More

    ಆರ್‌ಸಿಬಿ ಪ್ಲೇಆಫ್ ಹೋರಾಟ ಜೀವಂತ ; ಸಿಎಸ್‌ಕೆ ಎದುರು 13 ರನ್ ಜಯ

    ಪುಣೆ: ವೇಗಿಗಳಾದ ಹರ್ಷಲ್ ಪಟೇಲ್ (35ಕ್ಕೆ 3) ಹಾಗೂ ಜೋಸ್ ಹ್ಯಾಸಲ್‌ವುಡ್ (19ಕ್ಕೆ1) ಜೋಡಿಯ ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 13 ರನ್‌ಗಳಿಂದ ಸೋಲಿಸಿತು. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಬೆಂಗಳೂರು ತಂಡ ಗೆಲುವಿನ ಹಳಿಗೇರುವುದರ ಜತೆಗೆ ಪ್ಲೇಆಫ್ ಹೋರಾಟವನ್ನು ಜೀವಂತವಾಗಿರಿಸಿಕೊಂಡಿತು. ಜತೆಗೆ ಮೊದಲ ಮುಖಾಮುಖಿಯಲ್ಲಿ ಸಿಎಸ್‌ಕೆ ಎದುರು ಅನುಭವಿಸಿದ ಸೋಲಿಗೂ ಸೇಡು ತೀರಿಸಿಕೊಂಡಿತು. ಮತ್ತೊಂದೆಡೆ, 7ನೇ ಸೋಲು ಕಂಡ ಸಿಎಸ್‌ಕೆ ತಂಡದ ಮುಂದಿನ ಹಾದಿ ಮತ್ತಷ್ಟು ಕಠಿಣಗೊಂಡಿತು.

    ಎಂಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ಮಹೀಶ್ ತೀಕ್ಷಣ (27ಕ್ಕೆ 3) ಹಾಗೂ ಮೊಯಿನ್ ಅಲಿ (28ಕ್ಕೆ 2) ಕಡಿವಾಣ ಹೇರಿದರು. ಪ್ಲೆಸಿಸ್ (38ರನ್, 22 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗು ಮಹಿಪಾಲ್ ಲೊಮ್ರೊರ್ (42ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಫಲವಾಗಿ ಆರ್‌ಸಿಬಿ 8 ವಿಕೆಟ್‌ಗೆ 173 ರನ್ ಪೇರಿಸಿತು. ಪ್ರತಿಯಾಗಿ ಡೆವೊನ್ ಕಾನ್‌ವೇ (56ರನ್, 37 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದಾಟದ ನಡುವೆಯೂ ಆರ್‌ಸಿಬಿ ದಾಳಿಗೆ ನಲುಗಿದ ಸಿಎಸ್‌ಕೆ 8 ವಿಕೆಟ್‌ಗೆ 160 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts