More

    ಲಖನೌ ಸೂಪರ್‌ಜೈಂಟ್ಸ್ ಮಣಿಸಿ ಶುಭಾರಂಭ ಕಂಡ ಗುಜರಾತ್ ಟೈಟಾನ್ಸ್

    ಮುಂಬೈ: ಅನುಭವಿ ವೇಗಿ ಮೊಹಮದ್ ಶಮಿ (25ಕ್ಕೆ 3) ಮಾರಕ ದಾಳಿ ಹಾಗೂ ಬ್ಯಾಟರ್‌ಗಳ ಸಂಘಟಿತ ಹೋರಾಟದ ಫಲವಾಗಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಕಂಡಿತು. ಕಡೇ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 11 ರನ್ ಅವಶ್ಯಕತೆಯಿದ್ದಾಗ ಕನ್ನಡಿಗ ಅಭಿನವ್ ಮನೋಹರ್ (15*ರನ್, 7 ಎಸೆತ, 3 ಬೌಂಡರಿ) ಸತತ ಎರಡು ಬೌಂಡರಿ ಸಿಡಿಸಿ ತಂಡದ ಗೆಲುವನ್ನು ಸುಲಭವಾಗಿಸಿದರು.

    ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೂಪರ್‌ಜೈಂಟ್ಸ್ ತಂಡ, ಆರಂಭಿಕ ಆಘಾತದ ನಡುವೆಯೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ದೀಪಕ್ ಹೂಡಾ (55 ರನ್, 41 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಯುವ ಬ್ಯಾಟರ್ ಆಯುಷ್ ಬಡೋನಿ (54 ರನ್, 41ಎಸೆತ, 4 ಬೌಂಡರಿ, 3 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್‌ಗೆ 158 ರನ್ ಪೇರಿಸಿತು. ಪ್ರತಿಯಾಗಿ ಗುಜರಾತ್ ತಂಡ, ರಾಹುಲ್ ತೆವಾಟಿಯ (40*ರನ್, 24 ಎಸೆತ, 5 ಬೌಂಡರಿ, 2ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (30 ರನ್, 21 ಎಸೆತ, 1 ಬೌಂಡರಿ, 2 ಸಿಕ್ಸರ್) ಪ್ರತಿಹೋರಾಟದಿಂದ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 161 ರನ್‌ಗಳಿಸಿ ಜಯದ ನಗೆ ಬೀರಿತು.

    ಲಖನೌ ಸೂಪರ್ ಜೈಂಟ್ಸ್: 6 ವಿಕೆಟ್‌ಗೆ 158 (ದೀಪಕ್ ಹೂಡಾ 55, ಆಯುಷ್ ಬಡೋನ 54, ಕೆಎಲ್ ರಾಹುಲ್ 0, ಡಿಕಾಕ್ 7, ಕೃನಾಲ್ ಪಾಂಡ್ಯ 21*, ಮೊಹಮದ್ ಶಮಿ 25ಕ್ಕೆ 3, ವರುಣ್ ಆರನ್ 45ಕ್ಕೆ 2, ರಶೀದ್ ಖಾನ್ 27ಕ್ಕೆ 1), ಗುಜರಾತ್ ಟೈಟಾನ್ಸ್: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 161 (ಮ್ಯಾಥ್ಯೂ ವೇಡ್ 30, ಹಾರ್ದಿಕ್ ಪಾಂಡ್ಯ 33, ಡೇವಿಡ್ ಮಿಲ್ಲರ್ 30, ರಾಹುಲ್ ತೆವಾಟಿಯಾ 40*, ಅಭಿನವ್ ಮನೋಹರ್ 15*, ದುಶ್ಮಾಂತ ಚಮೀರಾ 22ಕ್ಕೆ 2, ಆವೇಶ್ ಖಾನ್ 33ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts