More

    ಚೊಚ್ಚಲ ಯತ್ನದಲ್ಲೇ ಪ್ರಶಸ್ತಿ ಸುತ್ತಿಗೇರಿದ ಗುಜರಾತ್ ಟೈಟಾನ್ಸ್; ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್ ಜಯ

    ಕೋಲ್ಕತ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ (68*ರನ್, 38 ಎಸೆತ, 3 ಬೌಂಡರಿ, 5 ಸಿಕ್ಸರ್) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (40*ರನ್, 27 ಎಸೆತ, 5 ಬೌಂಡರಿ*) ಜೋಡಿಯ ಪ್ರತಿಹೋರಾಟದ ಫಲವಾಗಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರ ಮೊದಲ ಕ್ವಾಲಿಫೈಯರ್ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಐಪಿಎಲ್‌ನಲ್ಲಿ ಆಡಿದ ಮೊದಲ ಯತ್ನದಲ್ಲೇ ಟೈಟಾನ್ಸ್ ಪ್ರಶಸ್ತಿ ಸುತ್ತಿಗೇರಿತು. ಟೈಟಾನ್ಸ್ ಗೆಲುವಿಗೆ ಕಡೇ ಓವರ್‌ನಲ್ಲಿ 16 ರನ್‌ಗಳ ಅವಶ್ಯಕತೆಯಿತ್ತು. ಕನ್ನಡಿಗ ಪ್ರಸಿದ್ಧ ಕೃಷ್ಣ ಎಸೆದ ಈ ಓವರ್‌ನ ಆರಂಭಿಕ 3 ಎಸೆತಗಳನ್ನೂ ಸಿಕ್ಸರ್‌ಗಟ್ಟಿದ ಡೇವಿಡ್ ಮಿಲ್ಲರ್ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್, ಜೋಸ್ ಬಟ್ಲರ್ (89 ರನ್, 56 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಸಂಜು ಸ್ಯಾಮ್ಸನ್ (47 ರನ್, 26 ಎಸೆತ, 5 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 188 ರನ್ ಪೇರಿಸಿತು. ಪ್ರತಿಯಾಗಿ ಗುಜರಾತ್ 19.3 ಓವರ್‌ಗಳಲ್ಲಿ 3 ವಿಕೆಟ್‌ಗೆ 191 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ರಾಯಲ್ಸ್ ಗೆಲುವು ಕಸಿದ ಪಾಂಡ್ಯ-ಮಿಲ್ಲರ್: ಎರಡನೇ ಎಸೆತದಲ್ಲೇ ವೃದ್ಧಿಮಾನ್ ಸಾಹ (0) ವಿಕೆಟ್ ಕಬಳಿಸಿ ಟೈಟಾನ್ಸ್‌ಗೆ ರಾಜಸ್ಥಾನದ ವೇಗಿ ಟ್ರೆಂಟ್ ಬೌಲ್ಟ್ ಒತ್ತಡ ಹೇರಿದರು. ಆರಂಭಿಕ ಶುಭಮಾನ್ ಗಿಲ್ (35) ಹಾಗೂ ಮ್ಯಾಥ್ಯೂ ವೇಡ್ (35) ಬಿರುಸಿನ ಬ್ಯಾಟಿಂಗ್‌ನಿಂದ 2ನೇ ವಿಕೆಟ್‌ಗೆ 72ರನ್ ಕಲೆಹಾಕಿ ತಂಡಕ್ಕೆ ಚೇತರಿಕೆ ನೀಡಿತು. ಇಬ್ಬರ ನಡುವೆ ಉಂಟಾದ ಗೊಂದಲದಿಂದಾಗಿ ಗಿಲ್ ರನೌಟ್ ಬಲೆಗೆ ಬಿದ್ದರೆ, ಬೆನ್ನಲ್ಲೇ ಮೆಕ್‌ಕಾಯ್‌ಗೆ ವೇಡ್ ವಿಕೆಟ್ ಒಪ್ಪಿಸಿದರು. ಆಗ ಜತೆಯಾದ ಹಾರ್ದಿಕ್-ಮಿಲ್ಲರ್ ರಾಜಸ್ಥಾನ ಬೌಲರ್‌ಗಳಿಗೆ ತಿರುಗೇಟು ನೀಡಿದರು. ಈ ಜೋಡಿ ಮುರಿಯದ 4ನೇ ವಿಕೆಟ್‌ಗೆ 61 ಎಸೆತಗಳಲ್ಲಿ 106 ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts