More

  ಜನಾರ್ದನ ರೆಡ್ಡಿ ಅವರಿಂದ ಬೆದರಿಕೆ ತಂತ್ರ : ಶಾಸಕ ಸೋಮಶೇಖರ ರೆಡ್ಡಿ ಆರೋಪ

  ಬಳ್ಳಾರಿ: ನನಗೆ ಬೇರೆಯವರ ರೀತಿಯಲ್ಲಿ ಬ್ಲಾಕ್‌ಮೇಲ್ ರಾಜಕೀಯ ಮಾಡುವುದು ಗೊತ್ತಿಲ್ಲ. ಜನಾರ್ದನ ರೆಡ್ಡಿ ನಮ್ಮ ಪಕ್ಷದ ಕಾರ್ಯಕರ್ತರನ್ನು, ಪಾಲಿಕೆ ಸದಸ್ಯರನ್ನು ಬೆದರಿಕೆ ಹಾಕಿ ತಮ್ಮ ಪಕ್ಷಕ್ಕೆ ಕರೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಆರೋಪಿಸಿದರು.

  ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನಮ್ಮನ್ನು ಕೈ ಬಿಟ್ಟಿರಬಹುದು ಆದರೆ ದೇವರು ಕೈ ಬಿಟ್ಟಿಲ್ಲ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಮಲ ಅರಳುತ್ತದೆ ಎಂದು ಟಾಂಗ್ ನೀಡಿದರು. ಕೆಆರ್‌ಪಿಪಿ ಅಭ್ಯರ್ಥಿಗೆ ಸೋಲಿನ ಭಯ ಕಾಡುತ್ತಿದೆ. ಹಾಗಾಗಿ ಕೆಲ ಕಾಂಗ್ರೆಸ್ ಹಿರಿಯ ನಾಯಕರು ಅವರಿಗೆ ಸಪೋರ್ಟ್ ನೀಡುತ್ತಿದ್ದಾರೆ. ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅಡ್ಜೆಸ್ಟ್‌ಮೆಂಟ್ ರಾಜಕೀಯ ನನಗೆ ಗೊತ್ತಿಲ್ಲ. ನಾನು ಸಾಯುವ ವರೆಗೆ ಬಿಜೆಪಿಯಲ್ಲಿಯೇ ಇರುತ್ತೇನೆ. ಮೃತಪಟ್ಟರೂ ಬಿಜೆಪಿ ಬಾವುಟವನ್ನು ಹೊದಿಸುವಂತೆ ಮನೆಯ ಸದಸ್ಯರಿಗೆ ತಿಳಿಸಿದ್ದೇನೆ ಎಂದರು.

  ಹೆಲಿಕಾಪ್ಟರ್‌ನಲ್ಲಿ ಅಡ್ಡಾಡುವವರು ರಸ್ತೆ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ. ಹಣ ಇದ್ದವರು ಅಬ್ಬರ ಮಾಡುತ್ತಿದ್ದಾರೆ. ನಾವು ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಕಳೆದ ಮೂರುವರೆ ವರ್ಷದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ನಾನು ಕೆಎಂಎಫ್ ಅಧ್ಯಕ್ಷರಾಗಿದ್ದ ವೇಳೆ ರೈತರಿಗೆ ಹಾಲಿನ ಪ್ರೋತ್ಸಾಹ ಧನವನ್ನು 2 ರೂ. ನೀಡಿದ್ದು ಇತಿಹಾಸ. ಅದರಂತೆ ಪ್ರಸಕ್ತ ಪ್ರಣಾಳಿಕೆಯಲ್ಲಿಯೂ ಪ್ರತಿ ಮನೆಗೆ ಅರ್ಧ ಲೀಟರ್ ಹಾಲು ನೀಡುವುದಾಗಿ ನಮ್ಮ ಪಕ್ಷ ಘೋಷಣೆ ಮಾಡಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts