಿಂದ 100,000 ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಆಶಿಸುತ್ತೇವೆ. ಇದು ನಿರ್ಮಾಣ ವಲಯವನ್ನು ನಡೆಸಲು ಮತ್ತು ಅದನ್ನು ಸಾಮಾನ್ಯ ಸ್ಥಿತಿಗೆ ತರಲು ಅನುವು ಮಾಡಿಕೊಡುತ್ತದೆ ಎಂದು ಇಸ್ರೇಲ್​ ಬಿಲ್ಡರ್ಸ್​ ಅಸೋಸಿಯೇಷನ್​ ಉಪಾಧ್ಯ ಹೈಮ್​ ಫೀಗ್ಲಿನ್​ ತಿಳಿಸಿದ್ದಾರೆ. ಆದರೆ ಭಾರತದ ವಿದೇಶಾಂಗ ಸಚಿವಾಲಯ ಈ ವರದಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಕಾರ್ಮಿಕರ ಕೊರತೆ

    ಇಸ್ರೇಲ್​ನ ನಿರ್ಮಾಣ ಉದ್ಯಮ ಕ್ಷೇತ್ರದಲ್ಲಿರುವ ಶೇ. 25ರಷ್ಟು ಕಾರ್ಮಿಕರು ಪ್ಯಾಲೆಸ್ತೀನಿಯರು. ಹಮಾಸ್​ ದಾಳಿಯ ನಂತರ ಪ್ಯಾಲೆಸ್ತೀನ್​ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಅಥವಾ ಅವರಿಗೆ ಬರಲು ಇಸ್ರೇಲ್​ ಸರ್ಕಾರ ಅನುಮತಿ ನೀಡುತ್ತಿಲ್ಲ. ಹೀಗಾಗಿ ಕಾರ್ಮಿಕರ ಕೊರತೆ ಎದುರಾಗಿದೆ.

    ಪ್ಯಾಲೆಸ್ತೀನಿಯರ ಸ್ಥಾನಕ್ಕೆ ಭಾರತೀಯರು

    ಯುದ್ಧದಿಂದಾಗಿ ಇಸ್ರೇಲ್​ನ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಪ್ಯಾಲೆಸ್ತೀನಿಯರು ಕೆಲಸದ ಪರವಾನಿಗೆ ಕಳೆದುಕೊಂಡಿದ್ದಾರೆ. ಈ ಬೆಳವಣಿಗೆಯು ನಿರ್ಮಾಣ ವಲಯದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ನಿರ್ಮಾಣ ವಲಯದಲ್ಲಿ 90 ಸಾವಿರ ಕಾರ್ಮಿಕರ ಕೊರತೆ ದಾಖಲಾಗಿದೆ. ಕಾರ್ಮಿಕರಿಲ್ಲದ ಕಾರಣ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. 1 ಲ ಭಾರತೀಯ ಕಾರ್ಮಿಕರ ನೇಮಕಾತಿಯಿಂದ ಸ್ಥಗಿತಗೊಂಡಿರುವ ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸುವ ಚಿಂತನೆಯಾಗಿದೆ.

    ಭಾರತ-ಇಸ್ರೇಲ್​ ಒಪ್ಪಂದ

    ಕಳೆದ ಮೇ ತಿಂಗಳಲ್ಲಿ ಇಸ್ರೇಲ್​ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದದ ಪ್ರಕಾರ 42,000 ಭಾರತೀಯರಿಗೆ ಇಸ್ರೇಲ್​ನಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ನರ್ಸಿಂಗ್​ ಜತೆಗೆ ನಿರ್ಮಾಣ ವಲಯದಲ್ಲಿ ವಿಶೇಷವಾಗಿ ಭಾರತೀಯರನ್ನು ನೇಮಿಸಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts