More

    2 ಹೊಸ ಐಪಿಎಲ್ ತಂಡಗಳಿಗೆ ಬಿಡ್ ಆಹ್ವಾನಿಸಿದ ಬಿಸಿಸಿಐ, ಮೂಲಬೆಲೆ ಎಷ್ಟು ಗೊತ್ತೇ?

    ನವದೆಹಲಿ: ಬಿಸಿಸಿಐ 2022ರ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ತಂಡವೊಂದಕ್ಕೆ 2 ಸಾವಿರ ಕೋಟಿ ರೂಪಾಯಿ ಮೂಲಬೆಲೆ ನಿಗದಿಪಡಿಸಿರುವ ಬಿಸಿಸಿಐ, 2 ತಂಡಗಳ ಮಾರಾಟದಿಂದ ಒಟ್ಟಾರೆ 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.

    ಐಪಿಎಲ್‌ನಲ್ಲಿ ಸದ್ಯ 8 ತಂಡಗಳಿಂದ ಮುಂದಿನ ವರ್ಷದಿಂದ ಇದು 10 ತಂಡಗಳ ಟೂರ್ನಿಯಾಗಲಿದೆ. ಇದರಿಂದ ಟೂರ್ನಿಯ ಒಟ್ಟು ಪಂದ್ಯಗಳ ಸಂಖ್ಯೆಯೂ 60ರಿಂದ 74ಕ್ಕೆ ಏರಿಕೆಯಾಗಲಿದೆ. ಐಪಿಎಲ್ ಆಡಳಿತ ಮಂಡಳಿ ಇತ್ತೀಚೆಗೆ ಬಿಡ್ಡಿಂಗ್ ಪ್ರಕ್ರಿಯೆಯ ರೂಪುರೇಷೆಗಳನ್ನು ಅಂತಿಮಗೊಳಿಸಿದ್ದು, ಅದರನ್ವಯ ಮಂಗಳವಾರ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತರು 10 ಲಕ್ಷ ರೂ. ಪಾವತಿಸಿ ಅಕ್ಟೋಬರ್ 5ರೊಳಗೆ ಬಿಡ್ ದಾಖಲೆಪತ್ರ ಖರೀದಿಸಬಹುದಾಗಿದೆ. ಬಿಡ್ ಸಲ್ಲಿಸುವ ಕಂಪನಿ ಕನಿಷ್ಠ 3 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರಬೇಕೆಂದು ಬಿಸಿಸಿಐ ತಿಳಿಸಿದೆ.

    ಬಿಸಿಸಿಐ ಈ ಮುನ್ನ ತಂಡಗಳಿಗೆ 1,700 ಕೋಟಿ ರೂ. ಮೂಲಬೆಲೆ ನಿಗದಿಪಡಿಸಲು ಮುಂದಾಗಿತ್ತು. ಇದೀಗ ಅದನ್ನು 2 ಸಾವಿರ ಕೋಟಿ ರೂ.ಗೆ ಏರಿಸಲಾಗಿದೆ. 2 ತಂಡಗಳು ಒಟ್ಟಾರೆ 5 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟವಾಗುವ ಲೆಕ್ಕಾಚಾರವನ್ನು ಬಿಸಿಸಿಐ ಹೊಂದಿದೆ.

    ಒಂದೇ ಕಂಪನಿಯಲ್ಲದೆ ವಿವಿಧ ಕಂಪನಿಗಳ ಒಕ್ಕೂಟಕ್ಕೂ ಬಿಡ್ ಸಲ್ಲಿಸಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಆದರೆ ಒಕ್ಕೂಟದಲ್ಲಿ 3ಕ್ಕಿಂತ ಹೆಚ್ಚು ಕಂಪನಿಗಳಿರಬಾರದು ಎಂದು ಬಿಸಿಸಿಐ ಸೂಚಿಸಿದೆ.
    ಅಹಮದಾಬಾದ್, ಲಖನೌ ಅಥವಾ ಪುಣೆ ನಗರದ ತಂಡಗಳು ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಅಹಮದಾಬಾದ್‌ನಲ್ಲಿ ವಿಶ್ವ ಅತಿದೊಡ್ಡ ಕ್ರಿಕೆಟ್ ತಾಣವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂ ಇದ್ದರೆ, ಲಖನೌ ಪ್ರತಿಷ್ಠಿತ ಏಕನಾ ಸ್ಟೇಡಿಯಂ ಹೊಂದಿದೆ. ಅದಾನಿ ಗ್ರೂಪ್, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಟೊರೆಂಟ್ ಫಾರ್ಮಾ ಕಂಪನಿಗಳು ಬಿಡ್ ಸಲ್ಲಿಸಲು ಆಸಕ್ತಿ ಹೊಂದಿವೆ ಎನ್ನಲಾಗಿದೆ.

    ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜಿನಲ್ಲಿ ಕನ್ನಡಿಗರಿಗೆ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts