More

    ಇಂದು ಆರ್‌ಸಿಬಿಗೆ ರಾಜಸ್ಥಾನ ರಾಯಲ್ಸ್ ಸವಾಲು ; ಪ್ಲೆಸಿಸ್ ಪಡೆಗೆ ಗೆಲುವಿನ ತವಕ

    ಮುಂಬೈ: ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ 3ನೇ ಪಂದ್ಯದಲ್ಲಿ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಪಂಜಾಬ್‌ಗೆ ಶರಣಾಗಿದ್ದ ಆರ್‌ಸಿಬಿ ಎರಡನೇ ಪಂದ್ಯದಲ್ಲಿ ಕೆಕೆಆರ್ ಎದುರು ಜಯ ದಾಖಲಿಸಿತ್ತು. ವೇಗಿಗಳಿಗೆ ನೆರವಾಗುತ್ತಿರುವ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಉಭಯ ತಂಡಗಳ ಹಣಾಹಣಿ ಕುತೂಹಲ ಮೂಡಿಸಿದೆ. ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸಮತೋಲನದಿಂದ ಕೂಡಿರುವ ರಾಜಸ್ಥಾನ ತಂಡ ಆತ್ಮವಿಶ್ವಾಸದಲ್ಲಿದೆ. ಆರ್‌ಸಿಬಿಗೆ ತನ್ನ ಮಾಜಿ ಆಟಗಾರರಾದ ಯಜುವೇಂದ್ರ ಚಾಹಲ್ ಹಾಗೂ ಕನ್ನಡಿಗ ದೇವದತ್ ಪಡಿಕಲ್ ಸವಾಲು ಕೂಡ ಎದುರಾಗಲಿದೆ.

    ಆರ್‌ಸಿಬಿಗೆ ಲಯ ಕಾಯುವ ಹಂಬಲ
    ಶ್ರೀಲಂಕಾದ ವನಿಂದು ಹಸರಂಗ ಕೆಕೆಆರ್ ಎದುರು ಮಿಂಚಿದ್ದರೆ, ವೇಗಿಗಳಾದ ಡೇವಿಡ್ ವಿಲ್ಲಿ, ಆಕಾಶ್ ದೀಪ್, ಮೊಹಮದ್ ಸಿರಾಜ್, ಸ್ಯಾಮ್ಸನ್ ಪಡೆಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಸ್ಲಾಗ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಬೌಲಿಂಗ್ ವಿಭಾಗಕ್ಕಿಂತ ತಂಡಕ್ಕೆ ಬ್ಯಾಟಿಂಗ್ ವಿಭಾಗದ್ದೇ ಚಿಂತೆಯಾಗಿದೆ. ನಾಯಕ ್ಾ ಡು ಪ್ಲೆಸಿಸ್‌ಗೆ ಅನುಜ್ ರಾವತ್ ಆರಂಭಿಕ ಹಂತದಲ್ಲಿ ಉತ್ತಮ ಸಾಥ್ ನೀಡಬೇಕಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ದೊಡ್ಡ ಇನಿಂಗ್ಸ್ ಬರಬೇಕಿದೆ. ಹಸರಂಗ ಬ್ಯಾಟಿಂಗ್‌ನಲ್ಲೂ ಮಿಂಚಬೇಕಿದೆ.

    ಆತ್ಮವಿಶ್ವಾಸದಲ್ಲಿ ರಾಯಲ್ಸ್
    ಆರಂಭಿಕ ಎರಡೂ ಪಂದ್ಯಗಳಲ್ಲೂ ಸುಲಭ ಗೆಲುವು ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಬೌಲಿಂಗ್ ಪಡೆ ಹೊಂದಿದೆ. ಕನ್ನಡಿಗ ಪ್ರಸಿದ್ಧ ಕೃಷ್ಣ, ಟ್ರೆಂಟ್ ಬೌಲ್ಡ್, ನವದೀಪ್ ಸೈನಿ ವೇಗದ ವಿಭಾಗದ ಜವಾಬ್ದಾರಿ ನಿಭಾಯಿಸುತ್ತಿದ್ದು, ಅನುಭವಿ ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ಯಜುವೇಂದ್ರ ಚಾಹಲ್ ಆರ್‌ಸಿಬಿಗೆ ತಲೆನೋವಾದರೂ ಅಚ್ಚರಿಯಿಲ್ಲ. ಶಿಮ್ರೊನ್ ಹೆಟ್ಮೆಯೆರ್, ಕಳೆದ ಪಂದ್ಯದ ಶತಕದ ಸಾಧಕ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಕರ್ನಾಟಕದ ದೇವದತ್ ಪಡಿಕಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಒಳಗೊಂಡ ಬ್ಯಾಟಿಂಗ್ ಪಡೆ ಆರ್‌ಸಿಬಿ ಬೌಲರ್‌ಗಳಿಗೆ ಕಂಟಕವಾಗಬಹುದು.

    ಟೀಮ್ ನ್ಯೂಸ್:
    ಆರ್‌ಸಿಬಿ: ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮದುವೆ ಸಂಭ್ರಮ ಮುಗಿಸಿ ಬಯೋಬಬಲ್‌ನಲ್ಲಿ ಆರ್‌ಸಿಬಿ ತಂಡವನ್ನು ಕೂಡಿಕೊಂಡಿದ್ದರೂ, ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಆಡಲು ಲಭ್ಯರಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾದ ಗುತ್ತಿಗೆ ಹೊಂದಿರುವ ಆಟಗಾರರು ಏಪ್ರಿಲ್ 6ಕ್ಕೆ ಮುನ್ನ ಐಪಿಎಲ್‌ನಲ್ಲಿ ಆಡಬಾರದು ಎಂಬ ಸೂಚನೆ ಇದಕ್ಕೆ ಕಾರಣ. ಹೀಗಾಗಿ ಆರ್‌ಸಿಬಿ ಆಡುವ 11ರ ಬಳಗದಲ್ಲಿ ಬದಲಾವಣೆ ಅನುಮಾನ.
    ರಾಜಸ್ಥಾನ ರಾಯಲ್ಸ್: ಜಯದ ನಾಗಾಲೋಟದಲ್ಲಿರುವ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಆರಂಭಿಕ ಎರಡೂ ಪಂದ್ಯಗಳಲ್ಲಿ ಉತ್ತಮ ಹೊಂದಾಣಿಕೆ ಕಂಡಿರುವ ಹಿನ್ನೆಲೆಯಲ್ಲಿ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಬಹುದು.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 25, ಆರ್‌ಸಿಬಿ: 12, ರಾಜಸ್ಥಾನ: 10, ರದ್ದು: 3.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts